ತರೀಕೆರೆ, ಶೃಂಗೇರಿಯಲ್ಲಿ ಧಾರಾಕಾರ ಮಳೆ

| Published : Aug 30 2024, 01:00 AM IST

ಸಾರಾಂಶ

ತರೀಕೆರೆ: ಕಳೆದ ನಾಲ್ಕೈದು ದಿವಸಗಳಿಂದ ದಟ್ಟ ಮೋಡ, ಬಿಸಿಲು ಮತ್ತು ಸೆಕೆ ವಾತಾವರಣದಿಂದ ಕೂಡಿದ್ದ ಪಟ್ಟಣದಲ್ಲಿ ಗುರುವಾರ ಬೆಳಗಿನಿಂದ ಮೋಡ ಕವಿದಿದ್ದು, ಸಾಯಂಕಾಲ 3-30 ರಿಂದ ಮುಕ್ಗಾಲು ಗಂಟೆಗೂ ಹೆಚ್ಚು ಸಮಯ ಧಾರಾಕಾರವಾಗಿ ಮಳೆ ಸುರಿಯಿತು.

ತರೀಕೆರೆ: ಕಳೆದ ನಾಲ್ಕೈದು ದಿವಸಗಳಿಂದ ದಟ್ಟ ಮೋಡ, ಬಿಸಿಲು ಮತ್ತು ಸೆಕೆ ವಾತಾವರಣದಿಂದ ಕೂಡಿದ್ದ ಪಟ್ಟಣದಲ್ಲಿ ಗುರುವಾರ ಬೆಳಗಿನಿಂದ ಮೋಡ ಕವಿದಿದ್ದು, ಸಾಯಂಕಾಲ 3-30 ರಿಂದ ಮುಕ್ಗಾಲು ಗಂಟೆಗೂ ಹೆಚ್ಚು ಸಮಯ ಧಾರಾಕಾರವಾಗಿ ಮಳೆ ಸುರಿಯಿತು.

ಧಾರಾಕಾರ ಮಳೆಯಿಂದ ರಸ್ತೆ ಚರಂಡಿಗಳಲ್ಲಿ ಯಥೇಚ್ಚವಾಗಿ ನೀರು ತುಂಬಿ ಹರಿಯಿತು.ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿ, ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿತು. ಮಳೆಯಿಂದಾಗಿ ವಾತಾವರಣ ತಂಪಾಗಿದೆ.

ಶೃಂಗೇರಿ ತಾಲೂಕಿನಲ್ಲಿ ಮುಂದುವರಿದ ಮಳೆ: ಶೃಂಗೇರಿ: ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಮಳೆ ಆರ್ಭಟ ಮುಂದುವರಿದಿದ್ದು ಗುರುವಾರವೂ ತಾಲೂಕಿನೆಲ್ಲೆಡೆ ಗಾಳಿ ಸಹಿತ ಉತ್ತಮ ಮಳೆ ಸುರಿಯಿತು. ಬುಧವಾರ ರಾತ್ರಿಯಿಡೀ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಭಾರೀ ಮಳೆಯಾಗಿದೆ. ಗುರುವಾರ ಸಂಜೆಯವರೆಗೂ ಮಳೆ ಅಬ್ಬರ ಮುಂದುವರಿಯಿತು. ತುಂಗಾ ನದಿಯಲ್ಲಿ ಮತ್ತೆ ನೀರಿನ ಮಟ್ಟ ಏರಿಕೆಯಾಗಿದ್ದು ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿತ್ತು. ಇದೇ ರೀತಿ ಮಳೆ ಮುಂದುವರಿದಲ್ಲಿ ತುಂಗಾ ನದಿಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಲಿದೆ.29ಕೆಟಿಆರ್.ಕೆ.10ಃ ತರೀಕೆರೆಯಲ್ಲಿ ಧಾರಾಕಾರ ಮಳೆ ಸುರಿಯಿತು.