ಪಾರಂಪರಿಕ ವೈದ್ಯ ಪದ್ಧತಿ ಋಷಿಮುನಿಗಳ ಬಳುವಳಿ : ಅಂಬರೀಶ ಭಂಡಿಗಡಿ

| Published : Jul 15 2025, 11:46 PM IST

ಪಾರಂಪರಿಕ ವೈದ್ಯ ಪದ್ಧತಿ ಋಷಿಮುನಿಗಳ ಬಳುವಳಿ : ಅಂಬರೀಶ ಭಂಡಿಗಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಮನೆ ಮದ್ದು ಪಾರಂಪರಿಕ ವೈದ್ಯ ಎನ್ನುವುದು ಸುಲಭವಾಗಿ ನಾವು ತತ್‌ಕ್ಷಣಕ್ಕೆ ಸಿದ್ಧಪಡಿಸಿಕೊಳ್ಳಬಹುದಾದ ಔಷಧಿಗಳಾಗಿರುತ್ತವೆ. ಋಷಿಮುನಿಗಳಿಂದ ಮನೆಯ ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿರುವ ಮನೆಮದ್ದು ಪಾರಂಪರಿಕ ವೈದ್ಯ ಜ್ಞಾನವನ್ನು ಮುಂದಿನ ಪೀಳಿಗೆಗೂ ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನದ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಎಂದು ಹೇಳಿದರು.

ಹಂದಿಗೋಡಿನ ಮಾತಾನುಗ್ರಹ ಧ್ಯಾನಕೇಂದ್ರದಲ್ಲಿ ಮನೆ ಮದ್ದು ಪಾರಂಪರಿಕ ವೈದ್ಯ ಪದ್ಧತಿ ಕುರಿತ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕೊಪ್ಪ

ಮನೆ ಮದ್ದು ಪಾರಂಪರಿಕ ವೈದ್ಯ ಎನ್ನುವುದು ಸುಲಭವಾಗಿ ನಾವು ತತ್‌ಕ್ಷಣಕ್ಕೆ ಸಿದ್ಧಪಡಿಸಿಕೊಳ್ಳಬಹುದಾದ ಔಷಧಿಗಳಾಗಿರುತ್ತವೆ. ಋಷಿಮುನಿಗಳಿಂದ ಮನೆಯ ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿರುವ ಮನೆಮದ್ದು ಪಾರಂಪರಿಕ ವೈದ್ಯ ಜ್ಞಾನವನ್ನು ಮುಂದಿನ ಪೀಳಿಗೆಗೂ ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನದ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಎಂದು ಹೇಳಿದರು.

ಶ್ರೀ ಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನ ಭಂಡಿಗಡಿ ಹಾಗೂ ಶ್ರೀ ಧನ್ವಂತರಿ ಸಂಜೀವಿನಿ ಪ್ರತಿಷ್ಠಾನದ ಆಶ್ರಯದಲ್ಲಿ ಭಂಡಿಗಡಿ ಹಂದಿಗೋಡಿನ ಮಾತಾನುಗ್ರಹ ಧ್ಯಾನಕೇಂದ್ರದಲ್ಲಿ ಮನೆ ಮದ್ದು ಪಾರಂಪರಿಕ ವೈದ್ಯ ಪದ್ಧತಿ ಕುರಿತು ಮಾತನಾಡಿದರು.

ನಮ್ಮ ಪರಿಸರದ ಸುತ್ತಮುತ್ತ ಸಿಗುವ ಔಷಧೀಯ ಗುಣಗಳುಳ್ಳ ಸಸ್ಯ, ಗಿಡಮೂಲಿಕೆ, ವಸ್ತುಗಳನ್ನು ಬಳಸಿ ಸಿದ್ಧಪಡಿಸುವ ಔಷಧಿಯೇ ಮನೆಮದ್ದು ಪಾರಂಪರಿಕ ಔಷಧಿ ಆಗಿರುತ್ತದೆ. ಔಷಧಿ ಸಿದ್ಧಪಡಿಸುವ ಸರಿಯಾದ ಮಾಹಿತಿಯನ್ನು ನಿಖರವಾಗಿ ತಿಳಿದುಕೊಂಡು ಔಷಧಿ ತಯಾರಿಸಿದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಇಂದಿನ ಆಧುನಿಕ ಜಗತ್ತಿಗೆ ಹೊಂದಿಕೊಂಡು ನೈಸರ್ಗಿಕವಾಗಿ ದೊರೆಯುವ ಹಲಸಿನ ಹಣ್ಣು, ಕೆಸಿನ ಗಡ್ಡೆ, ಮರಗೆಸು, ಕಳಲೆ, ಅಣಬೆ ಮುಂತಾದ ಪದಾರ್ಥಗಳನ್ನು ತಿಂದರೆ ಜೀರ್ಣಿಸಿಕೊಳ್ಳಲಾಗದೆ ರಾಸಾಯನಿಕ ಬಳಸಿದ ಪದಾರ್ಥಗಳಿಗೆ ದಾಸರಾಗಿರುವುದು ವಿಪರ್ಯಾಸವೇ ಸರಿ ಎಂದರು.

ಶ್ರೀ ಧನ್ವಂತರಿ ಸಂಜೀವಿನಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ರಾಮಚಂದ್ರ ಅಧ್ಯಕ್ಷತೆ ವಹಿಸಿ ಇಂದಿನ ದಿನಗಳಲ್ಲಿ ಶ್ರಮವಹಿಸಿ ಕೆಲಸ ಕಾರ್ಯಗಳು ಮಾಡದೇ ಇರುವುದು ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳದೆ ಇರುವುದು, ನಮ್ಮ ಸುತ್ತಮುತ್ತ ಇರುವ ಔಷಧೀಯ ಸಸ್ಯಗಳನ್ನ ಉಪಯೋಗಿಸಿಕೊಂಡು ಆಹಾರ ಪದಾರ್ಥವನ್ನು ತಯಾರಿಸಲು ನಮಗೆ ತಿಳಿಯದೆ ಇರುವುದರಿಂದಲೇ ಈ ದಿನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ. ಅತಿಯಾದ ಒತ್ತಡದಿಂದ ಹಲವಾರು ತೀವ್ರ ತರವಾದ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದೇವೆ ಎಂದರು.