ಸಾರಾಂಶ
ಕನಕಪುರ: ಗ್ರಾಮಸ್ಥರ ಒತ್ತಾಯದ ಮೇರೆಗೆ ಸಾತನೂರಿನ ಸಂಭೇಗೌಡನದೊಡ್ಡಿ ಗ್ರಾಮಕ್ಕೆ ಸಾರಿಗೆ ಬಸ್ ಸಂಚಾರ ಸಂಪರ್ಕ ಪ್ರಾರಂಭಗೊಂಡಿದ್ದು, ಗ್ರಾಮಸ್ಥರು ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಕನಕಪುರ: ಗ್ರಾಮಸ್ಥರ ಒತ್ತಾಯದ ಮೇರೆಗೆ ಸಾತನೂರಿನ ಸಂಭೇಗೌಡನದೊಡ್ಡಿ ಗ್ರಾಮಕ್ಕೆ ಸಾರಿಗೆ ಬಸ್ ಸಂಚಾರ ಸಂಪರ್ಕ ಪ್ರಾರಂಭಗೊಂಡಿದ್ದು, ಗ್ರಾಮಸ್ಥರು ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ತಾಲೂಕಿನ ಸಾತನೂರು ಹೋಬಳಿ ಸಂಭೇಗೌಡನದೊಡ್ಡಿ ಮತ್ತು ಸಾಸಲಾಪುರ ಗ್ರಾಮಕ್ಕೆ ಸಾರಿಗೆ ಬಸ್ಸು ಸಂಚಾರ ಪ್ರಾರಂಭಗೊಂಡಿದ್ದು, ಕನಕಪುರ ಘಟಕದಿಂದ ಬೆಳಗ್ಗೆ ಒಂದು ಬಸ್ ಮತ್ತು ಚನ್ನಪಟ್ಟಣ ಘಟಕದಿಂದ ಒಂದು ಬಸ್ ಸಂಚರಿಸಲಿವೆ.ಸಾಸಲಪುರ ಮತ್ತು ಸಂಭೇಗೌಡನದೊಡ್ಡಿ ಗ್ರಾಮಕ್ಕೆ ಸಾರಿಗೆ ಬಸ್ ಸಂಪರ್ಕ ಇರಲಿಲ್ಲ. ಎರಡು ಗ್ರಾಮಗಳಿಂದ ಶಾಲಾ ಕಾಲೇಜಿಗೆ ಹೊಗುತ್ತಿದ್ದ ಹಲವಾರು ಮಕ್ಕಳಿಗೆ ತೊಂದರೆಯಾಗಿತ್ತು. ಜೊತೆಗೆ ರೈತರು ಮತ್ತು ಗ್ರಾಮಸ್ಥರು ನಗರ ಪ್ರದೇಶಗಳಿಗೆ ಓಡಾಡಲು ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಗ್ರಾಮಕ್ಕೆ ಬಸ್ ಸಂಚಾರ ಕಲ್ಪಿಸುವಂತೆ ಎರಡು ಗ್ರಾಮದ ಜನತೆ ಸಾರಿಗೆ ಅಧಿಕಾರಿಗಳನ್ನು ಒತ್ತಾಯಿಸುತ್ತಾ ಬಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ.
ಗ್ರಾಮದ ಕೆಲವರು ಜನಸ್ಪಂದನಾ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರು. ಮತ್ತೆ ಕೆಲವರು ಸಾತನೂರಿನ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂಸದ ಡಾ.ಸಿ.ಎನ್. ಮಂಜುನಾಥ್‌ಗೆ ಮನವಿ ಮಾಡಿದ್ದರು.ಗ್ರಾಮಕ್ಕೆ ಬಸ್ ಸೇವೆ ಇಬ್ಬರ ಪ್ರಯತ್ನದಿಂದ ಆಗಿದ್ದು, ಇದರಿಂದ ಗ್ರಾಮಕ್ಕೆ ಒಳ್ಳೆಯದಾಗಿದೆ. ಈ ವಿಚಾರವನ್ನು ಯಾರು ಸಹ ವಯಕ್ತಿಕವಾಗಿ ತೆಗೆದುಕೊಳ್ಳದೆ ಇದೇ ರೀತಿ ಅಭಿವೃದ್ಧಿ ಕೆಲಸಗಳು ಗ್ರಾಮದಲ್ಲಿ ಸಾಗಲಿ ಎಂಬುದು ಸ್ಥಳೀಯರ ಆಶಯದ ಮಾತಾಗಿದೆ.
ಕೆ ಕೆ ಪಿ ಸುದ್ದಿ 01:ಸಾತನೂರಿನ ಸಂಭೇಗೌಡನ ದೊಡ್ಡಿ ಗ್ರಾಮಕ್ಕೆ ಶುಕ್ರವಾರದಿಂದ ಸಾರಿಗೆ ಸೇವೆ ಪ್ರಾರಂಭಗೊಂಡಿದ್ದು, ಗ್ರಾಮಸ್ಥರು ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.