ಸಾಲಿಗ್ರಾಮ: ವಿಪ್ರ ಮಹಿಳಾ ಬಳಗದಿಂದ ಸಾಂಪ್ರದಾಯಿಕ ಬತ್ತ ನಾಟಿ

| Published : Jul 04 2024, 01:02 AM IST

ಸಾಲಿಗ್ರಾಮ: ವಿಪ್ರ ಮಹಿಳಾ ಬಳಗದಿಂದ ಸಾಂಪ್ರದಾಯಿಕ ಬತ್ತ ನಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬತ್ತದ ಸಸಿಗಳನ್ನು ನೆಡುವ ಮೂಲಕ ಜನರನ್ನು ಮತ್ತೆ ಸಾಂಪ್ರದಾಯಿಕ ಕೃಷಿ ಕಾಯಕದತ್ತ ಆಸಕ್ತರನ್ನಾಗಿಸುವ ಪ್ರಯತ್ನ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಸಾಂಪ್ರದಾಯಿಕ ಕೃಷಿ ಕಾಯಕಗಳಿಂದ ವಿಮುಖರಾಗಿ ಯಾಂತ್ರಿಕೃತ ಬೇಸಾಯಕ್ಕೆ ಪದ್ಧತಿಗೆ ಒಗ್ಗಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಇಲ್ಲಿನ ಸಾಲಿಗ್ರಾಮದ ವಿಪ್ರ ಮಹಿಳಾ ಬಳಗದ ಸದಸ್ಯರು ಸ್ವಯಂ ಪ್ರೇರಿತರಾಗಿ ಚಿತ್ರಪಾಡಿ ಗ್ರಾಮದ ಸಿ. ಮಂಜುನಾಥ ಉಪಾಧ್ಯ ಅವರ ಮನೆಯ ಕೃಷಿ ಭೂಮಿಗಿಳಿದು ಬತ್ತದ ಸಸಿಗಳನ್ನು ನೆಡುವ ಮೂಲಕ ಜನರನ್ನು ಮತ್ತೇ ಸಾಂಪ್ರದಾಯಿಕ ಕೃಷಿ ಕಾಯಕದತ್ತ ಆಸಕ್ತರನ್ನಾಗಿಸುವ ಪ್ರಯತ್ನ ಇತ್ತೀಚಿಗೆ ನಡೆಸಿದರು.

ವಿಪ್ರ ಬಳಗದ ಸಂಚಾಲಕಿ ವನಿತಾ ಉಪಾಧ್ಯ ಅವರ ನೇತೃತ್ವದಲ್ಲಿ ಸಂಪನ್ನಗೊಂಡ ಈ ಕಾರ್ಯಕ್ರಮಕ್ಕೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಯುರಾಲಜಿ ವಿಭಾಗದ ಸಹಪ್ರಾಧ್ಯಾಪಕ ಡಾ. ಕೆ. ಆರ್. ಸುರಾಗ್ ಅವರು ಬತ್ತದ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಮೂವತ್ತಕ್ಕೂ ಅಧಿಕ ಮಹಿಳಾ ಬಳಗದ ಸದಸ್ಯರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

--------------------------------

ಮರದಿಂದ ಬಿದ್ದು ಸಾವು

ಕಾರ್ಕಳ: ಮಾವಿನ ಮರದ ಸೊಪ್ಪು ಕಡಿಯುತಿದ್ದ ವೇಳೆ ಜಾರಿ ಬಿದ್ದು ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ.ಪೆರ್ಡೂರಿನ ಗೋಪಾಲ (32) ಮೃತರಾದವರು. ಮುದ್ರಾಡಿ ಗ್ರಾಮದ ನೆಲ್ಲಿಕಟ್ಟೆಯಲ್ಲಿ ರಮೇಶ ಎಂಬವರ ಮನೆಯ ಎದುರು ಅಡಕೆ ಮರದ ಬುಡಕ್ಕೆ ಸೊಪ್ಪನ್ನು ಹಾಕುವ ಸಲುವಾಗಿ ಮಾವಿನ ಮರವನ್ನು ಹತ್ತಿ ಸೊಪ್ಪನ್ನು ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದು ತಕ್ಷಣವೇ ಅವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಜ್ಜರಕಾಡಿಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದಾಗ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.