ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರು
KannadaprabhaNewsNetwork | Published : Oct 27 2023, 12:31 AM IST
ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರು
ಸಾರಾಂಶ
ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರು: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ನಾಗಮಂಗಲ: ಪಾರಂಪರಿಕ ವೈದ್ಯ ಪದ್ಧತಿ ಪ್ರಸ್ತುತ ವೈದ್ಯಕೀಯ ಜಗತ್ತಿಗೆ ಮೂಲ ಬೇರಿದ್ದಂತೆ ಎಂದು ಶ್ರೀಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹಳೇ ಬೇರಿನ ರೂಪದಲ್ಲಿ ಪಾರಂಪರಿಕ ವೈದ್ಯರು ಹಾಗೂ ಹೊಸ ಚಿಗುರಿನ ರೀತಿಯಲ್ಲಿ ಈಗ ಆಯುಷ್ ವೈದ್ಯರಿದ್ದಾರೆ. ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರಾಗಿದೆ. ಮೂಲ ಬೇರು ಇಲ್ಲದಿದ್ದರೆ ಆಧುನಿಕ ಶೈಲಿಗೆ ಬಂದವರೆಲ್ಲರೂ ನಶಿಸಿ ಹೋಗುತ್ತಾರೆ ಎಂದರು. ಆಯುರ್ವೇದ, ಅಲೋಪಥಿ ಮತ್ತು ಪಾರಂಪರಿಕ ವೈದ್ಯ ಪದ್ಧತಿಗಳೆಲ್ಲವೂ ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ. ಈ ಹಿಂದೆ ಒಬ್ಬ ಮನುಷ್ಯನ ಸರಾಸರಿ ಆಯಸ್ಸು 30 ರಿಂದ 35 ವರ್ಷವಾಗಿತ್ತು. ಈಗ 70 ವರ್ಷ ಆಯಸ್ಸು ಆಗಿದೆ. ಆ ಕಾಲದಲ್ಲಿ ಬಂದಂತಹ ಕಾಯಿಲೆಗಳಿಗೆ ಆಯಾ ಕಾಲಕ್ಕನುಗುಣವಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕಿದೆ ಎಂದರು. ಪ್ರಕೃತಿಯ ನಿಯಮದಂತೆ ಬದುಕಿದರೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಆಧುನಿಕ ಪದ್ಧತಿಯಲ್ಲಿ ಬೇರೆಯವರಿಗೆ ಚಿಕಿತ್ಸೆ ಕೊಟ್ಟು ವೈದ್ಯರು ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಆದರೆ, ಪಾರಂಪರಿಕ ವೈದ್ಯರು ತಾವೇ ನಿದರ್ಶನವಾಗಿ ಇತರರಿಗೆ ಚಿಕಿತ್ಸೆ ನೀಡುತ್ತಾರೆ ಎಂದರು. ಭೂಮಿ ಮೇಲಿರುವ ಪ್ರತಿಯೊಂದು ಗಿಡವೂ ಸಹ ಒಂದಲ್ಲ ಒಂದು ರೀತಿಯ ಔಷಧಿಗೆ ಬಳಕೆಯಾಗುತ್ತದೆ. ನಮ್ಮ ಗಿಡಮೂಲಿಕೆಗಳ ಪ್ರಬೇಧಗಳು ಅಳಿಯಬಾರದು. ಮುಂದಿನ ಪೀಳಿಗೆಗೆ ಅದು ಅನುಕೂಲವಾಗಲಿದೆ ಎಂದರು. 26ಕೆಎಂಎನ್ ಡಿ24 ಅದಿಚುಂಚನಗಿರಿ ಮಠದ ಬಿಜಿಎಸ್ ಸಭಾ ಭವನದಲ್ಲಿ ನಡೆದ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14 ನೇ ರಾಜ್ಯ ಸಮ್ಮೇಳನವನ್ನು ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ. ಆರೋಗ್ಯ ಖಾತೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.