ಸಾರಾಂಶ
ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ‘ಮಾನಸಿಕ ಸಮಸ್ಯೆಗಳ ಬೃಹತ್ ಚಿಕಿತ್ಸಾ ಶಿಬಿರ’ವನ್ನು ಕಾಯಚಿಕಿತ್ಸಾ ಹಾಗೂ ಮಾನಸ ರೋಗ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ವಿಭಾಗದ ವತಿಯಿಂದ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ‘ಮಾನಸಿಕ ಸಮಸ್ಯೆಗಳ ಬೃಹತ್ ಚಿಕಿತ್ಸಾ ಶಿಬಿರ’ವನ್ನು ಕಾಯಚಿಕಿತ್ಸಾ ಹಾಗೂ ಮಾನಸ ರೋಗ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ವಿಭಾಗದ ವತಿಯಿಂದ ನಡೆಸಲಾಯಿತು.ಈ ಸಂದರ್ಭ ವಿಭಾಗದ ಉಸ್ತುವಾರಿ ಮುಖ್ಯಸ್ಥ ಡಾ. ವೀರಕುಮಾರ ಕೆ., ಹಿರಿಯ ವೈದ್ಯಾಧಿಕಾರಿಗಳಾದ ಡಾ. ನಿಶಾಂತ್ ಪೈ, ಆಸ್ಪತ್ರೆಯ ವ್ಯವಸ್ಥಾಪಕರಾದ ನಾಗೇಶ್ ಸಿ.ಎಚ್. ಹಾಗೂ ಎಲ್ಲ ವಿಭಾಗದ ಪ್ರಾಧ್ಯಾಪಕ ವೃಂದ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಈ ಬೃಹತ್ ಶಿಬಿರವು ಡಿ.16ರಿಂದ 21ರ ವರೆಗೆ ನಡೆಯಲಿದ್ದು, ಉದ್ವೇಗ, ಖಿನ್ನತೆ, ನಿದ್ರಾಹೀನತೆ, ಅನಿಯಮಿತ ಮದ್ಯಸೇವನೆ ಮುಂತಾದ ಮಾನಸಿಕ ತೊಂದರೆಗಳಿಗೆ ಉಚಿತ ನೋಂದಣಿ ಹಾಗೂ ತಪಾಸಣೆಯು ನಡೆಯಲಿದ್ದು, ರಿಯಾಯಿತಿ ದರದಲ್ಲಿ ರಕ್ತ ಪರೀಕ್ಷೆ, ಔಷಧಿ ವಿತರಣೆ ಹಾಗೂ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.