ಸಾರಾಂಶ
ಸುಂಟಿಕೊಪ್ಪದ ರೈತರಿಗೆ ಕಾಫಿ ಕೊಯ್ಲು ಮತ್ತು ಸಂಸ್ಕರಣೆ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಒಡಿಶಾದ ಇಂಟಿಗ್ರೇಟೆಡ್ ಸೋಶಿಯಲ್ ವೆಲ್ಫೇರ್ ಅಂಡ್ ರಿಸರ್ಚ್ ಸೆಂಟರ್ ಭುವನೇಶ್ವರ, ಮಡಿಕೇರಿ ಹೈಲ್ಯಾಂಡ್ ಫಾರ್ಮರ್ ಪ್ರೊಡ್ಯೂಸರ್ಸ್ ಕಂಪನಿ ಹಾಗೂ ಕಾಫಿ ಮಂಡಳಿ ಸಹಯೋಗದಲ್ಲಿ ಸುಂಟಿಕೊಪ್ಪದ ರೈತರಿಗೆ ಕಾಫಿಕೊಯ್ಲು ಮತ್ತು ಸಂಸ್ಕರಣೆ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.ಸುಂಟಿಕೊಪ್ಪ ಕೊಡವ ಸಮಾಜದ ಸಭಾಂಗಣದಲ್ಲಿ ಸುಂಟಿಕೊಪ್ಪದ ರೈತರಿಗೆ ಕಾಫಿಕೊಯ್ಲು ಮತ್ತು ಸಂಸ್ಕರಣೆ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಮುಖ್ಯಅತಿಥಿಗಳಾಗಿ ಎಸ್‌ಎಲ್‌ಓ ಸೋಮವಾರಪೇಟೆ ಡಾ.ರಂಜಿತ್‌ಕುಮಾರ್ ಅವರು ಕೊಯ್ಲಿನ ನಂತರದ ತಂತ್ರಜ್ಞಾನದ ಮಹತ್ವದ ಉದ್ದೇಶಿಸಿ, ಕಾಫಿಯನ್ನು ಒಣಗಿಸುವುದು, ಕಾಫಿ ಜೌಟ್ ಹಲ್ಲಿಂಗ್ ಮತ್ತು ರೋಸ್ಟಿಂಗ್ ಸೇರಿದಂತೆ ಕೊಯ್ಲು ನಂತರದ ತಂತ್ರಜ್ಞಾನದ ಬಳಕೆಯ ಬಗ್ಗೆ ಮಾಹಿತಿಯನ್ನು ನೀಡಿದರು.ಕಾಫಿ ಮಂಡಳಿಯ ವಿಸ್ತರಣಾಧಿಕಾರಿ ಲಕ್ಷ್ಮೀಕಾಂತ್ ಕಾಫಿ ಕೊಯ್ಲು ಮತ್ತು ಸಂಸ್ಕರಣೆ ಕುರಿತು ತರಬೇತಿ ನೀಡಿದ್ದ ಅವರು ಕಾಫಿ ಕೊಯ್ಲಿನ ನಂತರದ ಪ್ರಕ್ರಿಯೆಗಳು, ಕಾಫಿ ಗುಣಮಟ್ಟದ ಮೇಲೆ ಅವುಗಳ ಪ್ರಭಾವ ಮತ್ತು ರೈತರಿಗೆ ಉತ್ತಮ ಗುಣಮಟ್ಟವನ್ನು ಪಡೆಯಲು ಉತಮ ವಿಧಾನಗಳನ್ನು ಅನುರಿಸರಿಸುವುದು ಮುಖ್ಯ ಎಂದರು.
ಕಾಫಿ ಮಂಡಳಿಯ ಡಾ.ಎಸ್.ಎ.ನಡಾಪ್ ಕಾಫಿಗಾಗಿ ಮಣ್ಣಿನ ಫಲವತ್ತೆ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಲಾಯಿತು.ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಸಹಾಯದಿಂದ ಮಣ್ಣಿನ ಫಲವತ್ತತೆಯನ್ನು ಹೇಗೆ ಕಾಪಾಡಿಕೊಳ್ಳುವುದು, ಮತ್ತು ಮಣ್ಣಿನ ಪರೀಕ್ಷೆಗಾಗಿ ಮಣ್ಣಿನ ಸಂಗ್ರಹಣೆಯ ಪ್ರಕ್ರಿಯೆಯ ಬಗ್ಗೆ ಮಾಹಿತಿ ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ವ್ಯಾಪ್ತಿಯ 40ಕ್ಕೂ ಹೆಚ್ಚು ರೈತರು ಭಾಗವಹಿಸಿದರು.ಕಾರ್ಯಕ್ರಮಕ್ಕೆ ಯೋಜನಾ ಸಂಯೋಜಕರಾದ ಶಿವಕುಮಾರ್ ಸ್ವಾಗತಿಸಿದರು. ಮಡಿಕೇರಿ ಹೈಲ್ಯಾಂಡ್ ಫಾರ್ಮರ್ ಪ್ರೊಡ್ಯೂಸರ್ಸ್ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೀತ್ ಆರ್ ಸಭೆಗೆ ವಂದಿಸಿದರು.