ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಸಮಾಜದಲ್ಲಿ ಎಚ್ಐವಿ ಸೋಂಕಿತರನ್ನು ಪ್ರೀತಿ ವಿಶ್ವಾಸದಿಂದ ನೋಡುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸಂಧ್ಯಾ ತಿಳಿಸಿದರು.ತಾಲೂಕಿನ ಬಿದರಕೋಟೆ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನಷಸ್ ಸೊಸೈಟಿ , ಜಿಲ್ಲಾ ಏಡ್ಸ್ ಪ್ರತಿಬಂದಕ ಮತ್ತು ನಿಯಂತ್ರಣ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೌಹಾರ್ದ ಸಾಂಸ್ಕೃತಿಕ ಕಲಾ ಸಂಘ ಹನಿಯಂಬಾಡಿ ಆಶ್ರಯದಲ್ಲಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.ಎಚ್ಐವಿ ಬಂದಿರುವ ವ್ಯಕ್ತಿಯನ್ನು ಮುಟ್ಟುವುದರಿಂದ ಜೊತೆಯಲ್ಲಿ ಊಟ ಮಾಡುವುದರಿಂದ ಅವರು ಬಳಸಿದ ಶೌಚಾಲಯವನ್ನು ನಾವು ಬಳಸುವುದರಿಂದ ಜೊತೆಯಲ್ಲಿ ಮಾತಾಡುವುದರಿಂದ ಸೋಂಕು ಬರುವುದಿಲ್ಲ. ಅವರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದರು.
ಎಚ್ಐವಿ ಸೋಂಕಿತ ವ್ಯಕ್ತಿಯನ್ನು ನಿಂದಿಸುವುದು, ಕೀಳಾಗಿ ಕಾಣುವುದು ಗ್ರಾಮದಿಂದ ಬಹಿಷ್ಕಾರ ಹಾಕುವುದು ಕಾನೂನಿನ ಅಪರಾಧ. ಅಂತವರಿಗೆ ಶಿಕ್ಷೆ ಮತ್ತು ದಂಡವನ್ನು ತಿಳಿಸಲಾಗುವುದು. ವ್ಯಕ್ತಿ ನಡತೆಯಲ್ಲಿ ಅನುಮಾನವಿದ್ದರೆ ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಕೇಂದ್ರಕ್ಕೆ ಬಂದು ರಕ್ತವನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದರು.ನಂತರ ಹನಿಯಂಬಾಡಿ ಸೌಹಾರ್ಧ ಕಲಾ ಸಂಘದಿಂದ ಹಾಡು ನೃತ್ಯ ಮತ್ತು ಬೀದಿ ನಾಟಕದ ಮೂಲಕ ಎಚ್ಐವಿ ಏಡ್ಸ್ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಪಿಎಚ್ ಸಿಒ ಎಂ.ಕೆ.ಮಮತ, ವಿ.ಎಸ್.ಶಿಲ್ಪ, ಎಚ್‌ಐಒ ಪುರುಷೋತ್ತಮ್, ಆಶಾ ಕಾರ್ಯಕರ್ತರಾದ ಗಾಯಿತ್ರಿ, ರಾಧಮ್ಮ, ಮಂಜುಳಾ, ರೂಪ, ಯಶೋಧ, ಲಕ್ಷ್ಮಿ, ಕಲಾವಿದರಾದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನಿಯಂಬಾಡಿ ಎನ್.ಶೇಖರ, ಟಿ.ಎಂ.ನಾಗರಾಜು, ಡಿ.ಉಮಾಪತಿ, ಎಸ್.ಬಸವರಾಜು, ಎಚ್.ಪಿ.ವೈರಮುಡಿ, ಶ್ವೇತ ,ಚನ್ನಮ್ಮ, ರೋಜ್ ಮೇರಿ ಇದ್ದರು.
ಇಂದು ಸಿ.ಡಿ.ಗಂಗಾಧರ್ ಹುಟ್ಟುಹಬ್ಬ ಆಚರಣೆಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರ ೫೫ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಡಿ.೧೩ರಂದು ವಿವಿಧ ಸಮಾಜ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭಾ ಸದಸ್ಯ ಶ್ರೀಧರ್ ತಿಳಿಸಿದರು.ಅಂದು ಬೆಳಗ್ಗೆ ೮.೩೦ಕ್ಕೆ ನಗರದ ಗಣಪತಿ ದೇವಾಲಯದಲ್ಲಿ ಸಿ.ಡಿ.ಗಂಗಾಧರ್ ಹೆಸರಿನಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿವೆ. ಜಿಲ್ಲಾಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ವಿತರಣೆ, ಆಸ್ಪತ್ರೆಯ ಬಾಣಂತಿಯರಿಗೆ ಮಮತೆಯ ಮಡಿಲು ಮುಖಾಂತರ ಗಂಜಿ ವಿತರಣೆ ಹಾಗೂ ಪ್ರೇರಣಾ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಊಟ ವಿತರಣೆ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಿ.ಡಿ.ಗಂಗಾಧರ್ ಅವರು ಹಂತ ಹಂತವಾಗಿ ಪಕ್ಷದ ಮೂಲಕ ಸಮಾಜದ ಹಲವು ಆಯಾಮಗಳಲ್ಲಿ ಸೇವೆ ಸಲ್ಲಿಸಿದ್ದು, ಇದನ್ನು ಮನಗಂಡ ಪಕ್ಷದ ವರಿಷ್ಠರು ಫೆ.೨೯ರಂದು ಮೈಷುಗರ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ ಎಂದರು.ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಕ್ಕರೆ ಸಚಿವರ ಸಹಕಾರದಿಂದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಸಿ.ಡಿ.ಗಂಗಾಧರ್ ಉತ್ತಮವಾಗಿ ನಡೆಸುತ್ತಿರುವುದಲ್ಲದೆ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಯಾಗುವಂತೆ ಮಾಡಿದ್ದಾರೆ ಎಂದರು. ಗೋಷ್ಠಿಯಲ್ಲಿ ಚಿನಕುರಳಿ ರಮೇಶ್, ಉದಯಕುಮಾರ್, ಚಂದಗಾಲು ವಿಜಯ್‌ಕುಮಾರ್, ವೀಣಾ ಶಂಕರ್, ಸುಬ್ಬಾರೆಡ್ಡಿ ಇದ್ದರು.
;Resize=(128,128))
;Resize=(128,128))