ಹೆಣ್ಣು ಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳಿ; ಹಿತ್ತಲಹಳ್ಳಿ ಸದಾಶಿವ ಶ್ರೀ

| Published : Jan 31 2024, 02:18 AM IST

ಹೆಣ್ಣು ಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳಿ; ಹಿತ್ತಲಹಳ್ಳಿ ಸದಾಶಿವ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು, ಗಂಡು ಇಬ್ಬರೂ ಸಮಾನ, ಬಸವಣ್ಣ ಹೆಣ್ಣಿಗೂ ಕೂಡ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟಂತಹ ಮಹಾಪುರುಷ. ಅದೇ ರೀತಿ ಧರ್ಮದಲ್ಲೂ ಕೂಡ ಹೆಣ್ಣು ಮಕ್ಕಳಿಗೆ ಪೂಜ್ಯತಾ ಭಾವನೆ ಹಾಗೂ ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ.

ಭೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಣಿಗಲ್

ಸನಾತನ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಪೂಜ್ಯತಾ ಭಾವನೆಯಿದೆ. ಅವರನ್ನು ರಕ್ಷಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಹಿತ್ತಲಹಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು,

ಕುಣಿಗಲ್ ಪಟ್ಟಣದ ಜ್ಞಾನಜೋತಿ ಗುರುಕುಲದ ಆವರಣದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಆಶ್ರಯದಲ್ಲಿ ನಡೆದ ಭೇಟಿ ಬಚಾವೋ ಬೇಟಿ ಪಡಾವೋ ಎಂಬ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು,

ಹೆಣ್ಣು, ಗಂಡು ಇಬ್ಬರೂ ಸಮಾನ, ಬಸವಣ್ಣ ಹೆಣ್ಣಿಗೂ ಕೂಡ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟಂತಹ ಮಹಾಪುರುಷ. ಅದೇ ರೀತಿ ಧರ್ಮದಲ್ಲೂ ಕೂಡ ಹೆಣ್ಣು ಮಕ್ಕಳಿಗೆ ಪೂಜ್ಯತಾ ಭಾವನೆ ಹಾಗೂ ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ.

ಪ್ರತಿಯೊಂದು ಧರ್ಮದ ಸಂದೇಶ ಹೆಣ್ಣು ಮಕ್ಕಳ ರಕ್ಷಣೆಯಾಗಿದೆ. ಸರ್ಕಾರ ಆ ವಿಚಾರವಾಗಿ ಜಾಗೃತಿ ಮೂಡಿಸುವುದು ಅವಶ್ಯಕತೆಯಿದೆ ಎಂದರು,

ಬೆಟ್ಟಹಳ್ಳಿ ಮಠದ ಮುಖ್ಯೋಪಾಧ್ಯಾಯ ವಿದ್ವಾನ್ ಕುಮಾರಸ್ವಾಮಿ, ಮಾಜಿ ಪುರಸಭಾ ಸದಸ್ಯ ರೆಹಮಾನ್ ಶರೀಫ್, ಕುಣಿಗಲ್ ಸಿಪಿಐ ನವೀನ ಗೌಡ, ಮುಸ್ಲಿಂ ಧಾರ್ಮಿಕ ಮುಖಂಡ ಮೊಹಮ್ಮದ್ ಅಸ್ಲಾಂ, ಲಿಂಗರಾಜು ನಾಗರಾಜು, ಪರಮಶಿವಯ್ಯ, ವಿಜಯಲಕ್ಷ್ಮೀ, ವಿಶ್ವಕರ್ಮ ಸಮಾಜದ ಕುಮಾರ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿ ಇತರ ಅಧಿಕಾರಿಗಳು ಭಾಗವಹಿಸಿದ್ದರು.

----------

ಕುಣಿಗಲ್ ಪಟ್ಟಣದ ಜ್ಞಾನಜ್ಯೋತಿ ಗುರುಕುಲದಲ್ಲಿ ಭೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮ ನಡೆಯಿತು.