ಧಾರಾಕಾರ ಮಳೆ: ರೈತನ ಕೈಹಿಡಿದ ವರುಣ ದೇವ..!

| Published : May 24 2024, 12:45 AM IST

ಸಾರಾಂಶ

ಕಳೆದ ಮೂರ್ನಾಲ್ಕು ತಿಂಗಳಿಂದ ಬಿಸಿಲಿನ ತಾಪ ಹೆಚ್ಚಾಗಿದೆ. ಜನಜಾನುವಾರುಗಳಿಗೆ ನೀರಿಲ್ಲದೆ, ಬೋರ್ವೆಲ್ಗಳೆಲ್ಲ ಬತ್ತಿ ಹೋಗಿದ್ದವು, ಬುಧವಾರ ರಾತ್ರಿ ಬಿದ್ದ ಧಾರಾಕಾರ ಮಳೆಗೆ ತಾಯೂರು ಗ್ರಾಪಂಗೆ ಸೇರಿದ ಈಶ್ವರಗೌಡನಹಳ್ಳಿ ಕೆರೆಗಳು ಒಂದೇ ರಾತ್ರಿಯಲ್ಲಿ ತುಂಬಿದೆ. ಈ ಕ್ಷೇತ್ರದಲ್ಲಿ ರೈತರು ಹೊಲಗದ್ದೆಗಳಲ್ಲಿ ಬಿತ್ತನೆ ಕಾರ್ಯದಲ್ಲಿ ಸಂತೋಷವಾಗಿ ತೊಡಗಿದ್ದಾರೆ. ರೈತರು ಅಲ್ಪಸಲ್ಪ ಬೆಳೆಗಳು, ಮಳೆಯಿಂದ ಜೀವ ತುಂಬಿಕೊಂಡಿವೆ.

ಸುತ್ತೂರು ನಂಜುಂಡ ನಾಯಕ

ಕನ್ನಡಪ್ರಭ ವಾರ್ತೆ ಸುತ್ತೂರು

ನಂಜನಗೂಡು ತಾಲೂಕಿನಲ್ಲಿ ಬುಧವಾರ ರಾತ್ರಿ ಬಿದ್ದ ಧಾರಾಕಾರ ಮಳೆಗೆ ಕೆರೆಗಳು ತುಂಬಿದ್ದು, ಗ್ರಾಮಸ್ಥರು, ರೈತರಿಂದ ಬಾಗಿನ ಅರ್ಪಿಸಲಾಯಿತು.

ಗ್ರಾಮಸ್ಥರು, ರೈತರು ಮಾತನಾಡಿ, ಕಳೆದ ಮೂರ್ನಾಲ್ಕು ತಿಂಗಳಿಂದ ಬಿಸಿಲಿನ ತಾಪ ಹೆಚ್ಚಾಗಿದೆ. ಜನಜಾನುವಾರುಗಳಿಗೆ ನೀರಿಲ್ಲದೆ, ಬೋರ್ವೆಲ್ಗಳೆಲ್ಲ ಬತ್ತಿ ಹೋಗಿದ್ದವು, ಬುಧವಾರ ರಾತ್ರಿ ಬಿದ್ದ ಧಾರಾಕಾರ ಮಳೆಗೆ ತಾಯೂರು ಗ್ರಾಪಂಗೆ ಸೇರಿದ ಈಶ್ವರಗೌಡನಹಳ್ಳಿ ಕೆರೆಗಳು ಒಂದೇ ರಾತ್ರಿಯಲ್ಲಿ ತುಂಬಿದೆ.

ಈ ಕ್ಷೇತ್ರದಲ್ಲಿ ರೈತರು ಹೊಲಗದ್ದೆಗಳಲ್ಲಿ ಬಿತ್ತನೆ ಕಾರ್ಯದಲ್ಲಿ ಸಂತೋಷವಾಗಿ ತೊಡಗಿದ್ದಾರೆ. ರೈತರು ಅಲ್ಪಸಲ್ಪ ಬೆಳೆಗಳು, ಮಳೆಯಿಂದ ಜೀವ ತುಂಬಿಕೊಂಡಿವೆ. ಅಲ್ಲದೆ ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದೆ. ಈಶ್ವರಗೌಡನಹಳ್ಳಿ ಕೆರೆ ತುಂಬಿದ ನೀರನ್ನು

ಸುತ್ತಮುತ್ತ ಗ್ರಾಮಗಳ ಮದುವೆ ಶುಭಾರಂಭಗಳಿಗೆ, ದೇವರು ಪೂಜೆಗೆ ಬಳಸಿಕೊಳ್ಳಲು ಅನುಕೂಲವಾಯಿತು ಎಂದು ರೈತ ಮುಖಂಡ ರೇವಣ್ಣ ತಿಳಿಸಿದರು.

