ಸಂಚಾರ ನಿಯಮ ಉಲ್ಲಂಘನೆ: ಮಾಲೀಕನಿಂದ ದಂಡ ವಸೂಲಿ

| Published : Jun 22 2025, 01:18 AM IST

ಸಂಚಾರ ನಿಯಮ ಉಲ್ಲಂಘನೆ: ಮಾಲೀಕನಿಂದ ದಂಡ ವಸೂಲಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರು ಮಾಲೀಕರೊಬ್ಬರಿಂದ ಬರೋಬ್ಬರಿ 27 ಸಾವಿರ ರು. ದಂಡ ವಸೂಲಿ ಮಾಡಲಾಗಿದೆ.

ಶಿವಮೊಗ್ಗ: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರು ಮಾಲೀಕರೊಬ್ಬರಿಂದ ಬರೋಬ್ಬರಿ 27 ಸಾವಿರ ರು. ದಂಡ ವಸೂಲಿ ಮಾಡಲಾಗಿದೆ. ಶಿವಮೊಗ್ಗದ ಗೋಪಿಸರ್ಕಲ್ ಬಳಿ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ತಿರುಮಲೇಶ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕಾರೊಂದರ ದಾಖಲೆ ಪರಿಶೀಲನೆ ನಡೆಸಿದಾಗ ಕಾರು ಮಾಲೀಕ ಒಟ್ಟು 29 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಸಿಸಿ ಕ್ಯಾಮರಾಗಳ ಮೂಲಕ ಐಟಿಎಂಸ್ ತಂತ್ರಾಂಶದಲ್ಲಿ ದಾಖಲಾಗಿರುವುದು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 27 ಸಾವಿರ ರು. ದಂಡ ವಸೂಲಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಪ್ರಶಾಂತ್, ಪ್ರವೀಣ್ ಪಾಟೀಲ್, ಶಂಕರಲಿಂಗ ಇದ್ದರು.