ಸಾರಿಗೆ ಸಿಬ್ಬಂದಿ ಜನರ ವಿಶ್ವಾಸಾರ್ಹತೆಯಿಂದ ಕರ್ತವ್ಯ ನಿರ್ವಹಿಸಿ

| Published : Jul 01 2024, 01:47 AM IST

ಸಾರಿಗೆ ಸಿಬ್ಬಂದಿ ಜನರ ವಿಶ್ವಾಸಾರ್ಹತೆಯಿಂದ ಕರ್ತವ್ಯ ನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಹುಬ್ಬಳ್ಳಿ ಗ್ರಾಮಾಂತರ-2ನೇ ಘಟಕದಲ್ಲಿ ವಯೋ ನಿವೃತ್ತಿ ಹೊಂದಿದ ಸಾರಿಗೆ ಸಿಬ್ಬಂದಿ ಬೀಳ್ಕೊಡುಗೆ ಕಾರ್ಯಕ್ರಮ ನಡಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಪ್ರಬುದ್ಧ ವೃತ್ತಿಪರತೆ ಹಾಗೂ ಪ್ರಯಾಣಿಕ ಸ್ನೇಹಿ ವರ್ತನೆಯ ಮೂಲಕ ಸಾರ್ವಜನಿಕರ ವಿಶ್ವಾಸಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾರಿಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಹುಬ್ಬಳ್ಳಿ ಗ್ರಾಮಾಂತರ-2ನೇ ಘಟಕದಲ್ಲಿ ವಯೋ ನಿವೃತ್ತಿ ಹೊಂದಿದ ಸಾರಿಗೆ ಸಿಬ್ಬಂದಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮುದಾಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾರ್ವಜನಿಕ ಸಾರಿಗೆ ಸೇವೆ ಮಾಡುವ ಅಪೂರ್ವ ಅವಕಾಶ ನಮಗೆ ಸಿಕ್ಕಿದೆ. ವಿವಿಧ ಸ್ತರದ ಜನರು ನಮ್ಮ ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಸುರಕ್ಷತೆಯ ನಂಬಿಕೆಯಿಂದ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಬೇಕು. ವಿನಾಕಾರಣ ಅನಧಿಕೃತ ಗೈರು ಹಾಜರಾಗದೇ ಸೇವಾ ಬದ್ಧತೆ ಮೆರೆಯಬೇಕು ಎಂದರು.

ನಿವೃತ್ತಿ ಹೊಂದಿದ ಚಾಲಕರಾದ ಡಿ.ಎಚ್. ಕಣವಿ, ಎಂ.ಕೆ. ಜಹಗೀರದಾರ ಮತ್ತು ಎಚ್.ಎಫ್. ನಂದಿ ಹಾಗೂ ನಿರ್ವಾಹಕರಾದ ಕೆ.ಎಸ್. ಪೂಜಾರ ಮತ್ತು ಅವರ ಮಗ ಸಿದ್ದಲಿಂಗಪ್ಪ ಪೂಜಾರ ಅವರನ್ನು ಸನ್ಮಾನಿಸಲಾಯಿತು.

ಘಟಕ ವ್ಯವಸ್ಥಾಪಕಿ ರೋಹಿಣಿ ಬೇವಿನಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಜಿ. ನಾಯ್ಕರ ನಿರೂಪಿಸಿದರು. ಮೇಲ್ವಿಚಾರಕರು, ಚಾಲಕರು, ನಿರ್ವಾಹಕರು, ತಾಂತ್ರಿಕ, ಆಡಳಿತ ಸಿಬ್ಬಂದಿ ಹಾಗೂ ನಿವೃತ್ತ ನೌಕರರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.