ಪಹಲ್ಗಾಂ ದಾಳಿ ಖಂಡಿಸಿ ಪಂಜಿನ ಮೆರವಣಿಗೆ

| Published : May 04 2025, 01:30 AM IST

ಸಾರಾಂಶ

ಸುಂದರ ಕನಸು ಕಾಣುತ್ತಿದ್ದ ಅನೇಕ ಪ್ರವಾಸಿಗರು ಉಗ್ರರ ದಾಳಿಗೆ ಪ್ರಾಣ ತೆತ್ತಿದ್ದು, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂಘ ಪರಿವಾರದ ಮುಖಂಡ ಶಿವಾನಂದ ಗಾಯಕವಾಡ ಸಂತಾಪ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸುಂದರ ಕನಸು ಕಾಣುತ್ತಿದ್ದ ಅನೇಕ ಪ್ರವಾಸಿಗರು ಉಗ್ರರ ದಾಳಿಗೆ ಪ್ರಾಣ ತೆತ್ತಿದ್ದು, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂಘ ಪರಿವಾರದ ಮುಖಂಡ ಶಿವಾನಂದ ಗಾಯಕವಾಡ ಸಂತಾಪ ವ್ಯಕ್ತಪಡಿಸಿದರು.

ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಹೇಯ ಕೃತ್ಯ ಖಂಡಿಸಿ ರಬಕವಿ ನಗರದ ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದ ನಂತರ ಅವರು ಮಾತನಾಡಿದರು. ಹಿಂದುಪರ ಸಂಘಟನೆಯ ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ಉಗ್ರರ ದಾಳಿಗೆ ಪ್ರಾಣತೆತ್ತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ನಡೆಸಿದ ಈ ಪಂಜಿನ ಮೆರವಣಿಗೆ ಹಿಂದೂ ಸಮಾಜದ ಒಗ್ಗಟ್ಟಿನ ಪ್ರದರ್ಶನ. ಪಾಕಿಸ್ತಾನ ನೇರವಾಗಿ ಯುದ್ಧ ಮಾಡಲು ಧೈರ್ಯವಿಲ್ಲದೆ ಇಂತಹ ನೀಚ ಕೃತ್ಯಗಳನ್ನು ನಡೆಸುತ್ತಿದೆ. ಭಯೋತ್ಪಾದನೆಯಿಂದ ಕಾಶ್ಮೀರ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹುನ್ನಾರ ನಡೆಸುತ್ತಿದೆ. ಇದು ಎಂದಿಗೂ ಸಾಧ್ಯವಿಲ್ಲ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಪ್ರಮುಖರಾದ ವಿರುಪಾಕ್ಷಯ್ಯ ಮಠದ, ಸುನೀಲ ಸಿಕ್ಕಲಗಾರ, ಮಾರುತಿ ಗಾಡಿವಡ್ಡರ, ಮಹಾದೇವ ಜಾದವ, ಬಸವರಾಜ ಪೂಜಾರಿ, ಮಹಾದೇವ ಬಿಸನಾಳ, ಮಹಾದೇವ ಆಲಕನೂರ, ವಿಜಯ ಹತಪಕ್ಕಿ, ಯಲ್ಲಪ್ಪ ಕಟಗಿ, ಧರೆಪ್ಪ ಉಳ್ಳಾಗಡ್ಡಿ, ಹನಮಂತ ಹಿಪ್ಪರಗಿ, ಪಾಂಡು ಈರಣ್ಣವರ, ಸುಭಾಷ ಭಜಂತರಿ, ಗಣೇಶ ಸುಡಾಳ, ನಾಗಪ್ಪ ಹನಗಂಡಿ, ಮಹಾದೇವ ದೂಪದಾಳ, ದೀಪಕ ಗೋಟೆ, ಮಹಾಂತೇಶ ಖವಾಸಿ ಸೇರಿದಂತೆ ಅನೇಕರಿದ್ದರು.ಸ್ಥಳೀಯ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಿಂದ ಪ್ರಾರಂಭವಾದ ಮೆರವಣಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಬೃಹತ್ ಸಭೆಯೊಂದಿಗೆ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ನೂರಾರು ಪುರುಷರು ಹಾಗೂ ಮಹಿಳಾ ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಪಾಕಿಸ್ತಾನ ವಿರುದ್ಧ ಘೋಷಣೆ ಮೊಳಗಿದವು.