ಸಾರಾಂಶ
ಶಹಾಪುರ: ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು, ರಭಸಕ್ಕೆ 300 ಎಕರೆಗೂ ಹೆಚ್ಚು ಭತ್ತದ ಬೆಳೆ ಸೇರಿ ಹತ್ತಿ, ತೊಗರಿ ಫಲ ಉದುರಿ ರೈತರಿಗೆ ತೀವ್ರ ನಷ್ಟ ಉಂಟಾಗಿದೆ.
ಸುಮಾರು ಅರ್ಧಗಂಟೆ ಭಾರೀ ರಭಸದ ಮಳೆಯಾಗಿದ್ದು, ಸಗರ ಭಾಗದ ಶಾರದಹಳ್ಳಿ ಗ್ರಾಮದಲ್ಲಿ ಒಟ್ಟು ೨ ಸಾವಿರ ಎಕರೆ ಬೆಳೆ ಪೈಕಿ 1 ಸಾವಿರದಿಂದ1200 ಎಕರೆ ಪ್ರದೇಶದ ಭತ್ತ ಬೆಳೆಯಲಾಗಿದೆ. ಗಾಳಿ ಸಹಿತ ಮಳೆಗೆ 300 ರಿಂದ 350 ಎಕರೆ ಭತ್ತದ ಬೆಳೆ ಧರೆಗುರುಳಿದೆ. ಅಲ್ಲದೆ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲೂ ಬೆಳೆ ಹಾನಿ ಉಂಟಾಗಿದೆ.
ಎಕರೆಗೆ 25 ರಿಂದ 35 ಚೀಲ ಭತ್ತ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಭರ ಸಿಡಿಲು ಬಡಿದಂತಾಗಿದೆ. ಇನ್ನು 15 ದಿನದಲ್ಲಿ ಭತ್ತದ ಬೆಳೆ ಕಟಾವ್ ಮಾಡುವ ತಯಾರಿಯಲ್ಲಿದ್ದೆವು. ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿದ್ದೇವೆ. ಈಗೇನು ಮಾಡುವುದು ತೋಚದಂತಾಗಿದೆ ಎಂದು ರೈತ ಶರಣಪ್ಪ ತಮ್ಮ ಸಂಕಷ್ಟ ತೋಡಿಕೊಂಡರು.77 ಕೆಜಿ ಒಂದು ಚೀಲಕ್ಕೆ 2100 ರು. ಬೆಲೆ ಇದೆ. 1.80 ಕೋಟಿ ರು. ಬೆಳೆ ಹಾನಿಯಾಗಿದೆ ಎನ್ನುತ್ತಾರೆ ಗ್ರಾಮದ ರೈತ ಮರೆಪ್ಪ ನಾಯಕ. ಕೆಲವು ವ್ಯಾಪಾರಸ್ಥರು ಇಲ್ಲಿಗೇ ಬಂದು ಭತ್ತ ಖರೀದಿಸುತ್ತಾರೆ. ಮಳೆಯಿಂದ ತೀವ್ರ ಸಂಕಷ್ಟಕ್ಕೆ ಸಿಲಿಕಿದ್ದೇವೆ ಎಂದು ರೈತ ನಿಂಗಪ್ಪ ಪೂಜಾರಿ ತಿಳಿಸಿದರು.
ಬೆಳೆ ಕೈ ಸೇರುವ ಹೊತ್ತಿಗೆ ಬೆಳೆ ಹಾನಿಯಾಗಿ ರೈತರ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ರೈತರ ಸಮಸ್ಯೆ ಬಗ್ಗೆ ವಿಶೇಷ ಕಾಳಜಿ ವಹಿಸಿ ಪರಿಹಾರ ನೀಡುವಂತೆ ರೈತರ ಮನವಿಯಾಗಿದೆ.----------
ಕೋಟ್ಒಂದು ಎಕರೆಗೆ 30 ರಿಂದ 45 ಸಾವಿರ ರು, ಖರ್ಚು ಮಾಡಿದ್ದೇನೆ. ಐದು ಎಕರೆ ಜಮೀನು ಲೀಸಿಗೆ ಪಡೆದಿದ್ದೇನೆ. ಒಂದು ಎಕರೆಗೆ 16 ಸಾವಿರ ನೀಡಿ ಲೀಸ್ ಪಡೆದಿದ್ದೇನೆ. ಎಲ್ಲಾ ಸೇರಿ 250 ರಿಂದ 300 ಚೀಲ ಇಳುವರಿ ಬರುತ್ತಿತ್ತು. ಈಗ ಮಳೆಗೆ ಧರೆಗುರುಳಿದ್ದು, ಎಕರೆಗೆ 10 ಚೀಲ ಬರುವುದು ಕಷ್ಟವಾಗಿದೆ. ಸಾಲ ಮಾಡಿ ಬೆಳೆ ಬೆಳೆದು ಸಂಕಷ್ಟದಲ್ಲಿದ್ದೇನೆ.
ವೆಂಕಟೇಶ ನಾಯಕ, ಶಾರದಹಳ್ಳಿ ರೈತ. (7ವೈಡಿಆರ್10)----------
ಕೋಟ್ಕೂಲಿ ಮಾಡಿ ಜೀವನ ಸಾಗಿಸುವುದರ ಜೊತೆಗೆ, ಸಾಲ ಮಾಡಿ ಮೂರು ಎಕರೆಯಲ್ಲಿ ಭತ್ತ ಬೆಳೆದಿದ್ದೇನೆ. ಭತ್ತ ಕೈಗೆ ಬರುವ ಮುಂಚೆ ಮಣ್ಣು ಪಾಲಾಗಿದೆ. ಈಗ ಏನು ಮಾಡಬೇಕೆಂದು ತಿಳಿಯದಾಗಿದೆ. ಸರ್ಕಾರ ಪರಿಹಾರ ನೀಡಿದರೆ ಪುಣ್ಯ ಬರ್ತದ.
- ಯಲ್ಲಮ್ಮ ಸಗರ, ಶಾರದಹಳ್ಳಿ ಗ್ರಾಮದ ರೈತ ಮಹಿಳೆ. (7ವೈಡಿಆರ್11)-----------
7ವೈಡಿಆರ್8 ಹಾಗೂ 7ವೈಡಿಆರ್9ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಭಾರೀ ಮಳೆಗೆ ಭತ್ತದ ಮಳೆ ನೆಲಕಚ್ಚಿರುವುದು.
( ಚಿತ್ರ. ಮಂಜುನಾಥ್ ಬಿರಾದಾರ್.)