ಆಸಕ್ತ ಮಹಿಳೆ ಮತ್ತು ಪುರುಷ ಕಲಾವಿದರು ನೇರವಾಗಿ ಸಂದರ್ಶನಕ್ಕೆ ಹಾಜರಾಗುವುದು. ಹಿರಿಯ ರಂಗ ನಿರ್ದೇಶಕರು ತರಬೇತಿಯ ನಿರ್ದೇಶಕರಾಗಿರುತ್ತಾರೆ. ಅಭ್ಯರ್ಥಿಗಳ ವಯೋಮಿತಿ ೧೮ ರಿಂದ ೪೦ ವರ್ಷ. ರಂಗಸಂಗೀತ ಬಲ್ಲವರಿಗೆ ಮೊದಲ ಆದ್ಯತೆ, ಆಯ್ಕೆಯಾದ ಕಲಾವಿದರಿಗ ₹೧೦ ಸಾವಿರ ಗೌರವ ಸಂಭಾವನೆ, ತರಬೇತಿ ಪೂರ್ಣಗೊಂಡ ನಂತರ ನಾಟಕ ಪ್ರದರ್ಶನ ಆಯೋಜನೆ.
ಕನ್ನಡಪ್ರಭ ವಾರ್ತೆ, ಮಂಡ್ಯ
ದಾವಣಗೆರೆಯ ವೃತ್ತಿ ರಂಗಭೂಮಿ ಮತ್ತು ಮಂಡ್ಯದ ಕರ್ನಾಟಕ ಸಂಘದ ಸಹಕಾರದೊಂದಿಗೆ ನಗರದಲ್ಲಿ ವಿನೂತನ ಪೌರಾಣಿಕ ನಾಟಕದ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.ಈ ತರಬೇತಿ ಶಿಬಿರಕ್ಕೆ ಮಹಿಳೆ ಮತ್ತು ಪುರುಷ ಕಲಾವಿದರು ಸೇರಿದಂತೆ ೧೫ ಜನ ಅರ್ಹ ಕಲಾವಿದರನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸಕ್ತ ಮಹಿಳೆ ಮತ್ತು ಪುರುಷ ಕಲಾವಿದರು ನೇರವಾಗಿ ಸಂದರ್ಶನಕ್ಕೆ ಹಾಜರಾಗುವುದು. ಹಿರಿಯ ರಂಗ ನಿರ್ದೇಶಕರು ತರಬೇತಿಯ ನಿರ್ದೇಶಕರಾಗಿರುತ್ತಾರೆ. ಅಭ್ಯರ್ಥಿಗಳ ವಯೋಮಿತಿ ೧೮ ರಿಂದ ೪೦ ವರ್ಷ. ರಂಗಸಂಗೀತ ಬಲ್ಲವರಿಗೆ ಮೊದಲ ಆದ್ಯತೆ, ಆಯ್ಕೆಯಾದ ಕಲಾವಿದರಿಗ ₹೧೦ ಸಾವಿರ ಗೌರವ ಸಂಭಾವನೆ, ತರಬೇತಿ ಪೂರ್ಣಗೊಂಡ ನಂತರ ನಾಟಕ ಪ್ರದರ್ಶನ ಆಯೋಜನೆ. ರಂಗಾಯಣ ಏರ್ಪಡಿಸುವ ಮುಂದಿನ ಪ್ರದರ್ಶನಗಳಲ್ಲೂ ಕಲಾವಿದರು ಕಡ್ಡಾಯವಾಗಿ ಭಾಗವಹಿಸುವುದು. ಪ್ರದರ್ಶನಕ್ಕೆ ನಿಯಮಾನುಸಾರ ಗೌರವ ಸಂಭಾವನೆ ನೀಡಲಾಗುವುದು ಎಂದರು.ಆಸಕ್ತ ಕಲಾವಿದರು ಆಧಾರ್ಕಾರ್ಡ್, ರಂಗಶಿಕ್ಷಣ, ಔಪಚಾರಿಕ ಶಿಕ್ಷಣದ ಪ್ರಮಾಣಪತ್ರ, ರಂಗಭೂಮಿ ಅನುಭವ ಕುರಿತ ಸ್ವ- ವಿವರ ಪತ್ರವನ್ನು ಸಂದರ್ಶನದ ವೇಳೆ ಹಾಜರುಪಡಿಸಬೇಕು. ಮೂಲ ದಾಖಲೆಗಳೊಂದಿಗೆ ನ.೧೮ರಂದು ಮಧ್ಯಾಹ್ನ ೨ ಗಂಟೆಗೆ ಕರ್ನಾಟಕ ಸಂಘದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಹಾಜರಾಗುವಂತೆ ತಿಳಿಸಿದರು.
