ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೂಢಿ ಸಂಪ್ರದಾಯಗಳು, ಆಚಾರ ವಿಚಾರಗಳು, ಹಬ್ಬಹರಿದಿನಗಳು, ನಡೆ, ನುಡಿ ಮುಂತಾದುವುಗಳು ನಮ್ಮ ಪೂರ್ವಜರು ನೀಡಿರುವ ಬಳುವಳಿಗಳಾಗಿವೆ. ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ್ ರಾಮೇಗೌಡ ಹೇಳಿದರು.ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ನಡೆದ ರಂಗದ ಹಬ್ಬದಲ್ಲಿ ಭಾಗವಹಿಸಿ ಮಾತನಾಡಿ, ಬಹಳ ಹಿಂದಿನಿಂದಲೂ ದೇವಾಲಯ ನಿರ್ಮಿಸುವ, ದೇವರುಗಳನ್ನು ಪೂಜಿಸುವ ಪರಿಪಾಠಗಳನ್ನು ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದರು.
ನಮ್ಮ ಸಂಸ್ಕೃತಿಯು ಸನಾತನ ಧರ್ಮದ ಪ್ರತಿಬಿಂಬವಾಗಿವೆ. ಮಾನವನಿಗೆ ಕಷ್ಟ ಬಂದಾಗ ಭಗವಂತನಲ್ಲಿ ಮೊರೆ ಹೋಗಿ ಪರಿಹರಿಸಿಕೊಂಡು ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ರಂಗಕುಣಿತ, ಭಜನೆ, ದೇವರನಾಮಗಳ ಪಠಣ ಸೇರಿದಂತೆ ವಿವಿಧ ರೀತಿಯ ಆಚರಣೆಗಳನ್ನು ಈ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ ಎಂದರು.ಮುಂದಿನ ಪರಂಪರೆಗೂ ಆಚರಣೆಗಳು ಮುಂದುವರೆಯಲು ನಾವುಗಳು ಕೈಜೋಡಿಸಬೇಕು. ರಂಗಕುಣಿತ ನೋಡುಗರನ್ನು ಆಕರ್ಷಿಸುತ್ತದೆ. ರಂಗಕುಣಿತವನ್ನು ಇಂದಿನ ಯುವಕ ಮಿತ್ರರು ಕಲಿಯಬೇಕು ಎಂದು ಸಲಹೆ ನೀಡಿದರು.
ರಂಗದ ಹಬ್ಬ ಹೊಸಹೊಳಲು ಗ್ರಾಮದ ವಿಶಿಷ್ಟ ಹಬ್ಬವಾಗಿದೆ. ವಿವಿಧ ಪೂಜಾ ಕಾರ್ಯಗಳ ನಂತರ ರಾತ್ರಿ ವೇಳೆ ಗ್ರಾಮದ ಹಿರಿಯರು, ಮುಖಂಡರು ಯುವಕರು ಎಲ್ಲರೂ ರಂಗಕುಣಿಯಲಾಗುತ್ತದೆ. ತಮಟೆ ಸದ್ದಿನೊಂದಿಗೆ ಕೈಗೆ ಟವಲ್ ಹಿಡಿದು ಜಾನಪದ ಶೈಲಿಯಲ್ಲಿ ಹೆಜ್ಜೆ ಹಾಕಿ ಕುಣಿಯುವ ರಂಗಕುಣಿತ ಬಹಳ ಆಕರ್ಷಣೀಯವಾಗಿರುತ್ತದೆ ಎಂದರು.ಈ ವೇಳೆ ಪುರಸಭಾ ಸದಸ್ಯ ಎಚ್.ಎನ್.ಪ್ರವೀಣ್, ವಿಜಯ್ ರಾಮೇಗೌಡರ ಆಪ್ತಸಹಾಯಕ ಬಸವರಾಜು, ಗ್ರಾಮದ ಮುಖಂಡರು, ನೂರಾರು ಭಕ್ತರು ಹಾಜರಿದ್ದರು.
ಇಂದು ಮುದ್ರಣಕಾರರ, ಕಾರ್ಮಿಕರ ದಿನಾಚರಣೆಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲಾ ಮುದ್ರಣಕಾರರ ಸಂಘದಿಂದ ಮುದ್ರಣ ರಂಗದ ಪಿತಾಮಹ ಜೊಹಾನ್ಸ್ ಗುಟೆನ್ ಬರ್ಗ್‌ರವರ ಸವಿನೆನಪಿನಲ್ಲಿ ಮುದ್ರಣಕಾರರ ದಿನಾಚರಣೆ ಮತ್ತು ಕಾರ್ಮಿಕರ ದಿನವನ್ನು ಮೇ 1ರಂದು ಕರ್ನಾಟಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10.30 ಗಂಟೆಗೆ ಮುದ್ರಣಕಾರರ ಮತ್ತು ಕಾರ್ಮಿಕರ ದಿನಾಚರಣೆಯನ್ನು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ ಉದ್ಘಾಟಿಸಲಿದ್ದು, ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಜೆ.ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರೈತ ನಾಯಕಿ ಸುನಂದಾ ಜಯರಾಂ, ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್‌ಕುಮಾರ್, ರಾಜ್ಯ ಮುದ್ರಣಕಾರರ ಸಂಘದ ವಿಭಾಗೀಯ ಸಂಚಾಲಕ ಸತೀಶ್.ಎಂ.ಎಸ್ ಭಾಗವಹಿಸುವರು. ಈ ಸಮಾರಂಭದಲ್ಲಿ ಹಿರಿಯ ಮುದ್ರಣಕಾರರಾದ ಹೊಸಬೂದನೂರಿನ ರಾಜಪ್ಪ, ಮಂಡ್ಯದ ಎಂ.ಆರ್.ನಾರಾಯಣಸ್ವಾಮಿ, ಜೆ.ಎ.ಪ್ರಿಂಟರ್ಸ್‌ನ ಕೆ.ನಾಗರಾಜು ಇವರುಗಳನ್ನು ಸನ್ಮಾನಿಸಲಾಗುವುದು.
ಈ ಸಂದರ್ಭದಲ್ಲಿ ಜಿಲ್ಲಾ ಮುದ್ರಣಕಾರರ ಸಂಘದ ಸದಸ್ಯತ್ವ ಹೊಂದಿದ ಸದಸ್ಯರುಗಳಿಗೆ ಉಚಿತ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ಸಭೆಗೆ ಬರುವಾಗ ಸದಸ್ಯರು ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಕೃತಿಯನ್ನು ತರಲು ಕೋರಲಾಗಿದೆ.