ಸಾರಾಂಶ
10-15 ವರ್ಷಗಳಿಂದ ದಾವಣಗೆರೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬೇರೂರಿಕೊಂಡು, ಭ್ರಷ್ಟಾಚಾರ ಮಾಡುತ್ತಿರುವ ಅಧಿಕಾರಿಗಳನ್ನು ತಕ್ಷಣ ಬೇರೆಡೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ನಗರದ ಕೊಂಡಜ್ಜಿ ರಸ್ತೆಯ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಎದುರು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಕೆ.ಮಣಿ ಸರ್ಕಾರ್ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
- 15 ವರ್ಷಗಳಿಂದ ಭ್ರಷ್ಟಾಚಾರ: ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ಕೆ.ಮಣಿ ಆರೋಪ
- - - ಕನ್ನಡಪ್ರಭ ವಾರ್ತೆ ದಾವಣಗೆರೆ10-15 ವರ್ಷಗಳಿಂದ ದಾವಣಗೆರೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬೇರೂರಿಕೊಂಡು, ಭ್ರಷ್ಟಾಚಾರ ಮಾಡುತ್ತಿರುವ ಅಧಿಕಾರಿಗಳನ್ನು ತಕ್ಷಣ ಬೇರೆಡೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ನಗರದ ಕೊಂಡಜ್ಜಿ ರಸ್ತೆಯ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಎದುರು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಕೆ.ಮಣಿ ಸರ್ಕಾರ್ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ಕೆ.ಮಣಿ ಮಾತನಾಡಿ, ಜಿಲ್ಲೆ ಹಾಗೂ ಆರ್‌ಟಿಒ ಕಚೇರಿಯಲ್ಲಿ ಕೆಲವು ಅಧಿಕಾರಿಗಳು ಹಲವಾರು ವರ್ಷಗಳಿಂದ ಇಡೀ ಕಚೇರಿಯನ್ನೇ ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆ. ಕಚೇರಿಗೆ ಬಂದವರಿಗೆ ಲಂಚ ವಸೂಲು ಮಾಡುತ್ತಿದ್ದಾರೆ. ಇಲಾಖೆ ಅಧಿಕಾರಿ ಸಿ.ಎಸ್.ಪ್ರಮುತೇಶ, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಮೊಹಮ್ಮದ್ ಖಾಲಿದ್ ಹಾಗೂ ಎಸ್.ಟಿ.ಸತೀಶ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿವೆ. ಇದುವರೆಗೆ ಕ್ರಮ ಕೈಗೊಳ್ಳದೇ ಸರ್ಕಾರ ಭ್ರಷ್ಟಾಚಾರಕ್ಕೆ ಸಹಕಾರ ನೀಡುತ್ತಿರುವಂತಿದೆ. ಈ ಮೂವರು ಅಧಿಕಾರಿಗಳನ್ನು ದಾವಣಗೆರೆಯಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಸಾಗರ್, ಉಪಾಧ್ಯಕ್ಷ ರಾಹುಲ್, ಸಂಘಟನಾ ಕಾರ್ಯದರ್ಶಿ ಶ್ರೀಧರ, ಖಜಾಂಚಿ ಅನಿಲ್ ಸುರ್ವೆ, ರಾಜು ದೊಡ್ಮನಿ, ಪರಶುರಾಮ, ಡಿ.ಬಿ.ವಿನಯ್, ಶಿವು ಪೂಜಾರ, ರಾಘು, ಅವಿನಾಶ, ಮಧು, ಮಂಜು, ಶ್ರೀಕಾಂತ, ಶಶಿ, ಸುನಿಲ್, ರುದ್ರೇಶ, ಚಂದ್ರು, ಅಜಯ್ ಇತರರು ಇದ್ದರು.
- - - (-ಫೋಟೋ ಇದೆ.)