ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಸೌಹಾರ್ದವು ಪ್ರಗತಿ ಹೊಂದಲು ಪಾರದರ್ಶಕತೆ, ಪ್ರಾಮಾಣಿಕತೆಯಿಂಧ ಕಾರ್ಯ ಮಾಡುವುದರ ಜೊತೆಗೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಷೇರುದಾರರ ಅಭಿಪ್ರಾಯ ಕೇಳಿ ಮುನ್ನಡೆಯುವುದು ಮುಖ್ಯ ಎಂದು ಸಜ್ಜನಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ವಿವೇಕ ಸಜ್ಜನ ಹೇಳಿದರು.

ಸಜ್ಜನ ಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ವಿವೇಕ ಸಜ್ಜನ ದಂಪತಿಯನ್ನು ಮನೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯಿಂದ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದರು.ಸಿದ್ದಸಿರಿ ಸೌಹಾರ್ದ ಸಹಕಾರಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಮಾತನಾಡಿ, ರಾಜ್ಯದಲ್ಲಿ 6500 ವಿವಿಧ ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಜನತೆಯ ವಿಶ್ವಾಸ ಗಳಿಸುವುದರೊಂದಿಗೆ ಗ್ರಾಹಕ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಅನೇಕ ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳ ಮಧ್ಯದಲ್ಲಿಯೂ ಕೂಡ ಜನತೆ ಸೌಹಾರ್ದ ಸಹಕಾರಿಗಳಲ್ಲಿ ಹೆಚ್ಚಿನ ವ್ಯವಹಾರಗಳನ್ನು ಮಾಡುತ್ತಿದ್ದು ಸಹಕಾರಿಗಳ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಜನತೆಯ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಜವಾಬ್ದಾರಿ ಎಲ್ಲ ಸಹಕಾರಿಗಳ ಮೇಲಿದೆ. ಸಜ್ಜನಸಿರಿ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿಯವರು ಒಟ್ಟಾಗಿ ಸೇರಿ ವಿವೇಕ ಸಜ್ಜನ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿಯ ಜನರಲ್ ಮ್ಯಾನೇಜರ ದೇವಿ ಹಿರೇಮಠ, ವಲಯ ಅಧಿಕಾರಿ ಈಶ್ವರ ಮುಂಜಣ್ಣಿ, ವ್ಯಾಪಾರಸ್ಥರಾದ ಮಂಜುನಾಥ ಹಿರೇಮಠ, ನಾಗವೇಣಿ ಸಜ್ಜನ, ರಚನಾ ಅಣ್ಣಿಗೇರಿ ಉಪಸ್ಥಿತರಿದ್ದರು.