ಸಾರಾಂಶ
ಹೊಸಕೋಟೆ: ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್‌ವೊಂದು ಟ್ರಾಲಿ ಸಮೇತ ರಾಜಕಾಲುವೆಗೆ ಬಿದ್ದ ಘಟನೆ ನಗರದ ಹೊರವಲಯದ ಚಿಕ್ಕಕೆರೆ ಬಳಿ ನಡೆದಿದೆ.
ಹೊಸಕೋಟೆ: ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್‌ವೊಂದು ಟ್ರಾಲಿ ಸಮೇತ ರಾಜಕಾಲುವೆಗೆ ಬಿದ್ದ ಘಟನೆ ನಗರದ ಹೊರವಲಯದ ಚಿಕ್ಕಕೆರೆ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 207ರ ಉಪ್ಪಾರಹಳ್ಳಿ ಕಡೆಯಿಂದ ಬಂದ ಟ್ರ್ಯಾಕ್ಟರ್ ಕೆರೆ ಬಳಿ ಇರುವ ರಾಜಕಾಲುವೆ ಬಳಿಗೆ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಕೊಳಚೆ ನೀರು ಹರಿಯುತ್ತಿದ್ದ ರಾಜಕಾಲುವೆಗೆ ಟ್ರ್ಯಾಕ್ಟರ್ ಟ್ರಾಲಿ ಸಮೇತ ಪಲ್ಟಿಯಾಗಿದೆ. ಅದೃಷ್ಠವಶಾತ್ ಚಾಲಕ ಪವಾಡ ಸದೃಶ ರೀತಿಯಲ್ಲಿ ಅವಘಡದಿಂದ ಪಾರಾಗಿದ್ದಾರೆ. ಸಣ್ಣ-ಪುಟ್ಟ ಗಾಯಗಳೊಂದಿಗೆ ಸ್ಥಳೀಯರ ನೆರವಿನಿಂದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು.ರಾಷ್ಟ್ರೀಯ ಹೆದ್ದಾರಿ 207 ಜೊತೆಗೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿರುವ ಕಾರಣ ಟ್ರ್ಯಾಕ್ಟರ್ ರಾಜಕಾಲುವೆಗೆ ಬಿದ್ದ ಪರಿಣಾಮ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಕ್ರೇನ್ ಮೂಲಕ ಟ್ರ್ಯಾಕ್ಟರ್ ಮೇಳಕ್ಕೆತ್ತಲಾಯಿತು.
ಕಿಷ್ಕಿಂದೆಯಂತ ರಸ್ತೆ ಆಕ್ರೋಶ: ಅಪಘಾತದ ಬಗ್ಗೆ ಭೀಮ್ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಪ್ರತಿಕ್ರಿಯಿಸಿ ರಾಷ್ಟ್ರೀಯ ಹೆದ್ದಾರಿ 207 ಆಗಿದ್ದರೂ ಸಹ ರಾಜಕಾಲುವೆ ಬಳಿ ಕಿರಿದಾದ ರಸ್ತೆ ಇದ್ದು ರಾಜಕಾಲುವೆಗೆ ಅಡ್ಡಲಾಗಿ ತಡೆಗೋಡೆಯನ್ನೂ ನಿರ್ಮಿಸಿಲ್ಲ. ಇದರಿಂದಲೆ ಅಪಘಾತಕ್ಕೆ ಕಾರಣ ಜೊತೆಗೆ ರಾಜಕಾಲುವೆಗೆ ಟ್ರಾಕ್ಟರ್ ಬೀಳಲು ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳೆ ಇದಕ್ಕೆ ನೇರ ಹೊಣೆಗಾರರಾಗಿದ್ದಾರೆ. ಕ್ಷೇತ್ರದ ಶಾಸಕರು ಸಹ ಇಂತಹ ಸ್ಥಳಗಳನ್ನು ಸೂಕ್ಷ್ಮವಾಗಿ ಗಮನಿಸಿ ರಸ್ತೆ ಅಗಲೀಕರಣದ ಜೊತೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.ಫೋಟೋ: 5 ಹೆಚ್‌ಎಸ್‌ಕೆ 6
ಹೊಸಕೋಟೆಯಹೊರವಲಯದ ಚಿಕ್ಕಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರಾಲಿ ಸಮೇತನ ರಾಜಕಾಲುವೆಗೆ ಬಿದ್ದು ಕ್ರೇನ್ ಸಹಾಯದಿಂದ ಮೇಲೆತ್ತಲಾಯಿತು.