ಕೌಶಲ್ಯ ವೃದ್ಧಿಗೆ ತರಬೇತಿ ಅವಶ್ಯ: ವಿಪ ಮಾಜಿ ಸದಸ್ಯ ಸಿದ್ದರಾಮಣ್ಣ

| Published : Jun 26 2024, 12:44 AM IST

ಕೌಶಲ್ಯ ವೃದ್ಧಿಗೆ ತರಬೇತಿ ಅವಶ್ಯ: ವಿಪ ಮಾಜಿ ಸದಸ್ಯ ಸಿದ್ದರಾಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಚೈತನ್ಯ ಸಭಾಂಗಣದಲ್ಲಿ ದಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯಿಂದ ಸ್ವಸಹಾಯ ಸಂಘಗಳ ಮಹಿಳಾ ನಾಯಕಿಯರಿಗೆ ಹಮ್ಮಿಕೊಂಡಿದ್ದ ಒಕ್ಕೂಟ ಬಲ ವರ್ಧನೆ ತರಬೇತಿ ಕಾರ್ಯಗಾರವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಉತ್ತಮ ತರಬೇತಿಯಿಂದ ಕೌಶಲ್ಯವೃದ್ಧಿಗೆ ಸಹಕಾರಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಅಭಿಪ್ರಾಯಪಟ್ಟರು.

ನಗರದ ಚೈತನ್ಯ ಸಭಾಂಗಣದಲ್ಲಿ ಮಂಗಳವಾರ ದಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯಿಂದ ಸ್ವಸಹಾಯ ಸಂಘಗಳ ಮಹಿಳಾ ನಾಯಕಿಯರಿಗೆ ಹಮ್ಮಿಕೊಂಡಿದ್ದ ಒಕ್ಕೂಟ ಬಲ ವರ್ಧನೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಬದಲಾಗುವ ತಂತ್ರಜ್ಞಾನ ಮತ್ತು ಕೌಶಲ್ಯ ಕಲಿಕೆಗೆ ತರಬೇತಿ ಅತ್ಯಾವಶ್ಯಕ, ಪ್ರತಿ ತರಬೇತಿಯು ಮಹಿಳೆಯರಲ್ಲಿ ನಾಯಕತ್ವ ಗುಣ ಇಮ್ಮಡಿಗೊಳಿಸುತ್ತದೆ ಎಂದರು.

ಸಿಎಸ್‌ಐ ಶಿವಮೊಗ್ಗ ಸಿರಿ ಲಿಜನ್ ಅಧ್ಯಕ್ಷ ಉಷಾ ಉತ್ತಪ್ಪ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕು. ಹೊಸ ಹೊಸ ಕಲಿಕೆ ಮೂಲಕ ತನ್ನ ನೆರೆಹೊರೆಯವರಿಗೆ ಮಾರ್ಗದರ್ಶನ ಮಾಡಬೇಕು, ಸ್ನೇಹ ತಾಳ್ಮೆಯಿಂದ ಒಕ್ಕೂಟದ ಬಲವರ್ಧನೆ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಂ. ಫಾದರ್ ಪಿಯುಷ್ ಡಿಸೋಜಾ ಮಾತನಾಡಿ, ಮಹಿಳೆಯರು ಕುಟುಂಬ ನಿರ್ವಹಣೆ ಜೊತೆಗೆ ಮಕ್ಕಳ ನಿಜವಾದ ಗುರುಗಳಾಗಿ ಸಂಸ್ಕಾರ ಮತ್ತು ಸನ್ನಡತೆ ಕಲಿಸುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಾರೆ, ಅದೇ ರೀತಿ ಮಕ್ಕಳಲ್ಲಿ ನಿಜವಾದ ಜ್ಞಾನ ವೃದ್ಧಿಸಿಕೊಳ್ಳುವ, ತಪ್ಪು, ಸರಿ ಕುರಿತು ನೈಜ ಜ್ಞಾನ ಪಡೆಯಲು ಪ್ರೇರಣೆ ನೀಡುವ ಕೆಲಸ ಮುಖ್ಯವಾಗಿ ಆಗಬೇಕು ಎಂದರು.

ಜ್ಞಾನವೇಶಕ್ತಿ, ಸುಜ್ಞಾನದಿಂದ ಸಮಾಜ ಹಾಗೂ ಕುಟುಂಬ ಪ್ರಗತಿಯತ್ತ ಮುನ್ನಡೆಸುವ ಜೊತೆಗೆ ಸ್ವಸಹಾಯ ಒಕ್ಕೂಟದ ಬಲವರ್ಧನೆಯನ್ನು ಮಹಿಳಾ ನಾಯಕಿಯರು ಮಾಡಬೇಕು ಎಂದು ಹೇಳಿದರು.

ತಾಲೂಕು ಒಕ್ಕೂಟದ ಅಧ್ಯಕ್ಷರಾದ ಚಂದ್ರಮ್ಮ ಇದ್ದರು. ಕಾರ್ಯಕ್ರಮದ ಸ್ವಾಗತವನ್ನು ಜಗದೀಶ್ ನೆರವೇರಿಸಿದರು.