ಟ್ರಾಫಿಕ್‌ ಫೈನ್‌: 21 ದಿನಗಳಲ್ಲಿ 29 ಲಕ್ಷ ದಂಡ ಪಾವತಿ

| Published : Sep 14 2025, 01:04 AM IST

ಟ್ರಾಫಿಕ್‌ ಫೈನ್‌: 21 ದಿನಗಳಲ್ಲಿ 29 ಲಕ್ಷ ದಂಡ ಪಾವತಿ
Share this Article
  • FB
  • TW
  • Linkdin
  • Email

ಸಾರಾಂಶ

ಇ-ಚಲನ್ ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ಘೋಷಿಸಿತ್ತು.

ಎಂ.ಅಫ್ರೋಜ್ ಖಾನ್ ಕನ್ನಡಪ್ರಭ ವಾರ್ತೆ ರಾಮನಗರ

ಸಂಚಾರಿ ಇ- ಚಲನ್‌ನಲ್ಲಿ ದಾಖಲಾಗಿರುವ ದಂಡ ಪ್ರಕರಣಗಳ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದ 21 ದಿನಗಳಲ್ಲಿ ಜಿಲ್ಲೆಯ ವಾಹನ ಮಾಲೀಕರು 29ಲಕ್ಷಕ್ಕೂ ಅಧಿಕ ದಂಡ ಪಾವತಿ ಮಾಡಿದ್ದಾರೆ.

ಇ-ಚಲನ್ ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಮಾತ್ರ ಶೇ. 50ರಷ್ಟು ರಿಯಾಯಿತಿ ದಂಡ ಪಾವತಿಗೆ ಗಡುವು ನೀಡಲಾಗಿತ್ತು.

ಜಿಲ್ಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉಲ್ಲಂಘನೆಯಾದ ಪ್ರಕರಣಗಳಿಗೆ ಮಾತ್ರ ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಸೀಟ್ ಬೆಲ್ಟ್ ಧರಿಸದಿರುವುದು, ಅತಿಯಾದ ವೇಗ, ಮೊಬೈಲ್ ಬಳಕೆ, ಲೈನ್ ಡಿಸಿಪ್ಲಿನ್ ಸೇರಿದಂತೆ ಇನ್ನಿತರ ಸಂಚಾರಿ ನಿಮಯ ಉಲ್ಲಂಘನೆ ಮಾಡಿ ಮೂರು - ನಾಲ್ಕು ವರ್ಷಗಳಿಂದ ದಂಡ ಉಳಿಸಿಕೊಂಡವರು ರಿಯಾಯಿತಿ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು.

ದಂಡ ಪಾವತಿ ಉಳಿಸಿಕೊಂಡಿರುವ ವಾಹನ ಸವಾರರು ಹತ್ತಿರದ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ವಿವರ ಪಡೆದು ಪಾವತಿಸಿದ್ದಾರೆ. ಇಷ್ಟೇ ಅಲ್ಲದೆ ಜಿಲ್ಲೆಗಳಲ್ಲಿ ಸಮೀಪದ ಪೊಲೀಸ್ ಠಾಣೆಗಳಿಗೆ ಖುದ್ದು ಭೇಟಿ ನೀಡಿ ರಿಯಾಯಿತಿ ದರದಲ್ಲಿ ದಂಡ ಕಟ್ಟಿದ್ದಾರೆ.

8241 ಪ್ರಕರಣಗಳ ದಂಡ ಪಾವತಿ:

ಆಗಸ್ಟ್ 23 ರಿಂದ ಸೆ.12ರ ಅಂತ್ಯಕ್ಕೆ 8241 ಸಂಚಾರಿ ಉಲ್ಲಂಘನೆ ಪ್ರಕರಣಗಳ ದಂಡವನ್ನು ರಿಯಾಯಿತಿ ದರದಲ್ಲಿ ಪಾವತಿ ಮಾಡಿದ್ದಾರೆ. ಮೊದಲ ದಿನವೇ 84 ಸಾವಿರ ದಂಡ ಪಾವತಿಯಾಗಿತ್ತು, ನಂತರದ ದಿನಗಳಲ್ಲಿ ನಿತ್ಯ ಸರಾಸರಿ 1 ರಿಂದ 1.5 ಲಕ್ಷದಂತೆ ದಂಡ ಪಾವತಿಯಾಗಿದೆ.

ಬಹಳಷ್ಟು ಜನರು ಆನ್‌ಲೈನ್ ಮೂಲಕವೇ ದಂಡ ಪಾವತಿ ಮಾಡಿದ್ದಾರೆ. ಇನ್ನುಳಿದವರು ರಾಮನಗರ, ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪಾವತಿ ಮಾಡಿದ್ದಾರೆ. ಕಡೆಯ ಐದು ದಿನಗಳಲ್ಲಿ 1.80 ರಿಂದ 3.80 ಲಕ್ಷ ರು.ಗಳವರೆಗೆ ದಂಡ ಪಾವತಿ ಮಾಡಿದ್ದಾರೆ.

...ಕೋಟ್ ...

ಇ-ಚಲನ್ ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿಯನ್ನು ಘೋಷಿಸಿತ್ತು. ಆಗಸ್ಟ್ 23ರಿಂದ ಸೆ.12ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಒಟ್ಟು 8241 ಪ್ರಕರಣಗಳಿಂದ 29,60,500 ರುಪಾಯಿ ದಂಡವನ್ನು ವಾಹನ ಮಾಲೀಕರು ಪಾವತಿ ಮಾಡಿದ್ದಾರೆ.

- ಆರ್,ಶ್ರೀನಿವಾಸ್ ಗೌಡ, ಎಸ್‌ಪಿ

---

13ಕೆಆರ್ ಎಂಎನ್ 5.ಜೆಪಿಜಿ

ಪೊಲೀಸರು ಶೇ.50ರಷ್ಟು ರಿಯಾಯಿತಿ ಪಡೆದು ದಂಡ ಪಾವತಿಸಿದ ರಶೀದಿ ಪ್ರದರ್ಶಿಸಿದರು.

----