ವಿಶ್ವವಿಖ್ಯಾತ ಜೋಗ ವೈಭವ ಕಾಣಲು ದಾವಣಗೆರೆಯಿಂದ ಸಾರಿಗೆ ವ್ಯವಸ್ಥೆ

| Published : Jul 29 2025, 01:01 AM IST

ವಿಶ್ವವಿಖ್ಯಾತ ಜೋಗ ವೈಭವ ಕಾಣಲು ದಾವಣಗೆರೆಯಿಂದ ಸಾರಿಗೆ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಮಳೆ ಆರಂಭವಾದರೆ ಸಾಕು ಜೋಗ ವೈಭವ ಕಣ್ಮನ ತುಂಬಿಕೊಳ್ಳಬೇಕು ಎನಿಸುತ್ತದೆ. ಇಂಥ ಜಗದ್ವಿಖ್ಯಾತ ಜಲಧಾರೆ ನೋಡುವ ಅವಕಾಶವನ್ನು ದಾವಣಗೆರೆ ಕೆಎಸ್‌ಆರ್‌ಟಿಸಿ ಕಲ್ಪಿಸಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಪ್ರವಾಸ ದೃಷ್ಟಿಯಿಂದ ರಾಜಹಂಸ ಬಸ್ ಸಂಚಾರ ವ್ಯವಸ್ಥೆ ಆರಂಭಿಸಿದೆ.

- ರಾಜಹಂಸ ಬಸ್‌ನಲ್ಲಿ ಒಬ್ಬರಿಗೆ ₹650, ಮಕ್ಕಳಿಗೆ ₹500 ಟಿಕೆಟ್‌

- - -

ದಾವಣಗೆರೆ: ಮುಂಗಾರು ಮಳೆ ಆರಂಭವಾದರೆ ಸಾಕು ಜೋಗ ವೈಭವ ಕಣ್ಮನ ತುಂಬಿಕೊಳ್ಳಬೇಕು ಎನಿಸುತ್ತದೆ. ಇಂಥ ಜಗದ್ವಿಖ್ಯಾತ ಜಲಧಾರೆ ನೋಡುವ ಅವಕಾಶವನ್ನು ದಾವಣಗೆರೆ ಕೆಎಸ್‌ಆರ್‌ಟಿಸಿ ಕಲ್ಪಿಸಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಪ್ರವಾಸ ದೃಷ್ಟಿಯಿಂದ ರಾಜಹಂಸ ಬಸ್ ಸಂಚಾರ ವ್ಯವಸ್ಥೆ ಆರಂಭಿಸಿದೆ.

ಬೆಳಗ್ಗೆ 7.15 ಗಂಟೆಗೆ ದಾವಣಗೆರೆಯಿಂದ ಹೊರಡುವ ಬಸ್ ಹರಿಹರ ನಗರಕ್ಕೆ 7.45ಕ್ಕೆ ತಲುಪಿ, ಪ್ರಯಾಣಿಕರನ್ನು ಹೊತ್ತು ಬೆಳಗ್ಗೆ 10.30ಕ್ಕೆ ಶಿರಸಿ ತಲುಪಲಿದೆ. ಶಕ್ತಿದೇವತೆ ಮಾರಿಕಾಂಬಾ ದರ್ಶನ ಬಳಿಕ ಮಧ್ಯಾಹ್ನ 1 ಗಂಟೆಗೆ ಜೋಗ ತಲುಪಲಿದೆ. ಜೋಗದಿಂದ ಮತ್ತೆ 4.30ಕ್ಕೆ ಹೊರಟು ರಾತ್ರಿ 8.30ಕ್ಕೆ ದಾವಣಗೆರೆಗೆ ತಲುಪಲಿದೆ.

ಎರಡು ಕಡೆಯಿಂದ ಓರ್ವ ವ್ಯಕ್ತಿಗೆ ₹650, ಮಕ್ಕಳಿಗೆ ₹500 ಪ್ರಯಾಣ ದರ ನಿಗದಿ ಮಾಡಲಾಗಿದೆ. ಮಧ್ಯಮ ವರ್ಗ ಹಾಗೂ ಪುಟ್ಟ ಕುಟುಂಬದವರು ಒಂದು ದಿನದ ಪಿಕ್ ನಿಕ್ ಮೂಲಕ ಅದ್ಭುತ ಪ್ರವಾಸ ಮಾಡಬಹುದಾಗಿದೆ.

ಕೆಎಸ್‌ಆರ್‌ಟಿಸಿ ನಿವೃತ್ತ ನಿಲ್ದಾಣಾಧಿಕಾರಿ ಎ.ಕೆ.ಗಣೇಶ್ ಮಾತನಾಡಿ, ವೀಕೆಂಡ್‌ನಲ್ಲಿ ಒಂದು ದಿನದ ಪ್ರವಾಸ ಮಾಡಿ ಜೋಗ ಜಲಪಾತ ಸೌಂದರ್ಯ ಸವಿಯಬಹುದು. ದಾವಣಗೆರೆ ಜನರಿಗೆ ಅನುಕೂಲ ಆಗಲೆಂದು ಈ ಸಾರಿಗೆ ಸಂಸ್ಥೆ ಈ ಅನುಕೂಲ ಮಾಡಿದೆ. ಈ ಅವಕಾಶ ಸದುಪಯೋಗ ಮಾಡಿಕೊಂಡು ಪ್ರವಾಸ ಮಾಡಿ ಎಂದು ತಿಳಿಸಿದರು.

ಸಂಚಾರ ನಿಯಂತ್ರಣಾಧಿಕಾರಿ ಪುಷ್ಪಾ ಭಜಂತ್ರಿ, ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದ ಜಿಲ್ಲಾ ಸಂಚಾರ ನಿಯಂತ್ರಣಾಧಿಕಾರಿ ಗಿರೀಶ್, ಸಂಚಾರ ನಿರೀಕ್ಷಕ ಅಧಿಕಾರಿ ಕೊಟ್ರೇಶ್ ಪುಂಡಿ, ಬಸ್ ನಿಲ್ದಾಣದ ಪೊಲೀಸ್ ಕೊಟ್ರೇಶ್ ಕುಂಬಾರ ಹಾಗೂ ಚಾಲಕರಾದ ಕೃಷ್ಣಮೂರ್ತಿ, ಪ್ರವಾಸಿಗರು ಉಪಸ್ಥಿತರಿದ್ದರು.

- - -

-27ಕೆಡಿವಿಜಿ36.ಜೆಪಿಜಿ:

ದಾವಣಗೆರೆಯಿಂದ ಜೋಗ ಜಲಪಾತ ವೀಕ್ಷಣೆಗೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ ಪ್ರವಾಸ ಹೊರಟ ಪ್ರಯಾಣಿಕರಿಗೆ ಅಧಿಕಾರಿಗಳು ಶುಭ ಕೋರಿದರು.