ಕೆರೆಗೆ ಬಾಗಿಯ ಅರ್ಪಿಸುವ ವೇಳೆ ಗ್ರಾಮದ ಮುಖಂಡರಾದ ಬಸವಣ್ಣ, ಶಿವಣ್ಣ, ನಿಂಗರಾಜು, ಶೇಖರ, ಚಂದ್ರಪ್ಪ, ನಂಜುಂಡ, ಕರಿಸ್ವಾಮಿ, ಪುಟ್ಟಸ್ವಾಮಿ, ಮನೋಜ್ ಕುಮಾರ್, ತಾಯೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮುಖಂಡರು, ರೈತ ಮುಖಂಡರು ಭಾಗವಹಿಸಿದ್ದರು.ಭಾರಿ ಮಳೆಗೆ ಹಾಸನ, ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ಹಲಗನಹಳ್ಳಿ ಕೆರೆ ಏರಿ ಮೇಲೆ ಬಿರುಕುಕನ್ನಡಪ್ರಭ ವಾರ್ತೆ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವಾರು ಅನಾಹುತಗಳು ಸಂಭವಿಸಿದ್ದು, ಇದೀಗ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಹಾಸನ, ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ಹಲಗನಹಳ್ಳಿ ಕೆರೆ ಏರಿ ಮೇಲೆ ಬಿರುಕು ಬಿಟ್ಟಿದೆ.

ತಹಸೀಲ್ದಾರ್ ಸುರೇಂದ್ರ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಪರಿಶೀಲಿಸಿದರು. ಹೆದ್ದಾರಿ ಸಂಚಾರಕ್ಕೆ ಬ್ಯಾರಿಕೇಡ್ ಅಳವಡಿಸಿ ಒಂದೆಡೆ ಸಂಚರಿಸುವಂತೆ ಪೊಲೀಸರ ಸೂಚಿಸಿದ್ದಾರೆ.ಬಿರುಕು ಬಿಟ್ಟ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ, ಗ್ರಾಪಂ ಅಧ್ಯಕ್ಷರು, ಸದಸ್ಯ ಭೇಟಿ ನೀಡಿದ್ದರು.

ಸ್ಥಳೀಯರಿಂದ ಬಿರುಕು ಬಿಟ್ಟ ಜಾಗವನ್ನು ತಕ್ಷಣವೇ ದುರಸ್ತಿಪಡಿಸುವಂತೆ ಆಗ್ರಹಿಸಿದರು.ಇಂದಿನಿಂದಲೇ ಕಾಮಗಾರಿ ಆರಂಭಿಸಿ ಬಿರುಕು ಬಿಟ್ಟ ಜಾಗವನ್ನು ದುರಸ್ತಿಪಡಿಸಲಾಗುದು ಎಂದು ತಹಸೀಲ್ದಾರ್ ಸುರೇಂದ್ರ ಮೂರ್ತಿ ತಿಳಿಸಿದರು. ಎಸ್ಐ ಪ್ರಕಾಶ್ ಎಂ. ಯತ್ತಿನಮನಿ ಗ್ರಾಪಂ ಸದಸ್ಯ ಸೊಹೀಲ್ ಪಾಷಾ, ಸೈಯದ್ ಸುಲ್, ಇಮ್ರಾನ್ ಪಾಷಾ, ಗ್ರಾಪಂ ನೌಕರರು ಇದ್ದರು.

ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿತ:

ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರುಕನ್ನಡಪ್ರಭ ವಾರ್ತೆ ಭೇರ್ಯಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಮೀಪದ ಮುಂಜನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಗ್ರಾಮದ ನಾಗಮ್ಮ ಲೇಟ್ ನಾಗೇಂದ್ರನಾಯಕ ಎಂಬವರ ಮನೆಯಾಗಿದ್ದು, ಈ ಘಟನೆಯಿಂದ ಮನೆಯಲ್ಲಿ ಬೆಲೆ ಬಾಳುವ ಸಾಮಾಗ್ರಿಗಳು ಸೇರಿದಂತೆ ಶೇಖರಣೆ ಮಾಡಿದ್ದ ವಿವಿಧ ಧಾನ್ಯಗಳು ನೀರು, ಮಣ್ಣು ಪಾಲಾಗಿದ್ದು, ಲಕ್ಷಾಂತರ ರು. ನಷ್ಟ ಉಂಟಾಗಿದೆ. ಕುಟುಂಬಸ್ಥರು ವಾಸ ಮಾಡಲು ಮನೆ ಇಲ್ಲದೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ವಿಷಯ ತಿಳಿದ ಗ್ರಾಪಂ ಸದಸ್ಯ ಮಹದೇವ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರ ಕೂಡಲೇ ಈ ಕುಟುಂಬಕ್ಕೆ ಪರಿಹಾರ ನೀಡಿ ಜೊತೆಗೆ ಆಶ್ರಯ ಮನೆ ನೀಡುವಂತೆ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಒತ್ತಾಯಿಸಿದರು.