ಮತದಾನ ಜಾಗೃತಿಗಾಗಿ ತುಮಕೂರಿನಲ್ಲಿ ಟ್ರ್ಯಾಕ್ಟರ್ ಜಾಥಾ

| Published : Apr 07 2024, 01:48 AM IST

ಮತದಾನ ಜಾಗೃತಿಗಾಗಿ ತುಮಕೂರಿನಲ್ಲಿ ಟ್ರ್ಯಾಕ್ಟರ್ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ನಗರದ ಯಲ್ಲಾಪುರದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಕಮಿಟಿಯ ನಿರ್ದೇಶನದಂತೆ ತೋಟಗಾರಿಕಾ ಇಲಾಖಾ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕುರಿತ ಟ್ರಾಕ್ಟರ್ ಜಾಥಾ ಆಯೋಜಿಲಾಗಿತ್ತು.

ಕನ್ನಡಪ್ರಭ ವಾರ್ತೆ ತುಮಕೂರುಪ್ರಜಾಪ್ರಭುತ್ವದ ಹಬ್ಬ ಚುನಾವಣೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ಸಿಇಒ ಜಿ.ಪ್ರಭು ತಿಳಿಸಿದ್ದಾರೆ.ತುಮಕೂರು ನಗರದ ಯಲ್ಲಾಪುರದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಕಮಿಟಿಯ ನಿರ್ದೇಶನದಂತೆ ತೋಟಗಾರಿಕಾ ಇಲಾಖಾ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕುರಿತ ಟ್ರಾಕ್ಟರ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ಎಲ್ಲಾ ಮತಗಟ್ಟೆಗಳಲ್ಲಿಯೂ ಶೇ.100ರಷ್ಟು ಮತದಾನವಾಗಬೇಕೆಂಬುದು ಭಾರತ್ ಚುನಾವಣಾ ಆಯೋಗದ ಆಶಯ ವಾಗಿದ್ದು, ಅದನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಸ್ವೀಪ್ ಕಮಿಟಿ ಜಿಲ್ಲಾಡಳಿತದ ಸಹಕಾರದೊಂದಿಗೆ ಜಿಲ್ಲೆಯ ಎಲ್ಲಾ ಇಲಾಖೆಗಳ ಸಮನ್ವಯದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಕೈಗೊಂಡಿದೆ ಎಂದರು.ತುಮಕೂರು ನಗರವಲ್ಲದೆ, ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಮತ್ತು ಗ್ರಾಮಪಂಚಾಯಿತಿ ಮಟ್ಟದಲ್ಲಿಯೂ ಸ್ವೀಪ್ ಕಮಿಟಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಏಪ್ರಿಲ್ 26ರ ಶುಕ್ರವಾರ ಆರ್ಹ ಮತದಾರರು ತಮ್ಮ ಹತ್ತಿರದ ಮತಗಟ್ಟೆಗೆ ಬಂದು, ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಚುನಾವಣೆಯನ್ನು ಯಶಸ್ವಿಗೊಳಿ ಸಬೇಕೆಂಬ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ತೋಟಗಾರಿಕಾ ಇಲಾಖೆಯ ಸಹಕಾರದಲ್ಲಿ ರೈತ ರೊಂದಿಗೆ ಟ್ರಾಕ್ಟರ್ ಜಾಥಾ ಹಮ್ಮಿಕೊಂಡು, ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಎಲ್ಲರೂ ಮತದಾನ ದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಮತ್ತು ಜವಾಬ್ದಾರಿಯನ್ನು ಚಲಾಯಿಸಬೇಕೆಂಬುದು ಸಿಇಒ ಜಿ.