ರಾಜಿ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗಿ

| Published : Mar 11 2025, 12:46 AM IST

ಸಾರಾಂಶ

ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ. ಮಾನವ ನೆಮ್ಮದಿಗಾಗಿ ಬದುಕಲು ಹಣ ಮಾಡಬೇಕು, ವಿನಾಕಾರಣ ಹಣದಿಂದಲ್ಲೇ ಸಂಬಂಧ ಹಾಗೂ ಮನಸ್ಸು ಹಾಳು ಮಾಡಿಕೊಳ್ಳಬಾರದು,

ಕನ್ನಡಪ್ರಭ ವಾರ್ತೆ ಕೋಲಾರರಾಜೀ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು, ಈ ಅದಾಲತ್ ನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ ಹೇಳಿದರು.

ನಗರದ ನ್ಯಾಯಾಲಯ ಆವರಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಬಾಕಿ ಪ್ರಕರಣಗಳ ಇತ್ಯರ್ಥ

ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ. ಮಾನವ ನೆಮ್ಮದಿಗಾಗಿ ಬದುಕಲು ಹಣ ಮಾಡಬೇಕು, ವಿನಾಕಾರಣ ಹಣದಿಂದಲ್ಲೇ ಸಂಬಂಧ ಹಾಗೂ ಮನಸ್ಸು ಹಾಳು ಮಾಡಿಕೊಳ್ಳಬಾರದು, ಸಹಬಾಳ್ವೆಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು, ಸಮಾನತೆ ಹಾದಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಪಠ್ಯದಲ್ಲಿ ಮಹಿಳಾ ಸಾಧಕಿಯರು

ಮಹಿಳಾ ದಿನಾಚರಣೆ ಮಾಡುವ ದೇಶದಲ್ಲಿ ಆ ದೇಶಕ್ಕೆ ಕೊಡುಗೆ ನೀಡಿದ, ಸಮಾಜಕ್ಕೆ ಮಾದರಿ ಮಹಿಳೆಯರ ಸಾಧನೆ ನನೆದು ಗೌರವಿಸಲಾಗುತ್ತದೆ, ಕರ್ನಾಟಕದಲ್ಲಿ ವೀರ ವನಿತೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ವಚನ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದ ಅಕ್ಕಮಹಾದೇವಿ ಹೀಗೆ ಹಲವರ ಕುರಿತಂತೆ ಪಾಠಗಳಿದ್ದು ಅವರ ಕೊಡುಗೆ ಹಾಗೂ ಸಾಧನೆಯ ಸ್ಮರಣೀಯ ಎಂದರು.ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ, ನಿರ್ಮಲಾದೇವಿ, ಪಿ.ಕೆ.ದಿವ್ಯ, ಕೆ.ಬಿ.ಪ್ರಸಾದ್, ಸುನೀಲ ಎಸ್.ಹೊಸಮನಿ, ಎಸ್.ಶಕುಂತಲಾ, ಆರ್.ನಟೇಶ್, ರೆಹಾನ ಸುಲ್ತಾನ, ಎಂ.ವಿ.ಲಕ್ಷ್ಮಿ, ಶ್ರೀನಿವಾಸ ಪಾಟೀಲ್, ಚೇತನ ಆರಿಕಟ್ಟಿ, ಪಿ.ಮದನ್, ಜಿ.ಹರ್ಷ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಉಪಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಎನ್.ಬೈರಾರೆಡ್ಡಿ ಇದ್ದರು.