ಆ.6 ರಂದು ದಿ.ವಿ. ಶ್ರೀನಿವಾಸಪ್ರಸಾದ್‌ ಹುಟ್ಟುಹಬ್ಬ

| Published : Jul 31 2025, 12:45 AM IST

ಆ.6 ರಂದು ದಿ.ವಿ. ಶ್ರೀನಿವಾಸಪ್ರಸಾದ್‌ ಹುಟ್ಟುಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಐದು ದಶಕಗಳಿಗೂ ಹೆಚ್ಚು ಕಾಲ ಮೈಸೂರು- ಚಾಮರಾಜನಗರ ಭಾಗದಲ್ಲಿ ತಮ್ಮ ಜನ ಸೇವೆ ಮೂಲಕ ಜನರ ಮನಸ್ಸಿನಲ್ಲಿ ಉಳಿದಿರುವ ಮಾಜಿ ಕೇಂದ್ರ ಸಚಿವರೂ ಆಗಿದ್ದ ವಿ. ಶ್ರೀನಿವಾಸಪ್ರಸಾದ್ಅವರ ಹುಟ್ಟುಹಬ್ಬ

ಕನ್ನಡಪ್ರಭ ವಾರ್ತೆ ನಂಜನಗೂಡುಮಾಜಿ ಸಂಸದ ದಿ. ವಿ. ಶ್ರೀನಿವಾಸ ಪ್ರಸಾದ್ ಅವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಆ. 6 ರಂದು ವಿವಿಧ ಸಾಮಾಜಿಕ ಸೇವಾ ಕಾರ್ಯಗಳ ಆಚರಣೆಯೊಂದಿಗೆ ಅವರ ರಾಜಕೀಯ ಹೆಜ್ಜೆ ಗುರುತು ಹಾಗೂ ಸೇವಾ ಕಾರ್ಯಗಳನ್ನು ಸ್ಮರಿಸುವ ಬೃಹತ್ಸಮಾರಂಭವನ್ನು ನಂಜನಗೂಡಿನಲ್ಲಿ ಆಯೋಜಿಸಿದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿ. ಶ್ರೀನಿವಾಸಪ್ರಸಾದ್ ಅವರ ಅಭಿಮಾನಿಗಳಿಂದ ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿರುವ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಪಕ್ಷಾತೀತವಾಗಿ ಆಯೋಜಿಸಿರುವ ಸ್ಮರಣೀಯ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಪಿಜಿಆರ್ ಸಿಂಧ್ಯಾ, ಆರ್.ಎಸ್.ಎಸ್. ಪ್ರಮುಖ ಮಾ. ವೆಂಕಟರಾಮ್, ಪ್ರೊ. ಕಾಳೇಗೌಡ ನಾಗವಾರ ಹಾಗೂ ಭಾಗ್ಯಲಕ್ಷ್ಮಿ ಶ್ರೀನಿವಾಸಪ್ರಸಾದ್ಭಾಗವಹಿಸಲಿದ್ದಾರೆ ಎಂದರು.ಐದು ದಶಕಗಳಿಗೂ ಹೆಚ್ಚು ಕಾಲ ಮೈಸೂರು- ಚಾಮರಾಜನಗರ ಭಾಗದಲ್ಲಿ ತಮ್ಮ ಜನ ಸೇವೆ ಮೂಲಕ ಜನರ ಮನಸ್ಸಿನಲ್ಲಿ ಉಳಿದಿರುವ ಮಾಜಿ ಕೇಂದ್ರ ಸಚಿವರೂ ಆಗಿದ್ದ ವಿ. ಶ್ರೀನಿವಾಸಪ್ರಸಾದ್ಅವರ ಹುಟ್ಟುಹಬ್ಬವನ್ನು ತಾಲೂಕಿನ ವಿವಿಧೆಡೆ ಆಚರಿಸಲು ಅಭಿಮಾನಿಗಳು ಮುಂದಾಗಿದ್ದು, ಹೆಡಿಯಾಲ ಸಮೀಪದ ಗಿರಿಜನ ಹಾಡಿಗಳಲ್ಲಿ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಆಯೋಜಿಸಲಾಗುವುದು ಇನ್ನು ಪ್ರಸಾದ್ಅವರ ಅಭಿಮಾನಿಗಳೇ ಸೇರಿ ರೂಪಿಸಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಲುವಾಗಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಟ್ಟಾಗಿ ಭಾಗಿಯಾಗುವ ಮೂಲಕ ಸಮಾರಂಭದ ಯಶಸ್ವಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.ಇದಕ್ಕೂ ಮುನ್ನಾ ಮಾತನಾಡಿದ ಹಲವು ಮಂದಿ, ವಿ. ಶ್ರೀನಿವಾಸಪ್ರಸಾದ್ಅಭಿಮಾನಿಗಳು ಮುತ್ಸದ್ಧಿ ರಾಜಕಾರಣಿಯಾಗಿ ರಾಜ್ಯದ ಗಮನ ಸೆಳೆದಿದ್ದ ವಿ. ಶ್ರೀನಿವಾಸ ಪ್ರಸಾದ್ ಅವರ ಆಶಯದಂತೆ ಸಮಾಜಕ್ಕೆ ನೆರವಾಗುವ ಹಲವು ಕಾರ್ಯಕ್ರಮಗಳ ಆಚರಣೆ ಮೂಲಕ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸಲು ಮುಂದಾಗುವಂತೆ ಸಲಹೆ ನೀಡಿದರು. ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ಬಿಜೆಪಿ ಗ್ರಾಮಾಂತರ ಮಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ಧರಾಜು, ನಗರಸಭೆ ಸದಸ್ಯರಾದ ಮಹದೇವ ಪ್ರಸಾದ್, ದೇವ, ತಾಪಂ ಮಾಜಿ ಸದಸ್ಯರಾದ ಬದನವಾಳು ರಾಮು, ಶಿವಣ್ಣ, ಹುರ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರು, ಬಿಜೆಪಿ ಮಾಜಿ ಅಧ್ಯಕ್ಷ ಮಹೇಶ್, ಮುಖಂಡರಾದ ಸೋಮಣ್ಣ, ಪರಶಿವಮೂರ್ತಿ, ಪುಟ್ಟಸ್ವಾಮಿ, ಮಹದೇವ್, ರಾಜು, ಮಹದೇವಸ್ವಾಮಿ, ಮಹೇಶ್ ಬಾಬು, ಅಬ್ದುಲ್ ರಜಾಕ್, ಪಿಎಲ್.ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೃಷ್ಣ, ದಸಂಸ ಮೈಸೂರು ಉಪವಿಭಾಗೀಯ ಸಂಚಾಲಕ ಮಂಜು, ಕೃಷ್ಣಮೂರ್ತಿ, ಮಹೇಶ್, ಶಿವರಾಜು, ಹೊಳೆಯಪ್ಪ ಭಾಗವಹಿಸಿದ್ದರು.