ಟ್ರ್ಯಾಕ್ಟರ್ ಪಲ್ಟಿ; ಓರ್ವ ಸಾವು

| Published : May 21 2025, 12:01 AM IST

ಸಾರಾಂಶ

ತಾಲೂಕಿನ ಕುಂಚಾವರಂ ಹಾಗೂ ಗಂಗನಪಳ್ಳಿ ಮಾರ್ಗ ಮಧ್ಯೆ, ಕಲ್ಲು ಗಣಿಯಿಂದ ಕಲ್ಲನ್ನು ತುಂಬಿಕೊಂಡು ಪೊಲಕಪಳ್ಳಿ ತಾಂಡಾಗೆ ಬರುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ.

ಕಲಬುರಗಿ: ತಾಲೂಕಿನ ಕುಂಚಾವರಂ ಹಾಗೂ ಗಂಗನಪಳ್ಳಿ ಮಾರ್ಗ ಮಧ್ಯೆ, ಕಲ್ಲು ಗಣಿಯಿಂದ ಕಲ್ಲನ್ನು ತುಂಬಿಕೊಂಡು ಪೊಲಕಪಳ್ಳಿ ತಾಂಡಾಗೆ ಬರುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ. ನಿನ್ನೆ ಸಾಯಂಕಾಲ 7.30 ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲಿಯೇ ಟ್ರ್ಯಾಕ್ಟರ್ ನ್ನು ಬಿಟ್ಟು ಪರಾರಿಯಾಗಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಯನ್ನು ಹೂವಿನಹಳ್ಳಿಯ ವಿನೋದಕುಮಾರ (18) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಸಿದ್ದು ತಿಪ್ಪಣ್ಣ, ನಾಗೇಶ ಎಂದು ಗುರುತಿಸಲಾಗಿದೆ. ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಮಿರಿಯಾನ ಪೊಲೀಸ್ ಠಾಣೆ ಗುನ್ನೆ ನಂ. 24/2025, ಕಲಂ: 281, 125 (ಎ), 125 (ಬಿ), 106(1) ಬಿ ಎನ್ ಎಸ್ ಕಾಯ್ದೆ ಮತ್ತು 187 ಐ ಎಮ್ ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಸದರಿ ಪೊಲೀಸ್ ಠಾಣೆಯವರು ತಿಳಿಸಿದ್ದಾರೆ.