ಸಾರಾಂಶ
ತಾಲೂಕಿನ ಆಲತ್ತೂರು, ದೇಶಿಪುರ, ಬರಗಿ ಸುತ್ತಮುತ್ತ ಶನಿವಾರ ಹಾಗೂ ಭಾನುವಾರ ಸಂಜೆ ಧಾರಾಕಾರ ಮಳೆ ಬಿದ್ದು, ಜಮೀನಿನ ಹಳ್ಳಕೊಳ್ಳ ಹಾಗೂ ಕೆರೆ ಕಟ್ಟೆಗಳಲ್ಲಿ ನೀರು ಹರಿದಾಡಿದೆ. ಆಲತ್ತೂರು, ಬರಗಿ, ಹೊಂಗಳ್ಳಿ, ಚನ್ನಮಲ್ಲಪುರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ತಾಸು ಗಟ್ಟಲೇ ಸುರಿದ ಮಳೆಗೆ ಸಣ್ಣ, ಪುಟ್ಟ ಕೆರೆ, ಕಟ್ಟೆಗಳಿಗೆ ನೀರು ಬಂದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಆಲತ್ತೂರು, ದೇಶಿಪುರ, ಬರಗಿ ಸುತ್ತಮುತ್ತ ಶನಿವಾರ ಹಾಗೂ ಭಾನುವಾರ ಸಂಜೆ ಧಾರಾಕಾರ ಮಳೆ ಬಿದ್ದು, ಜಮೀನಿನ ಹಳ್ಳಕೊಳ್ಳ ಹಾಗೂ ಕೆರೆ ಕಟ್ಟೆಗಳಲ್ಲಿ ನೀರು ಹರಿದಾಡಿದೆ. ಆಲತ್ತೂರು, ಬರಗಿ, ಹೊಂಗಳ್ಳಿ, ಚನ್ನಮಲ್ಲಪುರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ತಾಸು ಗಟ್ಟಲೇ ಸುರಿದ ಮಳೆಗೆ ಸಣ್ಣ, ಪುಟ್ಟ ಕೆರೆ, ಕಟ್ಟೆಗಳಿಗೆ ನೀರು ಬಂದಿದೆ.ಜಮೀನಿನ ಓಣಿಗಳಲ್ಲಿ ಮಳೆಯ ನೀರು ಚಿಕ್ಕ ಕಾಲುವೆಯಂತೆ ಹೋಗುತ್ತಿತ್ತು. ಹಲವು ರೈತರ ಜಮೀನಿನಲ್ಲಿ ಬೆಳೆದಿದ್ದ ಸೂರ್ಯಕಾಂತಿ, ಹತ್ತಿ, ಕಡ್ಲೆ, ಹೊಗೆ ಸೊಪ್ಪು ಸೇರಿದಂತೆ ತರಕಾರಿ ಫಸಲು ಮಳೆಗೆ ನಾಶವಾಗಿದೆ ಎಂದು ಆಲತ್ತೂರು ಟಿ.ಶಾಂತೇಶ್ ಕನ್ಮಡಪ್ರಭಕ್ಕೆ ತಿಳಿಸಿದರು.
ಹೊಂಗಳ್ಳಿ ಬಳಿಯ ಮೊಗೆಕೆರೆ, ಚನ್ನಪ್ಪನಕಟ್ಟೆಯಲ್ಲಿ ಮಳೆ ನೀರು ಬಂದು ಕೋಡಿ ಬಿದ್ದಿದೆ. ಬರಗಿ ಕೆರೆ ತುಂಬಲು ಇನ್ನೆರಡು ಅಡಿ ನೀರು ಬರಬೇಕು ಎಂದು ಹೊಂಗಳ್ಳಿ ಗ್ರಾಮದ ಅಭಿ ಹೇಳಿದರು. ಭಾನುವಾರ ಸಂಜೆ ಬಿದ್ದ ಮಳೆಗೆ ತಾಲೂಕಿನ ಗೋಪಾಲಪುರ ಸುತ್ತ ಮುತ್ತ ಹಳ್ಳ, ಕೊಳ್ಳಗಳಲ್ಲಿ ಮಳೆಯ ನೀರು ಹರಿದು ಜಮೀನಿನಲ್ಲಿ ನಿಂತಿವೆ.ರೈತರಿಗೆ ನಷ್ಟ: ಮಳೆ ರಭಸಕ್ಕೆ ಈರುಳ್ಳಿ, ಅರಿಶಿನ, ಹತ್ತಿ ಪೈರು ನಷ್ಟ ಉಂಟು ಮಾಡಿದೆ ಎಂದು ರೈತರು ದೂರಿದ್ದಾರೆ. ಶುಕ್ರವಾರವು ಸಹ ಸಂಜೆ ಬೇಗೂರು ಸುತ್ತ ಮುತ್ತಲೂ ಧಾರಾಕಾರ ಮಳೆ ಸುರಿದು ಹೆದ್ದಾರಿಯಲ್ಲಿ ಮಳೆಯ ನೀರು ಹರಿದಿತ್ತು.
ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಬಳಿ ಜಮೀನಿನ ಬದಿಯಿಂದ ಮಳೆಯ ನೀರು ಹಳ್ಳಕ್ಕೆ ಹರಿಯುತ್ತಿದೆ.