ಬಿರುಗಾಳಿ ಮಳೆಗೆ ಟವರ್‌, ಚಾವಣಿ ಕುಸಿತ

| Published : Apr 23 2024, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣಪಟ್ಟಣ ಸೇರಿದಂತೆ ತಾಲೂಕಿನ ಸೋಮವಾರ ಸಂಜೆ ಸುರಿದ ಧಾರಾಕಾರ ಬಿರುಗಾಳಿ ಮಳೆ ವಿವಿಧ ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್ ಟವರ್, ಮನೆಯ ಚಾವಣಿ, ನಿಂಬೆ ಮರಗಳು ಧ್ವಂಸವಾಗಿವೆ.

ಕನ್ನಡಪ್ರಭ ವಾರ್ತೆ ಚಡಚಣಪಟ್ಟಣ ಸೇರಿದಂತೆ ತಾಲೂಕಿನ ಸೋಮವಾರ ಸಂಜೆ ಸುರಿದ ಧಾರಾಕಾರ ಬಿರುಗಾಳಿ ಮಳೆ ವಿವಿಧ ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್ ಟವರ್, ಮನೆಯ ಚಾವಣಿ, ನಿಂಬೆ ಮರಗಳು ಧ್ವಂಸವಾಗಿವೆ.

ಚಡಚಣ ತಾಲೂಕಿನ ರೇವತಗಾಂವದಲ್ಲಿ ಬಿರುಗಾಳಿಗೆ ಬಿಎಸ್‌ಎನ್‌ಎಲ್ ಟವರ್ ಬಿದ್ದು ಸುಮಾರು ಐದಾರು ಮನೆಗಳಿಗೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಪಟ್ಟಣದ ದೇವರ ನಿಂಬರಗಿ ಕ್ರಾಸ್ ಬಳಿಯ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ ಕುಸಿದಿದೆ. ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಇದೇ ಅವರಣದಲ್ಲಿರುವ ಜಿ.ಪಿ.ಕಾಲೇಜು ಬಳಿಯ ಫಾರ್ಮಸಿ ಕಾಲೇಜಿನ ಗಾಜುಗಳು ಒಡೆದಿವೆ. ಆರೀಫ್ ಕೊತ್ವಾಲ್ ಎಂಬುವರಿಗೆ ಸೇರಿದ 40ಕ್ಕೂ ಹೆಚ್ಚು ಪತ್ರಾಸ್ ಶೆಡ್‌ಗಳು ಹಾರಿ ಹೋಗಿವೆ.

ಸಮೀಪದ ಟಾಟಾ ಮೋಟಾರ್ಸ್ ತಡೆಗೋಡೆ ಕುಸಿದು ಒಳಗಿದ್ದ ವಾಹನಗಳಿಗೆ ಹಾನಿಯಾಗಿದೆ. ಸಂಗೊಳ್ಳಿ ರಾಯಣ್ಣ ವೃತ್ತದ ಧ್ವಜ ಕಂಬವೂ ಬಿದ್ದು, ಪಟ್ಟಣದ ಎಂಇಎಸ್ ಕೈಗಾರಿಕಾ ತರಬೇತಿ ಕೇಂದ್ರದ ಚಾವಣಿ ಹಾರಿ ಹೋಗಿದೆ. ಪಟ್ಟಣದ ಹೊರವಲಯದ ವಿನಾಯಕ ಡೈಟನ್ ಎಂಬುವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿದ್ದ ನಿಂಬೆ ಮರಗಳು ನಾಶವಾಗಿವೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ರಾಜೇಶ ಬುರ್ಲಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ವೃತ್ತ ಪಂಡಿತ ಕೋಡಹೊನ್ನ, ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಕೋಳಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.