ರಿಕ್ಷಾದಲ್ಲಿ ಒಂದೂವರೆ ಕೆಜಿ ಗಾಂಜಾ ಸಾಗಾಟ; ಆರೋಪಿ ಬಂಧನ

| Published : Jan 17 2025, 12:47 AM IST

ಸಾರಾಂಶ

ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ನೌಶಾದ್ ಎಂಬಾತ ತನಗೆ ಮಾರಾಟ ಮಾಡಲು ನೀಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸಾಗಾಟಕ್ಕೆ ಬಳಿಸಿದ ಆಟೋ, ಗಾಂಜಾವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಉಪ್ಪಿನಂಗಡಿ: ಆಟೋದಲ್ಲಿ ಒಂದೂವರೆ ಕೆಜಿ ಗಾಂಜಾವನ್ನು ಮಾರಾಟಕ್ಕಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಗಾಂಜಾ ಸಹಿತ ದಸ್ತಗಿರಿ ಮಾಡಿದ ಘಟನೆ ಗುರುವಾರ ನಡೆದಿದೆ.

ಗಸ್ತುನಿರತ ಉಪ್ಪಿನಂಗಡಿ ಎಸ್‌ಐ ಅವಿನಾಶ್‌ ಎಚ್‌. ಮ್ತು ತಂಡ ೩೪ನೇ ನೆಕ್ಕಿಲಾಡಿ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಬಂಟ್ವಾಳ ಕಡೆಯಿಂದ ಉಪ್ಪಿನಂಗಡಿಯತ್ತ ಸಂಚರಿಸುತ್ತಿದ್ದ ಆಟೋವನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ರಿಕ್ಷಾ ನಿಲ್ಲಿಸದೆ ಚಲಾಯಿಸಿಕೊಂಡು ಹೋದ ಚಾಲಕ ರಿಕ್ಷಾದಿಂದ ಇಳಿದು ಪರಾರಿಯಾಗಲು ಯತ್ನಿಸಿದ. ಕೂಡಲೇ ಪೊಲೀಸರು ಆಟೋ ಚಾಲಕ, ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಳೆಂಜಿಬೈಲ್ ಕ್ವಾರ್ಟಸ್‌ ನಿವಾಸಿ ಅಬ್ದುಲ್ ಸಲೀಂ (೩೫) ನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸಾಗಿಸುತ್ತಿರುವುದು ಕಂಡುಬಂದಿದೆ. ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ನೌಶಾದ್ ಎಂಬಾತ ತನಗೆ ಮಾರಾಟ ಮಾಡಲು ನೀಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸಾಗಾಟಕ್ಕೆ ಬಳಿಸಿದ ಆಟೋ, ಗಾಂಜಾವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮಾರ್ಗದರ್ಶನ ನೀಡಿದ್ದು, ಸಿಬ್ಬಂದಿ ನಾಗರಾಜ, ಮಹದೇವ, ವಡಗೇರಿ ಕಿರಣ, ರಾಮನಗೌಡ, ಲಾಲು ಪ್ರಸಾದ್ ಭಾಗವಹಿಸಿದ್ದರು.