ಸಾರಾಂಶ
ಚನ್ನಪಟ್ಟಣ: ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಅಪಘಾತದ ವೇಳೆ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ತಿಳಿಸಿದರು.
ಚನ್ನಪಟ್ಟಣ: ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಅಪಘಾತದ ವೇಳೆ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ತಿಳಿಸಿದರು.
ನಗರದ ಟ್ರಾಫಿಕ್ ಠಾಣಾ ಆವರಣದಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪಘಾತಗಳು ಯಾವಾಗ ಹೇಗೆ ಸಂಭವಿಸುತ್ತವೆ ಎಂಬುದು ಊಹಿಸಲಸಾಧ್ಯ. ಆದರೆ, ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಸಾಕಷ್ಟು ಅಪಘಾತಗಳನ್ನು ತಪ್ಪಿಸಬಹುದು. ಹೆಲ್ಮೆಟ್ ಧರಿಸುವಂತೆ ಹೇಳುವುದು ನಮ್ಮ ಸ್ವಾರ್ಥಕ್ಕಲ್ಲ. ನಿಮ್ಮ ಅಮೂಲ್ಯ ಜೀವಗಳನ್ನು ಉಳಿಸುವುದಕ್ಕಾಗಿಯೆ. ಅಪಘಾತದ ವೇಳೆ ಹೆಲ್ಮೆಟ್ ಧರಿಸಿದ್ದರೆ, ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಕಿವಿಮಾತು ಹೇಳಿದರು.ಎಎಸ್‌ಪಿ ಸುರೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಲ್ಮೆಟ್ ಧರಿಸದ ಕಾರಣ ಬೈಕ್ ಸವಾರರು ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವುದು ವಿಷಾದನೀಯ. ಇಂತಹ ಸಮಯದಲ್ಲಿ ಹೆಲ್ಮೆಟ್ ಧರಿಸಿದ್ದರೆ ಜೀವ ಉಳಿಸಿಕೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಹೆಲ್ಮೆಟ್ ಧರಿಸುವಂತೆ ಜೊತೆಗೆ ಹಿಂಬದಿ ಸವಾರರು ಸಹ ಹೆಲ್ಮೆಟ್ ಧರಿಸಿ ಪ್ರಯಾಣಿಸುವಂತೆ ಮನವಿ ಮಾಡಿದರು.
ಎಸ್‌ಪಿ ಶ್ರೀನಿವಾಸ್‌ಗೌಡ ಹೆಲ್ಮೆಟ್ ಧರಿಸಿದ ವಾಹನ ಸವಾರರಿಗೆ ಗುಲಾಬಿ ನೀಡಿ, ಧರಿಸದವರಿಗೆ ಕರಪತ್ರ ಹಂಚಿ ಅರಿವು ಮೂಡಿಸಿದರು.ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದ ಆಟೋ ಸ್ಟಾಂಡ್, ಕಾರು ಸ್ಟಾಂಡ್ ಹಾಗೂ ಬಸ್ ನಿಲ್ದಾಣಗಳಲ್ಲಿ ಹೆಲ್ಮೆಟ್ ಹಾಗೂ ಸಂಚಾರ ನಿಯಮಗಳ ಬಗ್ಗೆ ಚಾಲಕರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಈ ವೇಳೆ ಡಿವೈಎಸ್‌ಪಿ ಗಿರಿ, ವೃತ್ತ ನಿರೀಕ್ಷಕ ರವಿಕಿರಣ್, ಕೃಷ್ಣ, ಪಿಎಸ್‌ಐ ಹರೀಶ್, ಸಂಚಾರ ಪೊಲೀಸ್ ಠಾಣೆಯ ಶೋಭಾ, ಪಾಂಡು, ಮಾದೇಶ್, ಹನಿಯೂರು ಕುಮಾರ್, ಮಂಜು ಹಾಜರಿದ್ದರು.ಪೋಟೊ೧೭ಸಿಪಿಟಿ೩:
ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಅರಿವು ಮೂಡಿಸಿದರು.