ವ್ಯಾಪಾರಿಗಳು ಬ್ಯಾಂಕ್‌ ಸಾಲ ಸೌಲಭ್ಯ ಬಳಸಿಕೊಳ್ಳಿ

| Published : Jul 24 2025, 12:49 AM IST

ವ್ಯಾಪಾರಿಗಳು ಬ್ಯಾಂಕ್‌ ಸಾಲ ಸೌಲಭ್ಯ ಬಳಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಬೀದಿ ಬದಿ ವ್ಯಾಪಾರಸ್ಥರಿಗಾಗಿ ಬ್ಯಾಂಕ್‌ಗಳು ಸಣ್ಣ ಮೊತ್ತದ ಸಾಲಗಳು, ಬಡ್ಡಿ ರಿಯಾಯಿತಿ, ಸುಲಭ ಪಾವತಿ ಸೌಲಭ್ಯಗಳನ್ನು ನೀಡುತ್ತಿವೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಸುಬ್ಬಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಬೀದಿ ಬದಿ ವ್ಯಾಪಾರಸ್ಥರಿಗಾಗಿ ಬ್ಯಾಂಕ್‌ಗಳು ಸಣ್ಣ ಮೊತ್ತದ ಸಾಲಗಳು, ಬಡ್ಡಿ ರಿಯಾಯಿತಿ, ಸುಲಭ ಪಾವತಿ ಸೌಲಭ್ಯಗಳನ್ನು ನೀಡುತ್ತಿವೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಸುಬ್ಬಯ್ಯ ಹೇಳಿದರು.ವಿಜಯಪೂರ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಪಟ್ಟಣ ಪಂಚಾಯತಿ ನಾಲತವಾಡ, ಡೆ-ನಲ್ಮ್ ಯೋಜನೆ ಮತ್ತು ಪ್ರಧಾನ ಮಂತ್ರಿ ಸ್ವ-ನಿಧಿ ಸೇ-ಸಮೃದ್ಧಿ ಯೋಜನೆಗಳ ಆಶ್ರಯದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಮಾಹಿತಿ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವ್ಯಾಪಾರಸ್ಥರಿಗೆ ಬ್ಯಾಂಕ್‌ನಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು, ನೀವು ಸಾಲ ಪಡೆದ ನಂತರ ಸರಿಯಾಗಿ ಮರು ಪಾವತಿ ಮಾಡಿದರೆ ನಿಮಗೆ ಮತ್ತಷ್ಟು ಹೆಚ್ಚಿನ ಸಾಲ ಸಿಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಸುಧಾರಣೆಯಾಗುತ್ತದೆ. ವ್ಯಾಪಾರ ವಿಸ್ತರಣೆಗೆ ಬಹುಮುಖ್ಯ ಸಾಧನವಾಗಬಹುದು ಎಂದು ಹೇಳಿದರು.ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಐ.ಎಸ್.ಚಿಮ್ಮಲಗಿ ಮಾತನಾಡಿ, ಬದುಕು ಕಟ್ಟಿಕೊಡುವುದು ಹಣ. ಶ್ರಮಪಟ್ಟು ಗಳಿಸಿ, ಆ ಹಣವನ್ನು ಜಾಣವಾಗಿ ಉಳಿತಾಯ ಮಾಡುವುದರ ಜತೆಗೆ ಅದರ ಸದುಪಯೋಗದಿಂದ ಮುಂದೆ ಸಾಗಬೇಕು. ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್‌ಗಳಿಂದ ಪ್ರಥಮ ಹಂತದಲ್ಲಿ ₹ 10 ಸಾವಿರ ನಂತರ ₹ 20 ಸಾವಿರ ಹಾಗೂ ತೃತೀಯ ಹಂತದಲ್ಲಿ ₹ 50 ಸಾವಿರವರೆಗೆ ಗ್ಯಾರಂಟಿ ಇಲ್ಲದೇ ಸಾಲ ಸಿಗುತ್ತದೆ. ಆದರೆ ಈ ಹಣವನ್ನು ಸಮಯಕ್ಕೆ ಪಾವತಿಸದಿದ್ದರೆ ಮುಂದಿನ ಸಾಲ ಸಿಗುವುದು ಕಷ್ಟ ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಹಾಳಾಗುತ್ತದೆ ಎಂದು ಎಚ್ಚರಿಸಿದರು. ಮಹಿಳೆಯರಿಗಾಗಿ ಉದ್ಯೋಗಿನಿ ಸ್ಕೀಮ್ ಅಡಿಯಲ್ಲಿ ₹ 3 ಲಕ್ಷವರೆಗೆ ಹಾಗೂ ಮುದ್ರಾ ಸ್ಕೀಮ್ ಅಡಿಯಲ್ಲಿ ₹ 50 ಸಾವಿರದಿಂದ ₹ 10 ಲಕ್ಷವರೆಗೆ ಗ್ಯಾರಂಟಿ ಇಲ್ಲದೆ ಸಾಲ ಲಭ್ಯವಿದೆ ಎಂದು ಮಾಹಿತಿ ನೀಡಿದರು.----

ಕೋಟ್‌

ಬೀದಿ ಬದಿ ವ್ಯಾಪಾರಸ್ಥರಿಗೆ ಅನೇಕ ಸೌಲಭ್ಯಗಳಿವೆ. ಅದನ್ನು ತಿಳಿದುಕೊಂಡು ಪಡೆಯಬೇಕು. ಅಗತ್ಯ ವಸ್ತುಗಳ ಮಾರಾಟ ಮಾಡುವ ಇವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಅವರಿಗೆ ಸಾಲಸೌಲಭ್ಯ ಒದಗಿಸಲು ಸಮಯ ವ್ಯರ್ಥ ಮಾಡದೇ ಶೀಘ್ರ ಸಾಲ ಸಿಗುವಂತೆ ಮಾಡಬೇಕು. ಬೀದಿ ವ್ಯಾಪಾಸ್ಥರು ಸ್ವಚ್ಛತೆ ಕಡೆ ಹೆಚ್ಚು ಗಮನ ಹರಿಸಬೇಕು. ವ್ಯಾಪಾರದ ನಂತರ ಕಸವನ್ನು ಒಂದು ಕಡೆ ಶೇಖರಣೆ ಮಾಡಿದರೆ ಪಪಂ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಾರೆ.

ವಿಜಯಲಕ್ಷ್ಮೀ ಇಲಕಲ್, ಪಟ್ಟಣ ಪಂಚಾಯತಿ ಅಧ್ಯಕ್ಷೆಈ ವೇಳೆ ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸದಸ್ಯರಾದ ಸಂಗಪ್ಪ ಬಾರಡ್ಡಿ, ಶಿವಪುತ್ರಪ್ಪ ಗುರಿಕಾರ, ಸಿಒ ಈರಣ್ಣ ಕೊಣ್ಣೂರ, ಮೈಬೂಬ ಕುಳಗೇರಿ, ಸಿಎಫ್‌ಎಲ್‌ ಎನ್‌ಜಿಒದ ಶಿವಾನಂದ ಸಾಸನೂರ, ಆರ್ಥಿಕ ಸಾಕ್ಷಾರತ ಸಲಹೆಗಾರ ಪ್ರವೀಣಕುಮಾರ ಗೊಳಸಂಗಿ, ಬಾಬು ಸಜ್ಜನ ಹಾಗೂ ಇನ್ನಿತರರು ಇದ್ದರು.