ಸಾರಾಂಶ
ಭಾನುವಾರ ಎಂದಿನಂತೆ ಮಂಗಳೂರಿನ ಬೀಚ್‌ಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಿಗರ ದಂಡು ಕಂಡುಬಂದಿತು.
ಮಂಗಳೂರು/ಸುಬ್ರಹ್ಮಣ್ಯ: ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಬಳಿಕ ಮೂರು ದಿನ ಬಹುತೇಕ ಸ್ತಬ್ಧವಾಗಿದ್ದ ಮಂಗಳೂರು ನಗರ ಸೇರಿ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸೋದ್ಯಮ, ನಿಷೇಧಾಜ್ಞೆ ತೆರವಾಗುತ್ತಿದ್ದಂತೆಯೇ ಮತ್ತೆ ಮರುಜೀವ ಪಡೆದಿದೆ. ಭಾನುವಾರ ಎಂದಿನಂತೆ ಮಂಗಳೂರಿನ ಬೀಚ್‌ಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಿಗರ ದಂಡು ಕಂಡುಬಂದಿತು.
ಪಣಂಬೂರು, ಉಳ್ಳಾಲ, ತಣ್ಣೀರುಬಾವಿ ಬೀಚ್‌ಗಳಲ್ಲಿ ಪ್ರವಾಸಿಗರು ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಭಾನುವಾರ ಬೆಳಗ್ಗಿನಿಂದ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಾಪಸ್ ಪಡೆಯಲಾಗಿದ್ದು, ಶುಕ್ರವಾರದ ಬಂದ್ ಬಳಿಕ ಮಂಗಳೂರಿನಾದ್ಯಂತ ಪ್ರವಾಸೋದ್ಯಮ, ವ್ಯಾಪಾರ-ವಹಿವಾಟು ಸಹಜ ಸ್ಥಿತಿಗೆ ಮರಳಿದೆ. ಹಾಗೆಯೇ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಹ ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಹಾಗೂ ಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನದ ಹೊತ್ತಿಗೆ ನಾಗ ಪ್ರತಿಷ್ಠಾ ಮಂಟಪದಲ್ಲಿ ಭಕ್ತಾದಿಗಳ ಸರತಿ ಸಾಲು ಇಡೀ ಅಂಗಣವನ್ನೇ ಪಸರಿಸಿತ್ತು.