8 ವರ್ಷಗಳಿಂದ ಹದಗೆಟ್ಟ ರಸ್ತೆಯಲ್ಲೇ ಪ್ರಯಾಣ

| Published : May 20 2024, 01:31 AM IST

8 ವರ್ಷಗಳಿಂದ ಹದಗೆಟ್ಟ ರಸ್ತೆಯಲ್ಲೇ ಪ್ರಯಾಣ
Share this Article
  • FB
  • TW
  • Linkdin
  • Email

ಸಾರಾಂಶ

ಹದಗೆಟ್ಟ ಹೋಗಿರುವ ರಸ್ತೆಯಲ್ಲಿ ದಸ್ತಾಪುರ ಗ್ರಾಮದ ನಿವಾಸಿಗಳು ಕಳೆದ 8 ವರ್ಷದಿಂದ ನರಕ ಯಾತನೆ ಅನುಭವಿಸುತ್ತಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕಮಲಾಪುರ

ಹದಗೆಟ್ಟ ಹೋಗಿರುವ ರಸ್ತೆಯಲ್ಲಿ ದಸ್ತಾಪುರ ಗ್ರಾಮದ ನಿವಾಸಿಗಳು ಕಳೆದ 8 ವರ್ಷದಿಂದ ನರಕ ಯಾತನೆ ಅನುಭವಿಸುತ್ತಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ.

ತಾಲೂಕಿನ ವ್ಯಾಪ್ತಿಯಲ್ಲಿ ಬರುವ ದಸ್ತಾಪುರ ಪ್ರಮುಖ ಹಳ್ಳಿಯಾಗಿದ್ದು. ಐದು ಜನ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದಾರೆ 2500 ಜನ ವಾಸವಾಗಿದ್ದು. 1ರಿಂದ ಎಂಟನೇ ತರಗತಿವರೆಗೆ ಪ್ರಾಥಮಿಕ ಶಾಲೆ ಇದೆ.

ಆದರೆ ದಸ್ತಾಪುರ ಗ್ರಾಮದಿಂದ ದಸ್ತಾಪುರ ಕ್ರಾಸ್ ವರೋಗು ಸಂರ್ಪಕ ಕಲ್ಪಿಸುವ ಸುಮಾರು 2.50 ಕಿಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿಯವರೆಗೂ ಯಾರೊಬ್ಬರೂ ಗಮನಹರಿಸುತ್ತಿಲ್ಲ.

ತಗ್ಗು ಗುಂಡಿಗಳ ರಸ್ತೆಯಲ್ಲಿ ದಯದಿಂದಲೇ ಬಹಳ ಚಲಿಸುವ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಂದು ಅದೆಷ್ಟು ಬಾರಿ ಬಿದ್ದು ಗಾಯಗೊಂಡಿದ್ದರೋ ಲೆಕ್ಕವಿಲ್ಲ.ಟಂಟಂ ಮತ್ತು ಕ್ರೂಜರ್ ಗಳಲ್ಲಿನ ಪ್ರಯಾಣಿಕರು ಕಷ್ಟಕರವಾಗಿದೆ. ರೋಗಿಗಳು ಹಾಗೂ ವಯೋವೃದ್ಧರು ಯಾತನೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ರಸ್ತೆ ದುರವಸ್ಥೆ ಬಗ್ಗೆ ಶಾಸಕರಿಗೆ ಗಮನಕ್ಕೆ ತಂದರೂ ಕೆಲಸವಾಗುತ್ತಿಲ್ಲವೆಂದು ಊರರು ಅಳಲು ತೋಡಿಕೊಂಡಿದ್ದಾರೆ.ತಡಕಲ್ ಗ್ರಾಮದಿಂದ ಕ್ರಾಸ್ ವರೆಗೆ ಹದಗೆಟ್ಟಿರುವ ರಸ್ತೆ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಶಾಸಕರ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರ ಅವಧಿಯಲ್ಲಿ ಶಾಸಕ ಬಸವರಾಜ ಮತ್ತಿಮಡು 1600 ಕೊಟೀ ಕಲ್ಬುರ್ಗಿ ಗ್ರಾಮೀಣ ಕ್ಷೇತ್ರಕ್ಕೆ ತಂದು ಅಭಿವೃದ್ಧಿಪಡಿಸಿದ್ದೇನೆ ಎಂದು ಹೇಳುವ ಕ್ಷೇತ್ರದ ಸಾಸಕರಿಗೆ ನಾವು ಇದೇನಾ ಅಭಿವೃದ್ಧಿ ಎಂದು ಕೇಳಬೇಕಾಗಿದೆ.

- ಮಹೇಶ ಪಸಾರ ಗ್ರಾಮದ ನಿವಾಸಿ