ಸಾರಾಂಶ
ಮಂಗಳೂರಿನ ಮೈರುಗ ಪ್ರಕಾಶನದ ಮೊದಲ ಕೃತಿ, ಪ್ರಾಧ್ಯಾಪಕಿ ಡಾ ಮೀನಾಕ್ಷಿ ರಾಮಚಂದ್ರ ಅವರು ಕನ್ನಡಕ್ಕೆ ಅನುವಾದಿಸಿದ ಮಲಯಾಳಂ ‘ವಾಕ್’ ಕೃತಿಯ ಅನುವಾದಿತ ಪುಸ್ತಕ ‘ಮಾತು ಎಂಬ ವಿಸ್ಮಯ’ವನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಮೈರುಗ ಪ್ರಕಾಶನದ ಮೊದಲ ಕೃತಿ, ಪ್ರಾಧ್ಯಾಪಕಿ ಡಾ ಮೀನಾಕ್ಷಿ ರಾಮಚಂದ್ರ ಅವರು ಕನ್ನಡಕ್ಕೆ ಅನುವಾದಿಸಿದ ಮಲಯಾಳಂ ‘ವಾಕ್’ ಕೃತಿಯ ಅನುವಾದಿತ ಪುಸ್ತಕ ‘ಮಾತು ಎಂಬ ವಿಸ್ಮಯ’ವನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು, ಕನ್ನಡ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಬೇಕು. ಈ ಮೂಲಕ ಕನ್ನಡ ಇನ್ನಷ್ಟು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಒಂದೆಡೆಯಾದರೆ ಕನ್ನಡ ಪುಸ್ತಕ ಓದುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕನ್ನಡ ಪುಸ್ತಕಗಳನ್ನು ಹಣ ಕೊಟ್ಟು ಖರೀದಿಸಿ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು. ಖರೀದಿಸಿದ ಪುಸ್ತಕಗಳನ್ನು ಓದಿ ಕನ್ನಡವನ್ನು ಬೆಳೆಸಬೇಕು ಎಂದು ಪುನರೂರು ಕಿವಿಮಾತು ಹೇಳಿದರು.ಅನುವಾದಕಿ, ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಮಾತನಾಡಿ, ‘ಮಾತು ಎಂಬ ವಿಸ್ಮಯ’ ಕೃತಿಯು ಮಾತಿನ ಮಹತ್ವವನ್ನು ತಿಳಿಸುತ್ತದೆ. ಮಾತಿನ ಮೇಲೆ ನಮ್ಮ ಭವಿಷ್ಯ ನಿಂತಿದೆ. ಉತ್ತಮ ಬದುಕು ರೂಪಿಸಿಕೊಳ್ಳಲು ಮಾತು ಹೇಗಿರಬೇಕು ಎಂಬುದನ್ನು ಈ ಪುಸ್ತಕ ತಿಳಿಸಿಕೊಡುತ್ತದೆ ಎಂದು ಹೇಳಿದರು.ಕೃತಿಯ ಮೂಲ ಮಲಯಾಲಂ ಲೇಖಕ ಸಜಿ ಎಂ.ನರಿಕುಯಿ, ತುಳು ವರ್ಲ್ಡ್ ಫೌಂಡೇಷನ್ ಕಟೀಲು ನಿರ್ದೇಶಕ ಡಾ. ರಾಜೇಶ್ ಆಳ್ವ ಬದಿಯಡ್ಕ, ಪ್ರಕಾಶಕ ಜಿ.ಕೆ. ಮೈರುಗ ಇದ್ದರು. ರಾಮಚಂದ್ರ ಭಟ್ ಲೈನ್‌ಕಜೆ ಕಾರ್ಯಕ್ರಮ ನಿರ್ವಹಿಸಿದರು.