ಸಾರಾಂಶ
ಬೆಂಗಳೂರು-ಮಂಗಳೂರು ಮಾರ್ಗದ ಎಡಕುಮೇರಿ ಮತ್ತು ಕಡಗರವಳ್ಳಿ ಬಳಿ ಭೂಕುಸಿತ ಸ್ಥಳದಲ್ಲಿ ರೈಲ್ವೆ ಹಳಿ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 15 ಕಿ.ಮೀ. ವೇಗದಲ್ಲಿ ಗೂಡ್ಸ್ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಖಾಲಿ ಗೂಡ್ಸ್ ರೈಲುಗಳ ಮೂಲಕ ಪ್ರಾಯೋಗಿಕ ತಪಾಸಣೆ ನಡೆಸಲಾಗಿದೆ.
ಬೆಂಗಳೂರು : ಬೆಂಗಳೂರು-ಮಂಗಳೂರು ಮಾರ್ಗದ ಎಡಕುಮೇರಿ ಮತ್ತು ಕಡಗರವಳ್ಳಿ ಬಳಿ ಭೂಕುಸಿತ ಸ್ಥಳದಲ್ಲಿ ರೈಲ್ವೆ ಹಳಿ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 15 ಕಿ.ಮೀ. ವೇಗದಲ್ಲಿ ಗೂಡ್ಸ್ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಖಾಲಿ ಗೂಡ್ಸ್ ರೈಲುಗಳ ಮೂಲಕ ಪ್ರಾಯೋಗಿಕ ತಪಾಸಣೆ ನಡೆಸಲಾಗಿದೆ. ಕೇವಲ ಸಣ್ಣಪುಟ್ಟ ದುರಸ್ತಿ ಕೆಲಸಗಳು ಮಾತ್ರ ಬಾಕಿಯಿದ್ದು, ಶೀಘ್ರದಲ್ಲೇ ರೈಲುಗಳ ಪುನರ್ ಸಂಚಾರ ಸಾಧ್ಯತೆ ನಿರೀಕ್ಷೆ ಇದೆ.
ಜುಲೈ 26ರಿಂದ ಬೆಂಗಳೂರು-ಮಂಗಳೂರು ಮಾರ್ಗ ಬಂದ್ ಆಗಿದ್ದು, 14 ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು. 11 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಇಲಾಖೆ ಕಾರ್ಮಿಕರು ಇಂದು ಹಳಿ ಮರುಜೋಡಣೆ ಮಾಡಿದ್ದಾರೆ. ಕೇವಲ ಸಣ್ಣಪುಟ್ಟ ದುರಸ್ತಿ ಕೆಲಸಗಳು ಮಾತ್ರ ಬಾಕಿ ಇವೆ.
ಇನ್ನು, ಆ.6ರಂದು ಕಣ್ಣೂರು- ಕೆಎಸ್‌ಆರ್ ಬೆಂಗಳೂರು, ಕಾರವಾರ - ಕೆಎಸ್‌ಆರ್ ಬೆಂಗಳೂರು, ಮುರ್ಡೇಶ್ವರ - ಎಸ್‌ಎಂವಿಟಿ ಬೆಂಗಳೂರು, ಮಂಗಳೂರು ಸೆಂಟ್ರಲ್ - ವಿಜಯಪುರ ಹಾಗೂ ಕಾರವಾರ - ಯಶವಂತಪುರ ರೈಲುಗಳ ಸಂಚಾರ ರದ್ದಾಗಿದೆ.