ಜೆನ್ ಜೀ ಯುಗದ ಇಂದಿನ ಸಂದರ್ಭದಲ್ಲಿ ಅವರ ಜೀವನದಲ್ಲಿ ನಡೆಯುತ್ತಿರುವ ಪ್ರೀತಿಯ ಆಟಗಳು, ತಾಯಿ- ಮಕ್ಕಳ ಅನ್ಯೋನ್ಯತೆ, ಸ್ನೇಹ ಬಾಂಧವ್ಯ ಕುರಿತು ಇದೇ ತಿಂಗಳ ಆಗಸ್ಟ್ 30 ರಂದು ಸಂಜೆ ನಗರದ ಗಣೇಶ ಮೈದಾನದಲ್ಲಿ ಖೇಲ್ ಚಿತ್ರದ ಟ್ರೆಲರ್ ಬಿಡುಗಡೆ ಮಾಡಲಾಗುತ್ತಿದೆ ‘ಖೇಲ್’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಭರತ ವಿ.ಜೆ. ತಿಳಿಸಿದರು.
ಬೀದರ್: ಜೆನ್ ಜೀ ಯುಗದ ಇಂದಿನ ಸಂದರ್ಭದಲ್ಲಿ ಅವರ ಜೀವನದಲ್ಲಿ ನಡೆಯುತ್ತಿರುವ ಪ್ರೀತಿಯ ಆಟಗಳು, ತಾಯಿ- ಮಕ್ಕಳ ಅನ್ಯೋನ್ಯತೆ, ಸ್ನೇಹ ಬಾಂಧವ್ಯ ಕುರಿತು ಇದೇ ತಿಂಗಳ ಆಗಸ್ಟ್ 30 ರಂದು ಸಂಜೆ ನಗರದ ಗಣೇಶ ಮೈದಾನದಲ್ಲಿ ಖೇಲ್ ಚಿತ್ರದ ಟ್ರೆಲರ್ ಬಿಡುಗಡೆ ಮಾಡಲಾಗುತ್ತಿದೆ ‘ಖೇಲ್’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಭರತ ವಿ.ಜೆ. ತಿಳಿಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ನಡೆಯುವ ಸಮಾರಂಭದಲ್ಲಿ ಚಿತ್ರದ ಇಡೀ ತಂಡದ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಚಿತ್ರದ ನಾಯಕ ನಟ ಯುವರಾಜ ಗೌಡ, ನಾಯಕಿ ನಟಿ ಆಶಿಕಾಗೌಡ, ವಿಶೇಷ ಪಾತ್ರದಲ್ಲಿ ನಟಿಸಿದ ನಟಿ ಸಂಗೀತಾ, ಚಿತ್ರದ ಸಂಗೀತ ನಿರ್ದೇಶಕ ತ್ಯಾಗರಾಜ್ ಎಸ್. ಸೇರಿದಂತೆ ಛಾಯಾಗ್ರಾಹಕರು ಹಾಗೂ ಇಡೀ ಚಿತ್ರತಂಡ ಬೀದರ ಜಿಲ್ಲೆಗೆ ಆಗಮಿಸುತ್ತಿದೆ ಎಂದರು.ಈ ಚಿತ್ರವನ್ನು ಬೆಂಗಳೂರು, ಮೈಸೂರು ಮತ್ತು ಉತ್ತರಾಖಂಡ ರಾಜ್ಯದಲ್ಲಿ ಚಿತ್ರೀಕರಿಸಲಾಗಿದೆ. ಎರಡು ಗಂಟೆ ಐದು ನಿಮಿಷ ಅವಧಿಯ ಈ ಚಲನಚಿತ್ರವು ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದ ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚಿತ್ರ ತಂಡದ ಸದಸ್ಯರಾದ ಸೂರ್ಯಕಾಂತ ಜೆಮಶೆಟ್ಟಿ, ಧನರಾಜ ಖಂಡ್ರೆ, ನಟ ಯುವರಾಜಗೌಡ ಉಪಸ್ಥಿತರಿದ್ದರು.