ಸಾರಾಂಶ
ಕುಣಿಗಲ್ ತಾಲೂಕಿನ ಗುನ್ನಾಗರೆ ಗ್ರಾಮದಲ್ಲಿ ಬೆಂಗಳೂರಿನ ಜಿಕೆವಿಕೆ ವಿದ್ಯಾರ್ಥಿಗಳು ಪಶುಗಳಿಗೆ ಚಿಕಿತ್ಸೆ ನೀಡುವ ಮತ್ತು ರೋಗಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಗುನ್ನಾಗರೆ ಗ್ರಾಮದಲ್ಲಿ ಬೆಂಗಳೂರಿನ ಜಿಕೆವಿಕೆ ವಿದ್ಯಾರ್ಥಿಗಳು ಪಶುಗಳಿಗೆ ಚಿಕಿತ್ಸೆ ನೀಡುವ ಮತ್ತು ರೋಗಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಗ್ರಾಮದ ಪಶು ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ರೈತರಿಗೆ ಹಸುಗಳ ನಿರ್ವಹಣೆ ಮತ್ತು ಅವುಗಳ ತಳಿ ಉತ್ಪಾದಿಸುವ ಹಾಲು ಹಾಗೂ ಕೊಬ್ಬಿನ ಅಂಶ ರೋಗ ಸೇರಿದಂತೆ ಮೇವುಗಳ ಬೆಳವಣಿಗೆ ಮತ್ತು ಪೋಷಣೆ ವಿಚಾರವಾಗಿ ಹಲವಾರು ಮಾಹಿತಿ ನೀಡಿದರು. ಗ್ರಾಮದಿಂದ ನೂರಕ್ಕೂ ಹೆಚ್ಚು ರಾಸುಗಳನ್ನು ಹಲವಾರು ರೈತರು ಈ ತಪಾಸಣೆಯಲ್ಲಿ ಭಾಗವಹಿಸುವ ಮುಖಾಂತರ ಚಿಕಿತ್ಸೆ ಜೊತೆಗೆ ಹಸುಗಳಿಗೆ ನೀಡಬೇಕಾದ ಔಷಧಿಗಳನ್ನು ಉಚಿತವಾಗಿ ಪಡೆದರು.
ಬೆಂಗಳೂರು ಪಶು ಮಹಾವಿದ್ಯಾಲಯ, ಪಶು ಸಂಗೋಪನ ಇಲಾಖೆ, ಹಾಗೂ ಸ್ಥಳೀಯ ಪಶು ವೈದ್ಯರ ಸಹಕಾರದಿಂದ ಪಶುಗಳ ಬಂಜೆತನ, ಕಾಲುಬಾಯಿ ಜ್ವರ ಗಾಯಗಳ ನಿರ್ವಹಣೆ ಹಾಗೂ ಹಾಲು ಉತ್ಪಾದನೆಗೆ ವಹಿಸಬೇಕಾದ ಹಲವಾರು ಕ್ರಮಗಳ ಬಗ್ಗೆ ಸ್ಥಳೀಯ ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಾಣಿ ಪ್ರಸೂತಿ ತಜ್ಞರಾದ ಪ್ರಜ್ಞಾ, ಹುಸೇನ್ , ಸ್ಥಳೀಯ ವೈದ್ಯರಾದ ಡಾಕ್ಟರ್ ವೆಂಕಟೇಶ್ ಬಾಬು ತುಮಕೂರು ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ , ಸಾಯಿ ಕುಮಾರ್ ನಾಗೇಶ್, ಡಾ. ಮಂಜುಳಾ ಸದಸ್ಯ ರಂಗಪ್ಪ ಸೇರಿದಂತೆ ಹಲವಾರು ಸ್ಥಳೀಯ ರೈತರು ಇದ್ದರು.