ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಲಗ್ಗೆ

| Published : Dec 29 2024, 01:16 AM IST

ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಲಗ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

Tourists flock to tourist spots in the district

-ಜೋಗಜಲಪಾತ, ಸಕ್ರೆಬೈಲು ಆನೆ ಬಿಡಾರ, ಸಿಂಹಧಾಮಕ್ಕೆ ಪ್ರವಾಸಿಗರ ದಂಡು । ಪ್ರವಾಸಿ ತಾಣಗಳಿಗೆ ಹರಿದು ಬಂದ ಪ್ರವಾಸಿಗರು

-----

ಕನ್ನಡಪ್ರಭ ವಾರ್ತೆಶಿವಮೊಗ್ಗ

ಕ್ರಿಸ್‌ಮಸ್‌ ವಾರದಲ್ಲಿ ನಾಲ್ಕೈದು ದಿನಗಳವರೆಗೆ ಸಾಲು ಸಾಲು ರಜೆಗಳು ಹಾಗೂ ಹೊಸ ವರ್ಷಚರಣೆ ಪ್ರಯುಕ್ತ ಪ್ರವಾಸಿ ತಾಣಗಳಿಗೆ ಸಾವಿರ ಸಂಖ್ಯೆಯ ಪ್ರವಾಸಿಗರ ದಂಡು ಶಿವಮೊಗ್ಗ ಪ್ರೇಕ್ಷಣೀಯ ಸ್ಥಳಗಳಿಗೆ ಲಗ್ಗೆ ಇಡುತ್ತಿದೆ.

ವಿಶ್ವಪ್ರಸಿದ್ದ ಜೋಗ ಜಲಪಾತದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ನಡುವೆಯೂ ಸಾವಿರಾರು ಮಂದಿ ಪ್ರವಾಸಿಗರು ಜೋಗ ವೀಕ್ಷಣೆ ಮಾಡಿದ್ದಾರೆ. ಶುಕ್ರವಾರ 2300 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರೆ, ಶನಿವಾರ 3600ಕ್ಕೂ ಅಧಿಕ ಮಂದಿ ಪ್ರವಾಸಿಗರು ಜೋಗ ಜಲಪಾತವನ್ನು ವೀಕ್ಷಣೆ ಮಾಡಿದ್ದಾರೆ.

ಪ್ರವಾಸಿಗರು ಭೇಟಿ: ಕೇವಲ ಎರಡೇ ಎರಡು ದಿನಗಳಲ್ಲಿ ತಾವರೆಕೊಪ್ಪ ಸಿಂಹಧಾಮಕ್ಕೆ ಆರು ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲೊಂದಾದ ತಾವರೆಕೊಪ್ಪ ಸಿಂಹಧಾಮಕ್ಕೆ ಕಳೆದ ಎರಡು ದಿನದಲ್ಲಿ ಆರು ಸಾವಿರಕ್ಕೂ ಅಧಿಕ ಜನ ಭೇಟಿ ಕೊಟ್ಟಿದ್ದಾರೆ. ಶುಕ್ರವಾರ ಇಲ್ಲಿಗೆ 2,760 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರೆ, ಶನಿವಾರ 3309 ಮಂದಿ ಪ್ರವಾಸಿಗಳು ಭೇಟಿ ನೀಡಿದ್ದಾರೆ. ಈ ಎರಡು ದಿನದಲ್ಲಿ ಟಿಕೆಟ್‌ದರದಿಂದ ಒಟ್ಟು 11.13 ಲಕ್ಷದಷ್ಟು ಮೊತ್ತ ಸಂಗ್ರಹವಾಗಿದೆ.

ಇನ್ನು ಪ್ರವಾಸಿಗ ಆಕರ್ಷಣಿಯ ತಾಣವಾಗಿರುವ ಸಕ್ರೆಬೈಲು ಆನೆ ಬಿಡಾರಕ್ಕೆ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ. ಶಾಲೆ-ಕಾಲೇಜು ಹಾಗೂ ನೌಕರರಿಗೂ ರಜೆ ಇರುವ ತಮ್ಮ ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ಇಲ್ಲಿಗೆ ಆಗಮಿಸಿ ಆನೆಗಳ ಚಟುವಟಿಕೆಗಳನ್ನು ಕಂಡು ಖುಷಿ ಪಡುತ್ತಿದ್ದ ದೃಶ್ಯವೂ ಕಂಡು ಬಂದಿದೆ.

-----