ಸಾರಾಂಶ
ತಾಲೂಕಿನಲ್ಲಿ ಸರ್ಕಾರಿ ಸ್ಪೆಷಾಲಿಟಿ ಆಸ್ಪತ್ರೆ ಬಿಟ್ಟರೆ ಇದೀಗ ಅಲ್ಲೀಪುರ ಗ್ರಾಮದಲ್ಲಿ ತಾವು ಆರಂಭಿಸಿರುವ ತಾಯಿ ಮತ್ತು ಮಗುವಿಗೆ ನೋಡಲು ಸ್ಪೆಷಾಲಿಟಿ ಎರಡನೆಯದು. 24 ಗಂಟೆಗಳು ಆಸ್ಪತ್ರೆಯ ಸೌಲಭ್ಯ ಸಿಗುತ್ತದೆ. ಸ್ಥಳೀಯ ಮತ್ತು ಸುತ್ತಮುತ್ತಲ ಗ್ರಾಮದ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ವಾಣಿಜ್ಯೀಕರಣವಾಗಿಬಿಟ್ಟಿದೆ. ಆದರೆ ಈಗ ಪ್ರಾರಂಭಿಸುತ್ತಿರುವ ಎಂ.ಎಚ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗಾಗದೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಬೇಕು ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.ತಾಲೂಕಿನ ತೊಂಡೆಬಾವಿ ಹೋಬಳಿಯ ಅಲ್ಲೀಪುರ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಎಂ.ಹೆಚ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ನೀಡಿ ಮಾತನಾಡಿದರು.ತಾಲೂಕಿನಲ್ಲಿ 2 ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
2013 ರಲ್ಲಿ ಇದೇ ಅಲ್ಲೀಪುರ ಗ್ರಾಮದ ಚಿಕ್ಕ ಅಂಗಡಿಯಲ್ಲಿ ಈ ಒಂದು ಕ್ಲಿನಿಕ್ ಅನ್ನು ಇದೇ ಗ್ರಾಮದ ಸೈಯದ್ ಅಬ್ಬಾಸ್ ಪ್ರಾರಂಭ ಮಾಡಿ ಸುತ್ತಮುತ್ತಲ ಗ್ರಾಮಸ್ಥರ ಸೇವೆ ಮಾಡುತ್ತಿದ್ದರು. ಇದೀಗ ಅವರ ಪ್ರಯತ್ನದಿಂದ ಎಂ.ಎಚ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡಿ ಸ್ಥಳೀಯ ಮತ್ತು ಸುತ್ತಮುತ್ತಲ ಗ್ರಾಮದ ಜನರ ಆರೋಗ್ಯ ಹಿತದೃಷ್ಟಿಯಿಂದ ಸುಸರ್ಜಿತವಾದ ಕಟ್ಟಡದೊಂದಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಆಸ್ಪತ್ರೆ ತೆರೆದಿದ್ದಾರೆ ಎಂದರು. ವೈದ್ಯ ಸೈಯದ್ ಅಬ್ಬಾಸ್ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಸ್ಪೆಷಾಲಿಟಿ ಆಸ್ಪತ್ರೆ ಬಿಟ್ಟರೆ ಇದೀಗ ಅಲ್ಲೀಪುರ ಗ್ರಾಮದಲ್ಲಿ ತಾವು ಆರಂಭಿಸಿರುವ ತಾಯಿ ಮತ್ತು ಮಗುವಿಗೆ ನೋಡಲು ಸ್ಪೆಷಾಲಿಟಿ ಎರಡನೆಯದು. 24 ಗಂಟೆಗಳು ಆಸ್ಪತ್ರೆಯ ಸೌಲಭ್ಯ ಸಿಗುತ್ತದೆ ಎಂದರು.ಇದೇ ವೇಳೆ ಮುಖಂಡರಾದ ಎಚ್.ಎನ್.ಪ್ರಕಾಶ್ ರೆಡ್ಡಿ , ಗಿರೀಶ್ ರೆಡ್ಡಿ, ಮೀರ್ ಯಾದಗರ್ ಅಲಿ, ಸೈಯದ್ ಅಲಿ ಬಾಕರ್, ಮೌಲಾನಾ ಯೂಷಾಅಬೇದಿ, ಅಲಿ ಅಬ್ಬಾಸ್, ಗುಲ್ಮಾ, ಅಬ್ದುಲ್ಲಾ ಕಾಸಿಂ, ಜಾಹಿದ್ ಅಬ್ಬಾಸ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.