ಬೇಗೂರು ಐಟಿಐ ಬಳಿ ನಿಲ್ಲದ ಸಾರಿಗೆ ಬಸ್‌!

| Published : Nov 05 2024, 12:31 AM IST

ಬೇಗೂರು ಐಟಿಐ ಬಳಿ ನಿಲ್ಲದ ಸಾರಿಗೆ ಬಸ್‌!
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಕಾಲೇಜು ಬಳಿ ಬಸ್ ನಿಲುಗಡೆಗೆ ಶಾಸಕರು ಹಾಗೂ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಸೂಚನೆ ನೀಡಿದ್ದರೂ ತಾಲೂಕಿನ ಬೇಗೂರು ಹೊರ ವಲಯದ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ)ದ ಮುಂದೆ ಸಾರಿಗೆ ಸಂಸ್ಥೆಯ ಕೆಲ ಬಸ್‌ಗಳು ನಿಲ್ಲುತ್ತಿಲ್ಲ.!

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಶಾಲಾ ಕಾಲೇಜು ಬಳಿ ಬಸ್ ನಿಲುಗಡೆಗೆ ಶಾಸಕರು ಹಾಗೂ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಸೂಚನೆ ನೀಡಿದ್ದರೂ ತಾಲೂಕಿನ ಬೇಗೂರು ಹೊರ ವಲಯದ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ)ದ ಮುಂದೆ ಸಾರಿಗೆ ಸಂಸ್ಥೆಯ ಕೆಲ ಬಸ್‌ಗಳು ನಿಲ್ಲುತ್ತಿಲ್ಲ.!

ಕೆಲ ವರ್ಷಗಳ ಹಿಂದೆಯೇ ಗುಂಡ್ಲುಪೇಟೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರೇ ಬೇಗೂರು ಹೊರ ವಲಯದ ಬೇಗೂರು ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಸರ್ಕಾರಿ ಕಾಲೇಜುಗಳ ಬಳಿ ಬಸ್ ನಿಲುಗಡೆ ಮಾಡಿ ಎಂದು ಬಸ್ ಚಾಲಕ-ನಿರ್ವಾಹಕರಿಗೆ ಸೂಚಿಸಿದ್ದರು. ಆದರೆ, ದಿನ ನಿತ್ಯ ಬೇಗೂರು ಮಾರ್ಗವೇ ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ತೆರಳುವ ಸಾರಿಗೆ ಬಸ್‌ಗಳು ಬೇಗೂರು ಕೈಗಾರಿಕಾ ತರಬೇತಿ ಕೇಂದ್ರದ ಮುಂದೆ ವಿದ್ಯಾರ್ಥಿಗಳು ನಿಂತಿದ್ದರೂ ಸಹ ಕೆಲ ಬಸ್‌ಗಳು ಮಾತ್ರ ನಿಲ್ಲದೆ ರಸ್ತೆ ರಾಜನಂತೆ ಹೋಗುತ್ತಿವೆ.

ಬೇಗೂರು ಬಳಿಯ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಹೆಡಿಯಾಲ ರಸ್ತೆ ಬಳಿಯ ಸರ್ಕಾರಿ, ಶಾಲಾ ಕಾಲೇಜುಗಳಿಗೆ ನೂರಾರು ಮಂದಿ ವಿದ್ಯಾರ್ಥಿಗಳು ಬೇಗೂರು ಬಸ್ ನಿಲ್ದಾಣದಿಂದ ಬೆಳಗ್ಗೆ ನಡೆದು ಹೋಗುತ್ತಿದ್ದಾರೆ. ಬೇಗೂರು ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಸರ್ಕಾರಿ ಕಾಲೇಜು ಬಳಿ ಬಸ್ ನಿಲುಗಡೆಯಾಗಬೇಕು ಎಂದು ಪತ್ರಿಕೆಗಳಲ್ಲಿ ವರದಿ ಬಂದಾಗ ಬಸ್‌ಗಳು ನಿಲ್ಲುತ್ತಿವೆ, ಕೆಲ ದಿನಗಳ ಬಳಿಕ ನಿಲ್ಲುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಐಟಿಐ ಮುಂದೆ ಸಾರಿಗೆ ಬಸ್‌ ನಿಲ್ಲಿಸದ ಕಾರಣ ರಸ್ತೆಯಲ್ಲಿ ಬರುವ ದ್ವಿಚಕ್ರ, ಗೂಡ್ಸ್ ಆಟೋಗಳಿಗೆ ಕೈ ತೋರಿಸುವ ವಿದ್ಯಾರ್ಥಿಗಳು ನಿಂತ ವಾಹನಗಳನ್ನೇರಿ ಬೇಗೂರು ಬಸ್ ನಿಲ್ದಾಣಕ್ಕೆ ಬರುತ್ತಾರೆ. ಕೈ ತೋರಿಸಿ ಬಸ್‌ ನಿಲ್ಲಿಸುಂತೆ ಸೂಚಿಸಿದರೂ ನಿಲ್ಲಿಸುತ್ತಿಲ್ಲ. ಈ ಕಾರಣದಿಂದ ವಿದ್ಯಾರ್ಥಿಗಳು ನಡೆದುಕೊಂಡು ಬೇಗೂರು ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ಗುಂಡ್ಲುಪೇಟೆ ಸಾರಿಗೆ ಸಂಸ್ಥೆಯ ಅಧಿಕಾರಿಗಳೇ ಬೇಗೂರು ಗ್ರಾಮದ ಹೊರ ವಲಯದಲ್ಲಿನ ಐಟಿಐ ಬಳಿ ಬಸ್ ನಿಲ್ಲಿಸಲಿ, ನಿಲ್ಲಿಸದ ಬಸ್‌ಗಳ ಚಾಲಕ, ನಿರ್ವಾಹಕರಿಗೆ ತಿಳಿ ಹೇಳಿ ಬಸ್‌ ನಿಲ್ಲಿಸಲು ಸೂಚಿಸಲಿ ಎಂಬುದು ಕನ್ನಡಪ್ರಭದ ಕಳಕಳಿ.ಬೇಗೂರು ಕೈಗಾರಿಕಾ ತರಬೇತಿ ಕೇಂದ್ರದ ಬಳಿ ಹಾದು ಹೋಗುವ ಕೆಎಸ್‌ಆರ್‌ಟಿಸಿಯ ಕೆಲ ಬಸ್‌ಗಳು ಖಾಲಿ ಹೋದರೂ ನಿಲುಗಡೆ ಮಾಡುತ್ತಿಲ್ಲ. ಮಧ್ಯಾಹ್ನದ ಬಳಿಕವಂತೂ ಸಾರಿಗೆ ಬಸ್‌ ನಿಲ್ಲಿಸುವುದಿಲ್ಲ.ವಿದ್ಯಾರ್ಥಿಗಳು, ಐಟಿಐ, ಬೇಗೂರು