ಕಂದಗಲ್ ಹನುಮಂತರಾಯ ರಚಿಸಿರುವ ರಕ್ತರಾತ್ರಿ ಪೌರಾಣಿಕ ನಾಟಕಕ್ಕೆ ಕಲಾವಿದರಿಗೆ ತರಬೇತಿ ನೀಡಿ ಜನವರಿ ಮೊದಲ ವಾರದಲ್ಲಿ ನಾಟಕ ಪ್ರದರ್ಶನ ಏರ್ಪಡಿಸುವುದಾಗಿ ತಿಳಿಸಿದರು.ಗೋಷ್ಠಿಯಲ್ಲಿ ಪ್ರೊ.ಬಿ.ಜಯಪ್ರಕಾಶಗೌಡ, ಕಾರಸವಾಡಿ ಸುರೇಶ್, ಸೋಮಶೇಖರ್ ಇದ್ದರು.
ನಾಟಕಗಳ ವೀಕ್ಷಣೆಗೆ ₹೮೦- ₹೧೦೦ ಕೋಟಿ ಖರ್ಚುಉತ್ತರ ಕರ್ನಾಟಕದಲ್ಲಿ ನಾಟಕಗಳ ವೀಕ್ಷಣೆಗೆ ಜನರು ವಾರ್ಷಿಕ ₹೮೦ ರಿಂದ ₹೧೦೦ ಕೋಟಿ ಹಣ ಖರ್ಚು ಮಾಡುತ್ತಾರೆ. ಬಾದಾಮಿ ಬನಶಂಕರಿ ಜಾತ್ರೆ ವೇಳೆ ಒಂದೇ ದಿನ ₹೪೦ ಸಾವಿರ ಜನರು ನಾಟಕಗಳನ್ನು ವೀಕ್ಷಣೆ ಮಾಡುವುದಾಗಿ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.
ಜನರು ನಾಟಕಗಳ ವೀಕ್ಷಣೆಗೆ ಖರ್ಚು ಮಾಡುವ ಹಣವನ್ನು ಸರ್ಕಾರ ರಂಗಾಯಣಗಳಿಗೆ ಕೊಡುವುದೇ ಇಲ್ಲ. ನಾಟಕಗಳು ಇಂದಿಗೂ ಆ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಉತ್ತರ ಕರ್ನಾಟಕದ ಜನರು ಸಾಮಾಜಿಕ ನಾಟಕಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅಲ್ಲಿನ ನಾಟಕ ಕಂಪನಿಗಳು ಒಂದು ನಾಟಕಕ್ಕೆ ₹೩.೫೦ ಲಕ್ಷ ನಿಂದ ₹೪ ಲಕ್ಷ ಖರ್ಚು ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮೈಸೂರು ಭಾಗದಲ್ಲಿ ಪೌರಾಣಿಕ ನಾಟಕಗಳಿಗೆ ಹೆಚ್ಚಿನ ಮಹತ್ವವಿದೆ. ಇಲ್ಲಿನ ಜನರ ಒಲವು ಪೌರಾಣಿಕ ನಾಟಕಗಳ ಮೇಲೆ ಹೆಚ್ಚಿದೆ. ವೃತ್ತಿ ರಂಗಭೂಮಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ಅದಕ್ಕೆ ಆಧುನಿಕತೆಯ ಸ್ಪರ್ಶ ಕೊಡುವುದು ನಮ್ಮ ಮೂಲ ಉದ್ದೇಶವಾಗಿದೆ. ಅದಕ್ಕಾಗಿ ವೃತ್ತಿ ರಂಗಭೂಮಿ ಕಲಾವಿದರನ್ನು ತರಬೇತಿ ಮೂಲಕ ಹುಟ್ಟಿಹಾಕಿ ನಾಟಕ ಪ್ರದರ್ಶನಗಳನ್ನು ನೀಡುವ ಆಶಯದೊಂದಿಗೆ ಮುನ್ನಡೆಯುತ್ತಿರುವುದಾಗಿ ಹೇಳಿದರು.