ಸಾರಾಂಶ
ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ಮಂಗಳೂರು ತಾಲೂಕು ಬಿಲ್ಲವ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ದಸರಾ ಕ್ರೀಡಾಕೂಟ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರುದೈಹಿಕ ಆರೋಗ್ಯ ಕಾಪಾಡುವ ಜತೆಗೆ ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು ಕ್ರೀಡಾಕೂಟಗಳು ಬಹಳ ಅಗತ್ಯ ಎಂದು ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.ನಗರದ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ಮಂಗಳೂರು ತಾಲೂಕು ಬಿಲ್ಲವ ಸಂಘದ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಅಗತ್ಯ. ಈ ನಿಟ್ಟಿನಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯವಂತರಾಗಿ ಇರುತ್ತಾರೆ. ದಸರಾ ಕ್ರೀಡಾಕೂಟದ ಮೂಲಕ ಸಾಕಷ್ಟು ಹೊಸ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದರು.ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಕ್ರೀಡಾಕೂಟಗಳ ಸಂಖ್ಯೆ ಹೆಚ್ಚಿದರೆ ಮಾತ್ರ ಕ್ರೀಡಾಪಟುಗಳು ಹೆಚ್ಚುತ್ತಾರೆ. ದಸರಾ ಕ್ರೀಡಾಕೂಟದ ಮೂಲಕ ಮತ್ತಷ್ಟು ಕ್ರೀಡಾ ಪ್ರತಿಭೆಗಳು ಹೊರಬರಲಿ ಎಂದರು.ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿದರು. ಚೀಫ್ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್, ಎಂಎಲ್‍ಸಿ ಐವನ್ ಡಿಸೋಜ, ಬಿಲ್ಲವ ಸಮಜದ ಮುಖಂಡ ಮಾಧವ ಸುವರ್ಣ, ಶಾಂತಲಾ ಗಟ್ಟಿ, ಮಂಗಳೂರು ತಾಲೂಕು ಬಿಲ್ಲವ ಸಂಘದ ಜಿತೇಂದ್ರ ಸುವರ್ಣ, ಯುವ ವಾಹಿನಿಯ ಹರೀಶ್, ಜಗನ್ನಾಥ್ ಬಂಗೇರ, ದಯಾನಂದ ಪೂಜಾರಿ ಮತ್ತಿತರರು ಇದ್ದರು.ಕ್ರೀಡೋತ್ಸವದಲ್ಲಿ ಹೈಸ್ಕೂಲ್ ವಿಭಾಗ, ಸೀನಿಯರ್ ವಿಭಾಗದಲ್ಲಿ ವಿವಿಧ ಅಥ್ಲೆಟಿಕ್ಸ್ ಜತೆಗೆ ಕಬಡ್ಡಿ, ಹಗ್ಗಜಗ್ಗಾಟ ನಡೆಯಿತು.