ಸಹಕಾರ ಸಂಘಗಳ ಬೆಳವಣಿಗೆಗೆ ಪಾರದರ್ಶಕತೆ ಅವಶ್ಯ: ಉಮೇಶ್

| Published : Sep 18 2024, 01:49 AM IST

ಸಾರಾಂಶ

೧೯೫೦ರ ನಂತರ ಮಂಡ್ಯ ಜಿಲ್ಲೆಯಲ್ಲಿ ಸಹಕಾರ ತತ್ವದ ಆಧಾರದ ಮೇಲೆ ಸಹಕಾರ ಸಂಘಗಳು ಪ್ರಾರಂಭವಾದವು. ಆರಂಭದಲ್ಲಿ ಸಹಕಾರ ಸಂಘಗಳು ಗುಣಮಟ್ಟದ ಕಾರ್ಯನಿರ್ವಹಣೆಯೊಂದಿಗೆ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದ್ದವು. ಕಾಲ ಕ್ರಮೇಣ ಸಂಘಗಳ ಬೆಳವಣಿಗೆ ಕುಂಠಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಹಕಾರ ಸಂಘಗಳು ದಕ್ಷತೆ, ಪಾರದರ್ಶಕತೆ ಕಾಯ್ದುಕೊಂಡು ಗುಣಮಟ್ಟದ ಸೇವೆಯನ್ನು ಗ್ರಾಹಕರಿಗೆ ಒದಗಿಸಿದಾಗ ಸಂಘದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದರು.

ನಗರದ ಹರ್ಡಿಕರ್ ಭವನದಲ್ಲಿ ನೆಡೆದ ಸಂಘ ಮಿತ್ರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ೨೦೨೩- ೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ೧೯೫೦ರ ನಂತರ ಮಂಡ್ಯ ಜಿಲ್ಲೆಯಲ್ಲಿ ಸಹಕಾರ ತತ್ವದ ಆಧಾರದ ಮೇಲೆ ಸಹಕಾರ ಸಂಘಗಳು ಪ್ರಾರಂಭವಾದವು. ಆರಂಭದಲ್ಲಿ ಸಹಕಾರ ಸಂಘಗಳು ಗುಣಮಟ್ಟದ ಕಾರ್ಯನಿರ್ವಹಣೆಯೊಂದಿಗೆ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದ್ದವು. ಕಾಲ ಕ್ರಮೇಣ ಸಂಘಗಳ ಬೆಳವಣಿಗೆ ಕುಂಠಿತಗೊಂಡಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಸಹಕಾರ ಸಂಘಗಳು ಗುಣಮಟ್ಟದಿಂದ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ. ಬ್ಯಾಂಕ್‌ನ ನಿರ್ವಹಣೆ ಮಾಡಲು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಬ್ಯಾಂಕ್‌ನ ಸೇವೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಸಹಕಾರ ರಂಗದ ನಿಯಮವಾಳಿಗಳನ್ನು ಪಾಲಿಸುವಂತೆ ಸಲಹೆ ನೀಡಿದರು.

ರಿಸರ್ವ್ ಬ್ಯಾಂಕಿನ ಸುತ್ತೋಲೆಗಳ ಪ್ರಕಾರ ಬ್ಯಾಂಕ್ ಕಾರ್ಯನಿರ್ವಣೆ ಮಾಡಬೇಕು. ಬ್ಯಾಂಕ್‌ನಲ್ಲಿ ಗ್ರಾಹಕರ ವಿಶ್ವಾಸ ಗಳಿಸುವ ಕೆಲಸವನ್ನು ಬ್ಯಾಂಕ್‌ನ ಆಡಳಿತ ಮಂಡಳಿ ಮಾಡಬೇಕು. ಸದಸ್ಯರು, ಠೇವಣಿದಾರರು, ಗ್ರಾಹಕರು ಸಾಲ ಪಡೆಯುವುದರಿಂದ ಬ್ಯಾಂಕ್‌ಗಳು ನಡೆಯುತ್ತವೆ. ಬ್ಯಾಂಕ್‌ಗಳಲ್ಲಿ ಸೇವೆಯ ಗುಣಮಟ್ಟ ಉತ್ತಮವಾಗಿದ್ದಾಗ ಠೇವಣಿದಾರರು ಹೆಚ್ಚು ಹಣ ಹೂಡಿಕೆ ಮಾಡುವುದಕ್ಕೆ ಇಷ್ಟಪಡುತ್ತಾರೆ ಎಂದರು.

ಗ್ರಾಹಕರ ಜೊತೆ ಬ್ಯಾಂಕ್‌ನ ಸಂಪರ್ಕ ಚೆನ್ನಾಗಿದ್ದರೆ ಬ್ಯಾಂಕ್‌ನ ಶ್ರೇಷ್ಠತೆ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವ ಹಿಸಬೇಕು ಎಂದರು.

ಮೈಸೂರಿನ ವಿಶ್ವ ಮೈತ್ರಿ ಪುಟ್ಟ ವಿಹಾರದ ಡಾ.ಕಲ್ಯಾಣ ಸಿರಿ ಬಂತೇಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಸಂಘಮಿತ್ರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಾ.ವೈ.ಎಸ್.ಸಿದ್ದರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಇಲಾಖೆ ನಿವೃತ್ತ ಉಪ ನಿರ್ದೇಶಕ ಬಿ.ಎಸ್.ಸ್ವಾಮಿ ವಿವೇಕಾನಂದ, ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಎಸ್. ಮಹದೇವಯ್ಯ, ಸಂಘ ಮಿತ್ರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಸಿ.ಶಿವಲಿಂಗಯ್ಯ, ನಿರ್ದೇಶಕರಾದ ಮಹಾದೇವಪ್ಪ, ಡಿ.ಪ್ರೇಮ್‌ಕುಮಾರ್, ಎಸ್.ಮಂಜುನಾಥ್, ಪ್ರಮೀಳಾಕುಮಾರಿ, ಜಯರಾಮು, ಮಹಾದೇವಸ್ವಾಮಿ, ಬೋರಯ್ಯ, ಮುತ್ತಯ್ಯ, ಸತೀಶ್, ಮುನಿ ವೆಂಕಟಮ್ಮ, ಮುಖ್ಯ ಕಾರ್ಯನಿಹಣಾಧಿಕಾರಿ ಎಸ್.ಪವಿತ್ರಾ, ಸಹಾಯಕಿ ಎಂ.ಕೆ.ಪುಷ್ಪಲತಾ ಇತರರಿದ್ದರು.