ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಪಿಎಂ ವಿಶ್ವಕರ್ಮ ಯೋಜನೆಯಡಿ ಇದುವರೆಗೆ 700 ಮಂದಿ ಫಲಾನುಭವಿಗಳಿಗೆ ತರಬೇತಿ ನೀಡಲಾಗಿದೆ ಎಂದು ಪ್ರಸಾರ ಟ್ರಸ್ಟ್ ಕಾರ್ಯದರ್ಶಿ ಡಿ.ಎಂ. ಅಂಬಿಕಾ ಪ್ರಸನ್ನಕುಮಾರ್ ಹೇಳಿದರು.ಓರಿಯೆಂಟಲ್ ಎಜುಟಿಕ್ ಪ್ರೈವೇಟಿ ಲಿಮಿಟೆಡ್ ನವರ ಟ್ರೈನಿಂಗ್ ಪಾರ್ಟನರ್ ಪ್ರಸಾರ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಸ್ವ ಉದ್ಯೋಗಕ್ಕೆ ಯೋಜನೆ ಪೂರಕವಾಗಿದೆ. ಚಿತ್ರದುರ್ಗ ನಗರದ ಐಯುಡಿಪಿ ಸರಸ್ವತಿ ಪುರಂನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಬಡಿಗೆ ವೃತ್ತಿ ಮಾಡುವವರು, ದೋಣಿ ತಯಾರಿಸುವವರು, ಕಮ್ಮಾರ ವೃತ್ತಿ , ಕಲ್ಲುಕುಟಿಗ ವೃತ್ತಿ, ಟೈಲರಿಂಗ್, ಚಾಫೆ-ಕಸ ಪೊರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕ ವೃತ್ತಿ ಮಾಡುವವರು, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ದೋಬಿ, ಅಭರಣ ತಯಾರಕರು, ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿ, ಚಮ್ಮಾರ, ಪಾದರಕ್ಷೆ ತಯಾರಕರು, ಬೀಗ ತಯಾರಿಕಾ ಕುಶಲಕರ್ಮಿಗಳು ಸೇರಿದಂತೆ 18 ಬಗೆಯ ಕುಲ ಕಸುಬು ನಂಬಿ ಜೀವನ ನಡೆಸುವ ವಿಶ್ವಕರ್ಮ ಪಾಲುದಾರರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.ಈ ಕುಶಲಕರ್ಮಿಗಳಿಗೆ ವಿಶೇಷ ಯೋಜನೆ ಜಾರಿಗೆ ತರುವ ಮೂಲಕ ₹3 ಲಕ್ಷದವರೆಗೂ ಸಾಲ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಅದಲ್ಲದೇ 30 ತಿಂಗಳ ಅವಧಿಯೊಳಗೆ ಶೇ.5 ಕಡಿಮೆ ಬಡ್ಡಿದರಲ್ಲಿ ಸಾಲ ಮರುಪಾವತಿಗೂ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಶೇ.8ರಷ್ಟು ಬಡ್ಡಿ ಸಬ್ಸಿಡಿ ತುಂಬಲಿದೆ ಎಂದರು.
ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು, ಎನ್ ಎಸ್ ಟಿ ಐ ನೋಡಲ್ ಅಧಿಕಾರಿ ಶೋಭಾ ಇದ್ದರು.