ಸಾರಾಂಶ
ಟ್ರ್ಯಾಕ್ಟರನಲ್ಲಿ ಅತೀ ಎತ್ತರಕ್ಕೆ ಭತ್ತದ ಮೇವು ಸಂಗ್ರಹಿಸಿ ಸಾಗಿಸುವಾಗ ವಿದ್ಯುತ್ ತಂತಿ ಹರಿದು ಬಿದಿದ್ದೆ. ಇದರಿಂದ ರವಿ ಎನ್ನುವ ವ್ಯಕ್ತಿಗೆ ವಿದ್ಯುತ್ ಪ್ರವಹಿಸಿ ತೀವ್ರ ಗಾಯಗೊಂಡಿದ್ದಾನೆ
ಕಾರಟಗಿ: ಪಟ್ಟಣದ ಬಸವಣ್ಣ ಕ್ಯಾಂಪ್ ರಸ್ತೆಯ ಪನ್ನಾಪುರ್ ಕ್ರಾಸ್ ಬಳಿ ಭತ್ತದ ಹುಲ್ಲಿನ ಮೇವು ಸಾಗಿಸುತ್ತಿದ್ದ ವೇಳೆ ವ್ಯಕ್ತಿ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ಕಟಾವು ಆದ ಭತ್ತದ ಮೇವನ್ನು ರೈತರೊಬ್ಬರು ಟ್ರ್ಯಾಕ್ಟರ್‌ನ ಮೂಲಕ ಸಾಗಿಸುವಾಗ ಈ ಅವಘಡ ನಡೆದಿದೆ.ಟ್ರ್ಯಾಕ್ಟರನಲ್ಲಿ ಅತೀ ಎತ್ತರಕ್ಕೆ ಭತ್ತದ ಮೇವು ಸಂಗ್ರಹಿಸಿ ಸಾಗಿಸುವಾಗ ವಿದ್ಯುತ್ ತಂತಿ ಹರಿದು ಬಿದಿದ್ದೆ. ಇದರಿಂದ ರವಿ ಎನ್ನುವ ವ್ಯಕ್ತಿಗೆ ವಿದ್ಯುತ್ ಪ್ರವಹಿಸಿ ತೀವ್ರ ಗಾಯಗೊಂಡಿದ್ದಾನೆ. ಇದೆ ವೇಳೆ ಭತ್ತದ ಮೇವಿಗೆ ಬೆಂಕಿ ತಗಲಿದೆ. ಈ ವೇಳೆ ರಸ್ತೆ ಬದಿಯ ಮನೆಯಲ್ಲಿನ ಗೃಹಣಿಯೊಬ್ಬರು ಈ ಘಟನೆ ನೋಡಿದ ಕೂಡಲೇ ಎಚ್ಚೆತ್ತು ಅಗ್ನಿಶಾಮಕ ದಳಕ್ಕೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಜತೆಗೆ ೧೦೮ಕ್ಕೂ ಕರೆ ಮಾಡಿ ಸಹಾಯಕ್ಕೆ ಕೋರಿದ್ದಾರೆ. ಸಕಾಲಕ್ಕೆ ಆ್ಯಂಬುಲೆನ್ಸ್ ಮತ್ತು ಅಗ್ನಿ ಶಾಮಕ ದಳ ಆಗಮಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ರವಾನಿಸಲಾಗಿದೆ.
ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಠಾಣಾ ಅಧಿಕಾರಿ ರಾಘವೇಂದ್ರ ಈಳಿಗೇರ ಸಿಬ್ಬಂದಿ ಸ್ಥಳಕ್ಕೆ ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ರಾಘವೇಂದ್ರ, ರಾಹುಲ್, ಸುರೇಶ್ ಕುಮಾರ್, ಶರಣಬಸವ ಮತ್ತಿತರರು ಇದ್ದರು.