ಪೊನ್ನಂಪೇಟೆ ಕೊಡವ ಸಮಾಜದಿಂದ ಸಾಂಪ್ರದಾಯಿಕ ಕೈಲ್ ಪೋಳ್ದ್

| Published : Sep 04 2025, 01:01 AM IST

ಸಾರಾಂಶ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೈಲ್‌ ಪೋಳ್ದ್‌ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೃಷಿ ಪರಿಕರ, ಕೋವಿ ವಾಹನಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಕೊಡವ ಹಿತರಕ್ಷಣಾ ಬಳಗ ಕ್ ಗ್ಗಟ್ಟ್ ನಾಡ್, ಪೊನ್ನಂಪೇಟೆ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೃಷಿ ಪರಿಕರ, ಕೋವಿ, ವಾಹನಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಯಿತು.

ಪದ್ಧತಿಯಂತೆ ಕೃಷಿ ಪರಿಕರಗಳಾದ ನೇಗಿಲು, ನೊಗಗಳಿಗೆ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಅವರು ಕೊಡವ ಸಾಂಪ್ರದಾಯಿಕ ಉಡುಪು ಕುಪ್ಯ ಚೇಲೆ ಧರಿಸಿ ಪೂಜೆ ಸಲ್ಲಿಸಿದರು.

ಕೋವಿ ಕತ್ತಿಗಳಿಗೆ ಆಯುಧ ಪೂಜೆ ಮಾಡಿ "ಕಾರೋಣ "ವಿಗೆ ಹಾಗೂ ಬೇಟೆಯಲ್ಲಿ ಜೊತೆ ಸಾಗುವ ಶ್ವಾನ ಗಳಿಗೆ ಪದ್ಧತಿಯಂತೆ ಪ್ರತ್ಯೇಕವಾಗಿ ಎಡೆ ಇಡಲಾಯಿತು.

ವಾಹನಗಳಿಗೆ ಸಾಮೂಹಿಕವಾಗಿ ಹೂವಿನ ಮಾಲೆಯಲ್ಲಿ ಅಲಂಕರಿಸಿ, ಆಯುಧ ಪೂಜೆ ಸಲ್ಲಿಸಿ ಆರತಿ ಬೆಳಗಿ ಪೂಜೆಯನ್ನು ಸಲ್ಲಿಸಲಾಯಿತು.

ನಂತರ ಕೋವಿಗಳನ್ನು ಹಿರಿಯರಿಂದ ಕಿರಿಯರಿಗೆ ಹಸ್ತಾಂತರಿಸಿ "ಹುಲಿ -ಹಂದಿ ಬರುವ ದಾರಿಯಿಂದ ಸರಿದು ಬೇಟೆಯಾಡು, ಶತ್ರುವನ್ನು ಕೆಣಕಬೇಡ, ಶತ್ರುವಿನೊಂದಿಗೆ ದಾರಿ ಎದುರು ನಿಂತು ಹೋರಾಡು, ಮಿತ್ರನಿಗೆ ಮಿತ್ರನ್ನಾಗಿ ಇರು, ದೇವರನ್ನು ಮರೆಯಬೇಡ " ಎಂದು ಕೊಡವ ಭಾಷೆಯಲ್ಲಿ ತಪ್ಪಡ್ಕ ಕಟ್ಟಿ ಕೋವಿ ಹಸ್ತಾಂತರಿಸ ಲಾಯಿತು. ಕೋವಿ ಹಸ್ತಾಂತರಿಸಿದ ನಂತರ ಸಾಮೂಹಿಕವಾಗಿ ಆಕಾಶಕ್ಕೆ ಗುಂಡು ಹಾರಿಸಲಾಯಿತು.

ವಾಹನಗಳಿಗೆ ಸಾಮೂಹಿಕ ಆಯುಧ ಪೂಜೆ ಸಲ್ಲಿಸಿ, ಪೊನ್ನಂಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಮೆರವಣಿಗೆ ನಡೆಯಿತು. ಹಬ್ಬದ ವಿಶೇಷ ಉಟೋಪಚಾರದಲ್ಲಿ ಸಾಮೂಹಿಕವಾಗಿ ಎಲ್ಲರೂ ಭಾಗವಹಿಸಿದ್ದರು.

ಈ ಸಂದರ್ಭ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ, ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕರಾದ ಅಡ್ಡಂಡ ಡಾಲಿ ಜನಾರ್ಧನ, ಉಳುವಂಗಡ ಲೋಹಿತ್ ಭೀಮಯ್ಯ, ಕೋಟ್ರಂಗಡ ಬಿಪಿನ್, ಅಜ್ಜಿಕುಟ್ಟಿರ ಶುಭಾ, ಅಜ್ಜಿಕುಟ್ಟಿರ ರಂಜಿ, ಚೇಯಂಡ ಶಮ್ಮಿ, ಅಡ್ಡಂಡ ಸುನಿಲ್ ಸೋಮಯ್ಯ, ಚೆಟ್ಟಂಗಡ ವಸಂತ, ಮಲ್ಲಪನೇರ ಕಾರ್ಯಪ್ಪ, ಚೆಟ್ಟಂಗಡ ಉತ್ತಪ್ಪ, ಗಾಂಡಂಗಡ ಸವಿನ, ಚೆಕ್ಕೇರ ವಾಣಿ ಸಂಜು, ಬೊಳ್ಳಿಮಾಡ ಧನು ದೇವಯ್ಯ, ಪುಳ್ಳಂಗಡ ಪವನ್, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕ ಕಳ್ಳಿಚಂಡ ಚಿಪ್ಪ ದೇವಯ್ಯ, ಅಡ್ಡಂಡ ಪ್ರಕಾಶ್ ಕುಶಾಲಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು.