ಬ್ರಹ್ಮಾವರ ಕಥೋಲಿಕ್ ಕ್ರೆಡಿಟ್‌ ಸೊಸೈಟಿಯಲ್ಲಿ ತರಬೇತಿ ಕಾರ್ಯಾಗಾರ

| Published : Apr 05 2025, 12:50 AM IST

ಬ್ರಹ್ಮಾವರ ಕಥೋಲಿಕ್ ಕ್ರೆಡಿಟ್‌ ಸೊಸೈಟಿಯಲ್ಲಿ ತರಬೇತಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಹ್ಮಾವರ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಬ್ಬಂದಿ ತರಬೇತಿ ಕಾರ್ಯಾಗಾರ ಇತ್ತೀಚೆಗೆ ಸಂಸ್ಥೆಯ ಪ್ರದಾನ ಕಚೇರಿಯಲ್ಲಿ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಸ್ಥಳೀಯ ಲೆಕ್ಕಪರಿಶೋಧಕ ಸಿಎ ಕೆ. ಪದ್ಮನಾಭ ಕಾಂಚನ್‌ ಪಾಲ್ಗೊಂಡು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಇಲ್ಲಿನ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಬ್ಬಂದಿ ತರಬೇತಿ ಕಾರ್ಯಾಗಾರ ಇತ್ತೀಚೆಗೆ ಸಂಸ್ಥೆಯ ಪ್ರದಾನ ಕಚೇರಿಯಲ್ಲಿ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಸ್ಥಳೀಯ ಲೆಕ್ಕಪರಿಶೋಧಕ ಸಿಎ ಕೆ. ಪದ್ಮನಾಭ ಕಾಂಚನ್‌ ಅವರು ಪತ್ತಿನ ಸಹಕಾರ ಸಂಘಗಳು ಅನುಸರಿಸಬೇಕಾದ ಕ್ರಮಗಳು, ಆದಾಯ ತೆರಿಗೆ ಇಲಾಖೆಯ ಕಾನೂನುಗಳು ಹಾಗೂ ಠೇವಣಿ ಸಂಗ್ರಹಣೆ ಮತ್ತು ಸಾಲ ನೀಡುವಾಗ ಪಾಲಿಸಬೇಕಾದ ನಿಯಮಗಳು, ಕೆ.ವೈ.ಸಿ. ನಿಯಮಾವಳಿಗಳ ಬಗ್ಗೆ ಸವಿವರವಾಗಿ ತಿಳಿಸಿದರು.

ಸಿಬ್ಬಂದಿ ಪ್ರಶ್ನೆಗಳಿಗೆ ಸಂಬಂದಪಟ್ಟ ಕಾನೂನಿನ ವಿವರಣೆಯೊಂದಿಗೆ ಉತ್ತರಿಸಿದರು

ಸಂಘದ ನೂತನ ಅಧ್ಯಕ್ಷ ಜೆರಾಲ್ಡ್ ಎಮ್ ಗೊನ್ಸಾಲ್ವಿಸ್‌ ಅವರು ಸಭೆಯ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಕೋರಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ ಜೋಸೆಫ್ ಸುವಾರಿಸ್, ನಿರ್ದೇಶಕರಾದ ವಲೇರಿಯನ್ ಮಿನೇಜಸ್, ಗಿಲ್ಬರ್ಟ್ ರೊಡ್ರಿಗಸ್, ಜೋಸ್ಫಿನ್ ಲುವಿಸ್, ವಿನ್ಸೆಂಟ್ ಡಿ’ಅಲ್ಮೇಡಾ, ಆಲ್ವಿನ್ ಕ್ವಾಡ್ರಸ್, ಆಲ್ಬರ್ಟ್ ಮೊಂತೆರೊ, ಜೇಮ್ಸ್ ಡಿಸಿಲ್ವ, ಜಾನೆಟ್ ಬಾಂಜ್, ಜೋಸೆಫ್ ಡಿ’ಆಲ್ಮೇಡಾ, ಅರುಣ್ ಡಿಸೋಜ ಮತ್ತು ಮೆಲ್ವಿನ್ ಸಿಕ್ವೇರ ಉಪಸ್ಥಿತರಿದ್ದರು.

ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜಯ್ ಫನಾಂಡಿಸ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.