ಸಾರಿಗೆ ಮುಷ್ಕರ: ಹಲಗೂರು ಬಸ್ ನಿಲ್ದಾಣ ಖಾಲಿ ಖಾಲಿ..!

| Published : Aug 05 2025, 11:45 PM IST

ಸಾರಾಂಶ

ಹಲಗೂರು ಹೋಬಳಿ ಕೇಂದ್ರವಾಗಿದ್ದು ಸುತ್ತಮುತ್ತಲಿನ ಗ್ರಾಮದವರು ಯಾವುದೇ ವ್ಯಾಪಾರ ವಹಿವಾಟಕ್ಕೆ ಹಲಗೂರಿಗೆ ಬರಬೇಕು ಹಾಗೂ ಬಸವನ ಬೆಟ್ಟ ಮತ್ತು ಮುತ್ತತ್ತಿ, ಗಾಣಾಳು ಕಡೆಯಿಂದ ಬರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಸಹ ತುಂಬಾ ತೊಂದರೆಯಾಗಿತ್ತು.

ಕನ್ನಡಪ್ರಭ ವಾರ್ತೆ ಹಲಗೂರು

ದಿನನಿತ್ಯ ಸಾರಿಗೆ ಬಸ್ ನಿಲ್ದಾಣ ಗಿಜಿ ಗುಡುತ್ತಿದ್ದು, ಮಂಗಳವಾರ ಸಾರಿಗೆ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಪೂರ್ಣ ಖಾಲಿಯಾಗಿತ್ತು.

ನಿಲ್ದಾಣದಲ್ಲಿ ಖಾಸಗಿ ವಾಹನಗಳು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಕಾದು ನಿಂತಿದ್ದವು. ಆದರೆ, ಮುಷ್ಕರದ ಸುದ್ದಿ ತಿಳಿದು ಪ್ರಯಾಣಿಕರು ಯಾರು ಬೇರೆ ಊರಿಗೆ ಪ್ರಯಾಣ ಬೆಳೆಸದೆ ತಮ್ಮ ತಮ್ಮ ಗ್ರಾಮದಲ್ಲೇ ಇದ್ದ ಪ್ರಯುಕ್ತ ಬಸ್ ನಿಲ್ದಾಣ ಪೂರ್ಣ ಖಾಲಿಯಾಗಿತ್ತು. ಎಂದಿನಂತೆ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪರದಾಡಬೇಕಾಯಿತು. ಹಾಗೂ ಬ್ಯಾಂಕ್ ಸಿಬ್ಬಂದಿಯವರು ದ್ವಿಚಕ್ರ ವಾಹನವನ್ನು ಬಳಸಿದರೆ ಕೆಲವರು ಟೆಂಪೋಗಳಲ್ಲಿ ಬಂದು ಕರ್ತವ್ಯ ನಿರ್ವಹಿಸಿದರು.

ಹಲಗೂರು ಹೋಬಳಿ ಕೇಂದ್ರವಾಗಿದ್ದು ಸುತ್ತಮುತ್ತಲಿನ ಗ್ರಾಮದವರು ಯಾವುದೇ ವ್ಯಾಪಾರ ವಹಿವಾಟಕ್ಕೆ ಹಲಗೂರಿಗೆ ಬರಬೇಕು ಹಾಗೂ ಬಸವನ ಬೆಟ್ಟ ಮತ್ತು ಮುತ್ತತ್ತಿ, ಗಾಣಾಳು ಕಡೆಯಿಂದ ಬರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಸಹ ತುಂಬಾ ತೊಂದರೆಯಾಗಿತ್ತು. ಸಂಜೆ ಮುಷ್ಕರ ಹಿಂಪಡೆದ ಕಾರಣ ವಿರಳವಾಗಿ ಬಸ್ ಸಂಚಾರ ಪ್ರಾರಂಭವಾಗಿತ್ತು.

ಬಿಕೋ ಎನ್ನುತ್ತಿದ್ದ ಸಾರಿಗೆ ಬಸ್‌ ನಿಲ್ದಾಣ

ಮಳವಳ್ಳಿ:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಸಾರಿಗೆ ನೌಕರರು ನಡೆಸಿದ ಮುಷ್ಕರ ಹಿನ್ನೆಲೆಯಲ್ಲಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಬೆಳಗ್ಗೆ 6ಗಂಟೆಯಿಂದಲೇ ಯಾವುದೇ ಬಸ್‌ಗಳ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಟ ನಡೆಸಿದ್ದರು.

ಬಸ್ ನಿಲ್ದಾಣದಲ್ಲಿ ಸಾಲಾಗಿ ನಿಂತಿದ್ದ ಬಸ್‌ಗಳ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಕೆಲ ಖಾಸಗಿ ಬಸ್‌ಗಳು ಓಡಾಟ ನಡೆಸಿದ್ದವು. ಮಧ್ಯಾಹ್ನದ ನಂತರ ಕೆಲ ಸಾರಿಗೆ ಬಸ್‌ಗಳು ಸಂಚಾರಗಳನ್ನು ಚಾಲಕರು ಓಡಾಟ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದ ಪೊಲೀಸರು ಭದ್ರತೆ ಕಲ್ಪಿಸಿದರು.