ಮಹಾನ್ ವ್ಯಕ್ತಿಗಳ ಆದರ್ಶ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು
ಕುಷ್ಟಗಿ: ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸದೃಢ ಸಮಾಜದ ನಿರ್ಮಾಣಕ್ಕೆ ಪಾತ್ರರಾಗಬೇಕು ಎಂದು ಮಾಜಿ ಸಚಿವ ಶಿವನಗೌಡ ನಾಯಕ ಹೇಳಿದರು.
ತಾಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ನಡೆದ ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಕನಕದಾಸರ, ಸಂಗೊಳ್ಳಿ ರಾಯಣ್ಣ ಹಾಗೂ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದು ಮೂರ್ತಿ ಅನಾವರಣ ಮಾಡಿರುವ ಮೂರು ಜನರ ಕೊಡುಗೆ ನಾಡಿಗೆ ಅಪಾರವಾಗಿದೆ. ತೆಗ್ಗಿಹಾಳ ಗ್ರಾಮದ ಜನರ ಒಗ್ಗಟ್ಟಿನಿಂದ ಈ ಮಹತ್ಕಾರ್ಯ ನಡೆದಿದ್ದು ಈ ಮೂವರು ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲ. ಅಂತಹ ಮಹಾನ್ ವ್ಯಕ್ತಿಗಳ ಆದರ್ಶ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಸಂವಿಧಾನದಲ್ಲಿ ಎಲ್ಲರಿಗೂ ಸ್ಥಾನಮಾನವಿದ್ದು ಸರಿಯಾಗಿ ಬಳಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದರು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಕೇವಲ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಜಯಂತಿ ಆಚರಿಸಿದರೆ ಸಾಲದು, ಜಾತಿ ಹೆಸರಿನಲ್ಲಿ ಹೊಡೆದಾಡುವುದು ಸರಿಯಲ್ಲ, ಎಲ್ಲ ಸಮುದಾಯಗಳು ಒಂದಾಗಿ ಮಹಾತ್ಮರು ತೋರಿದ ದಾರಿಯಲ್ಲಿ ನಡೆದು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭ್ರಾತೃತ್ವ ಮೆರೆಯುವುದು ಮುಖ್ಯವಾಗಿದೆ. ನಾಡಿಗೆ ಶರಣರ ಮಹಾನ್ ವ್ಯಕ್ತಿ, ದಾರ್ಶನಿಕರು ಕೊಡುಗೆ ಸ್ಮರಿಸುವಂತಾಗಲಿ, ಪ್ರತಿಯೊಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬೆಳೆಯುವ ಮೂಲಕ ಸಮಾಜದವರು ಶಿಕ್ಷಣವಂತರಾಗಿ ಹೊರ ಹೊಮ್ಮುಲಿ ಎಂದು ಹೇಳಿದರು.ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ವಿಧಾನಪರಿಷತ್ತಿನ ಸದಸ್ಯೆ ಹೇಮಲತಾ ನಾಯಕ, ಕಾಂಗ್ರೆಸ್ ಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪುರ, ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ವಾಲ್ಮೀಕಿ ಸಮಾಜದ ಅಧ್ಯಕ್ಷ ಮಾನಪ್ಪ ತಳವಾರ, ಮಾಜಿ ಜಿಪಂ ಸದಸ್ಯ ಕೆ.ಮಹೇಶ, ಶರಣು ತಳ್ಳಿಕೇರಿ ಇತರರು ಮಾತನಾಡಿದರು.
ಶಿವಸಿದ್ಧೇಶ್ವರ ಮಹಾಸ್ವಾಮೀಜಿ, ಶ್ರೀಭೀಮಪ್ಪಯ್ಯ, ಸಿದ್ಧರಾಮಾನಂದಪುರಿ ಸ್ವಾಮೀಜಿ, ಮದ್ದಾನೇಶ್ವರ ಮಠದ ಕರಿಬಸವ ಸ್ವಾಮೀಜಿ, ಹುಲಿಹೈದರದ ನವೀಚಂದ್ರನಾಯಕ, ಚಂದ್ರಶೇಖರ ದೇವರು, ಮಾದಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಜು ನಾಯಕ, ಮೂರ್ತಿ ಶಿಲ್ಪಿ ಚಿದಾನಂದ ತಾಕ್ರೆ, ಬಸವರಾಜ ಹಳ್ಳೂರು, ಜಿಪಂ ಮಾಜಿ ಸದಸ್ಯ ಫಕೀರಪ್ಪ ಚಳಗೇರಿ, ಮಾದಿಗ ಸಮಾಜದ ಅಧ್ಯಕ್ಷ ನಾಗರಾಜ ಮೇಲಿನಮನಿ, ಬಿಜೆಪಿ ತಾಲೂಕಾಧ್ಯಕ್ಷ ಮಹಾಂತೇಶ ಬದಾಮಿ, ನಾಗಪ್ಪ ದೋಟಿಹಾಳ, ಭರಮಗೌಡ ಪಾಟೀಲ್, ಮಂಜುನಾಥ ನಾಲಗಾರ, ಬಸಪ್ಪ ಚೌಡ್ಕಿ ಸೇರಿದಂತೆ ಗ್ರಾಮದ ಗಣ್ಯರು ಸಮಾಜದ ಮುಖಂಡರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.