ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ವಿಶೇಷ ಚೇತನರನ್ನು ನೋಡಿಕೊಳ್ಳುವುದು ಕರ್ತವ್ಯ ಎಂದು ಭಾವಿಸದೇ ಅವರನ್ನು ಪ್ರೀತಿಯಿಂದ ನೋಡಿಕೊಂಡು ಅವರಿಗೆ ಸ್ಪಂದಿಸಿದರೆ ಅವರು ಸಂತೋಷವಾಗಿರುತ್ತಾರೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.ಪಟ್ಟಣದ ತೀನಂಶ್ರೀ ಭವನದ ಆವರಣದಲ್ಲಿ ಎಸ್‌ಬಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ಸಾಧನ ಪರಿಕರಗಳ ವಿತರಿಸಿದ ಮಾತನಾಡಿದ ಅವರು, ತಾಲೂಕಿನಲ್ಲಿರುವ ಸು. ೫೭ ವಿಕಲ ಚೇತನ ಮಕ್ಕಳಿಗೆ ಅಗತ್ಯವಿರುವಂತಹ ಸಾಧನ ಪರಿಕರಗಳನ್ನು ವಿತರಣೆ ಮಾಡಲಾಗುತ್ತಿದೆ. ಇಂತಹ ಮಕ್ಕಳನ್ನು ಉತ್ತಮ ರೀತಿಯಲ್ಲಿ ಶುಶ್ರೂಷೆ ಮಾಡುವುದು ಅವರನ್ನು ನೋಡಿಕೊಳ್ಳುವುದು ಪೋಷಕರ ಕರ್ತವ್ಯವಲ್ಲ ಅದು ಅವರ ಪ್ರೀತಿಯಾಗಬೇಕು. ಈ ಮಕ್ಕಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಾವು ಮುಂದಾಗಿದ್ದು ಸಲಕರಣೆಗಳನ್ನು ನೀಡುತ್ತಿದ್ದು ಈ ಮಕ್ಕಳೆ ನಮಗೆ ಮೊದಲ ಆದ್ಯತೆಯಾಗಿದ್ದಾರೆ. ಈ ರೀತಿಯಲ್ಲಿ ವಿಕಲಚೇತನರಾಗುವುದಕ್ಕೆ ಯಾರು ಕಾರಣರಲ್ಲ ಅದು ಪೃಕೃತಿಗೆ ಬಿಟ್ಟಿದ್ದು ಇಂತಹವರನ್ನು ನೋಡಿಕೊಳ್ಳುವುದು ಪೋಷಕರು ಹಾಗೂ ಸಮಾಜ ಮತ್ತು ಇಲಾಖೆಗಳು ಸೇರಿದಂತೆ ನಮ್ಮ ಜವಾಬ್ದಾರಿಯಾಗಿದೆ ಅವರೊಂದಿಗೆ ನಾವು ಪ್ರೀತಿಯಿಂದ ವರ್ತಿಸಿದರೆ ಅವರಿಗೆ ತುಂಬಾ ಖುಷಿಯಾಗಿರುತ್ತಾರೆ ಅದ್ದರಿಂದ ಅಂತಹವರೊಂದಿಗೆ ಸಮಾಜ ಯಾವಾಗಲು ಇರಬೇಕು ಎಂದರು. ಈ ಸಂದರ್ಭದಲ್ಲಿ ಪುರಸಭಾದ್ಯಕ್ಷ ಸಿ.ಎಚ್.ದಯಾನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಸಿ.ಎಸ್, ಸಿಡಿಪಿಒ ಹೊನ್ನಪ್ಪ, ನಿವೃತ್ತ ತಹಸೀಲ್ದಾರ್ ಲಕ್ಷ್ಮಣಪ್ಪ, ತೀರ್ಥಪುರ ಕುಮಾರ್, ಜಾನಪದ ಅಕಾಡಮಿ ಸದಸ್ಯ ಮಲ್ಲಿಕಾರ್ಜುನಕೆಂಕೆರೆ , ಶಿಕ್ಷಕಿ ಶಶಿಕಲಾ ಸೇರಿದಂತೆ ಮತ್ತಿತರು ಇದ್ದರು.