ಪ್ರಭು ಮನವಿ ಮಾಡಿದರು.ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಬಿ.ಸಿ.ಶಾರದಮ್ಮ ಮಾತನಾಡಿ, ಭಾರತ್ ಚುನಾವಣಾ ಆಯೋಗ ಮತ್ತು ಜಿಲ್ಲಾ ಸ್ವೀಪ್ ಕಮಿಟಿಯ ನಿರ್ದೇಶನದಂತೆ ಇಂದು ನಮ್ಮ ಇಲಾಖೆವತಿಯಿಂದ ಮತದಾನ ಜಾಗೃತಿಗಾಗಿ ಟ್ರಾಕ್ಟರ್ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿ ರೈತರ ಜೊತೆಗೆ, ಅಧಿಕಾರಿಗಳು ಸಹ ಟ್ರಾಕ್ಟರ್ ಹತ್ತಿ, ಭಿತ್ತಿಫಲಕಗಳನ್ನು ಪ್ರದರ್ಶಿ ಸುವ ಮೂಲಕ ಜನರಿಗೆ ಮತದಾನ ಮಹತ್ವ ಮತ್ತು ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಸಧೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಮತದಾನ ಮಾಡಬೇಕು. ಚುನಾವಣೆಯಲ್ಲಿ ಮತದಾನ ಮಾಡಲು ಬಡವ, ಬಲ್ಲಿದ, ಮೇಲು, ಕೀಳು ಎಂಬ ಭಾವನೆಯಿಲ್ಲ. ಎಲ್ಲಾ ಮತಗಳಿಗೂ ಒಂದೇ ಮೌಲ್ಯ. ಹಾಗಾಗಿ ನಿಮ್ಮ ಮತಗಳನ್ನು ಅಸೆ, ಆಮಿಷ ಗಳಿಗೆ ಬಲಿಕೊಡೆದೆ, ತಪ್ಪದೆ ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಜನತೆಗೆ ಇರುವ ಸರ್ವಶ್ರೇಷ್ಠ ಅಧಿಕಾರವನ್ನು ಚಲಾಯಿಸಿ, ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಮನವಿ ಮಾಡಿದರು.ನಗರದ ಯಲ್ಲಾಪುರದಿಂದ ಮಾವು, ಬಾಳೆ,ತಳಿರು ತೋರಣಗಳಿಂದ ಶೃಂಗಾರಗೊಂಡ ಸುಮಾರು ೨೫ಕ್ಕೂ ಹೆಚ್ಚು ಟ್ರಾಕ್ಟ ರ್‌ಗಳಲ್ಲಿ ರೈತರು, ಅಧಿಕಾರಿಗಳು ಎಪಿಎಂಸಿ ಮಾರುಕಟ್ಟೆ, ಶಿರಾಗೇಟ್, ಅಮಾನಿಕೆರೆಯವರೆಗೂ ಜಾಥಾ ನಡೆಸಿ, ಮುಕ್ತಾಯಗೊಳಿಸಿದರು.ಈ ವೇಳೆ ತಾಲೂಕು ಸ್ವೀಪ್ ಕಮಿಟಿ ಅಧ್ಯಕ್ಷ ಹರ್ಷಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಸ್ವೀಪ್‌ ಕಮಿಟಿ ಕೃಷಿ ಇಲಾಖೆ ಎಡಿಎ ಅಶೋಕ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು, ರೂಪಾ, ತಾಲೂಕು ಸಹಾಯಕ ನಿರ್ದೇಶಕರುಗಳಾದ ಸ್ವಾಮಿ ಮಧುಗಿರಿ, ಸುಧಾಕರ್ ಶಿರಾ, ಅಂಜನ್, ದರ್ಶನ್, ಶಿವಕುಮಾರ್, ರಾಘವೇಂದ್ರ, ವಿಶ್ವನಾಥ್ ಸೇರಿದಂತೆ ತೋಟಗಾರಿಕಾ ಇಲಾಖೆಯ ಸಿಬ್ಬಂದಿಗಳು, ರೈತರು, ಟ್ರಾಕ್ಟರ್‌ಗಳ ಮಾಲೀಕರು ಪಾಲ್ಗೊಂಡಿದ್ದರು.