ಸಾರಾಂಶ
ಕಿಬ್ಬೆಟ್ಟ ಗ್ರಾಮದ ರಾಜ್ಯ ಹೆದ್ದಾರಿಗೆ ಬಸ್ ತಂಗುದಾಣದ ಪಕ್ಕದಲ್ಲಿದ್ದ ಗೋಣಿ ಮರವೊಂದು ಉರುಳಿ ಬಿದ್ದಿದೆ. ಒಂದು ಗಂಟೆ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕಿಬ್ಬೆಟ್ಟ ಗ್ರಾಮದ ರಾಜ್ಯ ಹೆದ್ದಾರಿಗೆ ಬಸ್ ತಂಗುದಾಣದ ಪಕ್ಕದಲ್ಲಿದ್ದ ಗೋಣಿಮರವೊಂದು ಉರುಳಿ ಬಿದ್ದಿದ್ದು, ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡುವಂತಾಯಿತು. ಬೆಳಗ್ಗಿನ ಸಮಯದಲ್ಲಿ ಸಾಕಷ್ಟು ವಾಹನ ಸಂಚಾರ ಇದ್ದರೂ, ಅದೃಷ್ಟವಶಾತ್ ಯಾವುದೇ ಅವಘಡಗಳು ಸಂಭವಿಸಲಿಲ್ಲ. ನಂತರ ಇಲ್ಲಿ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಸೆಸ್ಕ್ ಇಲಾಖೆಯವರು ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಮುಂದಾಗಲಿಲ್ಲ. ಒಂದು ಗಂಟೆಗಳ ಕಾಲ ಕಾದು ನಿಂತಿದ್ದ ವಾಹನಗಳ ಚಾಲಕರು ಮತ್ತು ಮಾಲೀಕರೇ ಹಣ ಸಂಗ್ರಹಿಸಿ ಖಾಸಗಿ ವ್ಯಕ್ತಿಯೊಬ್ಬರನ್ನು ಸ್ಥಳಕ್ಕೆ ಕರೆತಂದು ತುಂಡರಿಸಬೇಕಾಯಿತು. ನಂತರ ಒಟ್ಟಿಗೆ ಸೇರಿ ಮರವನ್ನು ರಸ್ತೆಯ ಬದಿಗೆ ತಳ್ಳಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಒಂದು ಗಂಟೆಗಳ ಕಾಲ ಸಾಕಷ್ಟು ಬಸ್‌ಗಳು ಹಾಗೂ ವಾಹನಗಳು ತಮ್ಮ ಕೆಲಸವನ್ನು ಬದಿಗಿರಿಸಿ ಕಾಯಬೇಕಾಯಿತು. ಈ ಸಂದರ್ಭ ಕನಿಷ್ಠ ಸಂಬಂಧಿಸಿದ ಇಲಾಖೆಯವರು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸದ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದರು.